ಪಿತನಳಿದನೆಂದಳಲಿ ತಣ್ಣೀರ ಕರೆಯೆಲೋ
ಮತಿಗೆಟ್ಟ ಕಾಮಾಂಧ ಸಲ್ಲಾದುದಕೆ ನಗಲೋ
ಗತಿಯಿರದೆ ಗೋಳಾಡಿ ಗುರಿಸಿಗದೆ ತೊಳಲಾಡಿ
ಧೃತಿಗೆಟ್ಟ ಈ ತನುವ ಧಾವಾಗ್ನಿಯಲಿ ಸುಡಲೋ
ಧಾವಾಗ್ನಿಯಲಿ ಸುಡಲೋ
ಮಲ್ಲಿಕಾರ್ಜುನ
ಮಲ್ಲಿಕಾರ್ಜುನ ನಿನ್ನ ಮೌನವದು ಮುಗಿದಿಲ್ಲ
ನಲ್ಲೆ ಇವಳೆಂದರಿತು ನಲ್ಮೆಯಲಿ ಒಲಿದಿಲ್ಲ
ಎಲ್ಲರಿಗು ಹೊರತಾಗಿ ತಲ್ಲಣಿಸುವೇ ಬದುಕು
ಇಲ್ಲಳಿದು ಕೈವಲ್ಯ ಪದ ಗಳಿಸಲೇಬೇಕು ಗಳಿಸಲೇಬೇಕು ಗಳಿಸಲೇಬೇಕು
ಪಿತನಳಿದನೆಂದಳಲಿ ತಣ್ಣೀರ ಕರೆಯೆಲೋ
ಮತಿಗೆಟ್ಟ ಕಾಮಾಂಧ ಸಲ್ಲಾದುದಕೆ ನಗಲೋ
ಗತಿಯಿರದೆ ಗೋಳಾಡಿ ಗುರಿಸಿಗದೆ ತೊಳಲಾಡಿ
ಧೃತಿಗೆಟ್ಟ ಈ ತನುವ ಧಾವಾಗ್ನಿಯಲಿ ಸುಡಲೋ
ಧಾವಾಗ್ನಿಯಲಿ ಸುಡಲೋ
ಮಲ್ಲಿಕಾರ್ಜುನ
ಮಲ್ಲಿಕಾರ್ಜುನ ನಿನ್ನ ಮೌನವದು ಮುಗಿದಿಲ್ಲ
ನಲ್ಲೆ ಇವಳೆಂದರಿತು ನಲ್ಮೆಯಲಿ ಒಲಿದಿಲ್ಲ
ಎಲ್ಲರಿಗು ಹೊರತಾಗಿ ತಲ್ಲಣಿಸುವೇ ಬದುಕು
ಇಲ್ಲಳಿದು ಕೈವಲ್ಯ ಪದ ಗಳಿಸಲೇಬೇಕು ಗಳಿಸಲೇಬೇಕು ಗಳಿಸಲೇಬೇಕು