ನಮ್ಮ ಕುರಿತು


ಕನ್ನಡದ ಸಮಸ್ತ ಬಂಧುಗಳಿಗೆ,.. ನಮ್ಮ ನಿಮ್ಮೆಲ್ಲರ ಕನ್ನಡ ಫಿಲ್ಮ್ ಲಿರಿಕ್ಸ್.ಕಾಮ್ ಜಾಲತಾಣಕ್ಕೆ ಆತ್ಮೀಯವಾದ ಸ್ವಾಗತ. ಈ ಜಾಲತಾಣದಲ್ಲಿ ಕನ್ನಡ ಹಾಡುಗಳ ಸಾಹಿತ್ಯವನ್ನ ಕನ್ನಡದಲ್ಲೇ ಕಣ್ಣುತುಂಬಿಕೊಳ್ಳುವ ಅವಕಾಶವಿದೆ. ಕನ್ನಡ ಭಾಷೆ ಸುಂದರ, ಸುಮಧುರ, ಸುಲಲಿತ, ಅದರಲ್ಲೂ ಹಾಡುಗಳು ಆ ಪದಗಳ ಜೋಡಣೆಯನ್ನು ನೋಡ್ತಾ ಇದ್ರೆ, ಧ್ವನಿ ತಾನಾಗೇ ಹೊರಹೊಮ್ಮುತ್ತೆ. ಹಾಡುಗಳು ಮನಸ್ಸಿನ ಕನ್ನಡಿ ಇದ್ದಂತೆ. ನಮ್ಮ ಸಂತೋಷ, ಬೇಸರ, ಬಿಗುಮಾನ, ಬಿನ್ನಾಣ ಎಲ್ಲದಕ್ಕೂ ಹಾಡುಗಳು ಉಂಟು. ಅರ್ಥವೇ ಆಗದ ಮನಸ್ಸಿನ ತಳಮಳ, ನಗು, ಅಳು ಎಲ್ಲದರ ಪ್ರತಿಬಿಂಬವೇ ಹಾಡಿನ ಸಾಲುಗಳು, ಗೊತ್ತೇ ಆಗದೆ ಕಣ್ಣಂಚಲ್ಲಿ ನೀರು ತರಿಸುತ್ತವೆ, ಮೊಗದಲ್ಲಿ ನಗು ಅರಳಿಸುತ್ತವೆ, ಅಳುವ ಕಂದನನ್ನು ಸುಮ್ಮನಾಗಿಸಿ ಬಿಡುತ್ತವೆ, ಅದೇ ಹಾಡಿನ ಗಮ್ಮತ್ತು.

ಜಾಲತಾಣಗಳಲ್ಲಿ ಒಂದಷ್ಟು ಹಾಡುಗಳು ಕನ್ನಡದಲ್ಲೇ ಸಿಕ್ಕರೂ ಇನ್ನಷ್ಟು ಕಂಗ್ಲೀಷ್’ನ ರೂಪದ್ಲಲಿವೆ. ಕನ್ನಡದ ಹಿಂದಿನ, ಇಂದಿನ ಹಾಗು ಮುಂದಿನ ಎಲ್ಲಾ ಸಿನಿಮಾ ಗೀತೆಗಳು ಕನ್ನಡದಲ್ಲೇ ಸಿಕ್ಕರೆ ಚೆಂದ ಅಲ್ವಾ! ಕನ್ನಡದ ಗೀತೆಗಳ ಮೆರಗನ್ನು, ಸೊಬಗನ್ನು, ಸೊಗಡನ್ನು ಕನ್ನಡದಲ್ಲೇ ಅನುಭವಿಸೋಣ. ಕನ್ನಡ ಕಸ್ತೂರಿ ಅಂತ ಹೇಳ್ತೀವಲ್ವಾ, ಹಾಗಾದರೆ ಆ ಪರಿಮಳ ಕನ್ನಡದ ಅಕ್ಷರಗಳ ಮೂಲಕವೇ ನಮ್ಮ ಮನ ಮುಟ್ಟಲಿ ಹಾಗು ತಟ್ಟಲಿ.

ಹಾಡಿನ ಸೆಲೆ ಭಾವದ ಅಲೆ ಸಂಬಂಧಗಳ ಬೆಲೆ ಎಲ್ಲದರ ಬೀಡೆ ಈ ನಮ್ಮ KFL. ಇಲ್ಲಿ ಹಾಡುಗಳ ಸಾಹಿತ್ಯವಲ್ಲದೆ ಭಾವನೆಗಳ blogspot ಕೂಡ ಉಂಟು. ಹಾಡಿನ ಬಗೆಗಿನ ನಿಮ್ಮ ಭಾವವನ್ನು ಬರೆದು ನಮ್ಮೊಂದಿಗೆ ಹಂಚಿಕೊಳ್ಳಬಹುದು. ಕನ್ನಡವನ್ನು ಟಂಕಿಸಿ ನಿಮ್ಮ ಮುಂದಿಡುವಾಗ ತಪ್ಪುಗಳಿದ್ದಲ್ಲಿ ನಮ್ಮನ್ನು ಸರಿ ಪಡಿಸಲು ನೀವಿದ್ದೀರಲ್ಲಾ..?

ಕನ್ನಡ ಹಾಡಿನ ಬಗೆಗಿನ ಆಪಾರ ಅಭಿಮಾನ ಹೊಂದಿದ ನಮ್ಮ ತಂಡ ಕಷ್ಟಪಟ್ಟು… ಅಲ್ಲ ಇಷ್ಟಪಟ್ಟು ನಿಮ್ಮ ಮುಂದೆ ಕನ್ನಡ ಚಲನಚಿತ್ರದ ಸಾಹಿತ್ಯದ ಗಂಟನ್ನು ಇಟ್ಟಿದೆ, ಇದರಿಂದ ಕನ್ನಡದ ಗಂಟು ಭದ್ರವಾಗುತ್ತದೆ ಮತ್ತು ಕನ್ನಡಿಗರ ನಂಟು ಇನ್ನಷ್ಟು ಬೆಳೆಯುತ್ತದೆ ಏನ್ ಅಂತೀರಾ? ಕನ್ನಡ ನಮ್ಮದು, ನಿಮ್ಮದು ನಮ್ಮ ಮುಂದಿನ ಪೀಳಿಗೆಯದು. ಬನ್ನಿ ಕನ್ನಡವನ್ನು ಬಳಸೋಣ, ಬೆಳೆಸೋಣ ಇದನ್ನೇ ಎಲ್ಲರಿಗೂ ಉಣ ಬಡಿಸೋಣ.

ಇಂತಿ ನಿಮ್ಮ
ಕನ್ನಡ ಫಿಲ್ಮ್ ಲಿರಿಕ್ಸ್ ತಂಡ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ