ವಿಧಿ ವಿಪರೀತ ವಿಧಿ ಆಘಾತ
ವಿಧಿ ವಿಲಾಸವೆನೆ ಇದೇನಹಾ
ವಿಧಿ ವಿಲಾಸವೆನೆ ಇದೇನಹಾ
ಸಪ್ತ ದ್ವೀಪ ವಸುಂಧರೆ ಆಳಿದ
ಸಾರ್ವಭೌಮ ಶ್ರೀ ಹರಿಶ್ಚಂದ್ರನೇ
ಕಾಲಕರ್ಮದಲಿ ಅನುಚರಗಣ
ಮಸಣವ ಕಾಯುವನಾದನೇ
ಆ ಮಹಾತ್ಮನಿಗೆ ಅನುಚರಗಣ
ಈ ಭೂತ ಪ್ರೇತ ಪಿಶಾಚಿಕಣಾ
ಆ…ಆ…ಆ…..
|| ವಿಧಿ ವಿಪರೀತ ವಿಧಿ ಆಘಾತ
ವಿಧಿ ವಿಲಾಸವೆನೆ ಇದೇನಹಾ
ವಿಧಿ ವಿಲಾಸವೆನೆ ಇದೇನಹಾ…||
ಕೈತುಂಬ ನವರತ್ನ ರಾಶಿಯಾ ಸತತ
ದಾನವನು ಮಾಡಿದ ದಾತೆಯಮ್ಮ
ಆತ್ಮ ಸಂತತಿಯಂತೆ ಸಕಲ ದೀನರನೆಲ್ಲಾ
ಆದರಿಸಿದಾ ತಾಯಿ ಅನ್ನಪೂರ್ಣೆ…
ಅಂಥ ಚಂದ್ರಮತಿ ದೇವಿ ಅಕಟಾ ಈಗಿಂದು..
ಮುಷ್ಟಿಯ ಕೂಳಿಗೆ ಕೈಚಾಚೋ ಗತಿ ಬಂತೆ…
ಹಂಸ ತೂಲಿಕಾ ಕಲ್ಪದಲ್ಲಿ
ಹಾಯಿ ಗಾನದ ಇಂಪಿನಲಿ
ಪವಡಿಸುವ ಯುವರಾಜನಿಂದು
ಮಲಗಿರುವನೇ ನೆಲದ ಮೇಲೆ
ಚತುರಂಭೋಧಿಪರೀತ ಸರ್ವ ಭೂಮಿಯಂ
ತಾಂ ಶಾಸಿಸಲ್ ರತ್ನರಾಜಿತ ಸದ್ದಂಡ ಧರಾಧರೇಶ
ಕರದೋಳ್ ತಾನಂತ ಕೋಲೊಂದರಿಂ
ಚಿತೆಯಂ ತಳ್ಳುತ ರುಧ್ರಭೂಮಿಲಿಹನಯ್ಯೋ
ಎಂಥ ವೈಚಿತ್ರವೋ….
ಮಾಯಾ ಪ್ರಪಂಚದ ಮರ್ಮವ ಮೆರೆತು
ಮಾನಿನಿ ಮಕ್ಕಳು ಭೋಗ ಭಾಗ್ಯಗಳು
ನನದು ನನದೆಂದು ಮರೆದಾಡಿದ
ಈ ಶರೀರವೀಗ ಚಿತೆಯ ಮೇಗಡೆ
ಉರಿದು ಬೇಯುವಾಗ
ಅದು ಮಣ್ಣು ಬೆರೆಯುವಾಗ
ಮಾನಿನಿ ಎಲ್ಲೋ ಮಕ್ಕಲ್ಲೋ ಎಲ್ಲೋ
ಮನುಜಾ ನಿನ್ನ ಮೃತ್ಯು ಗೆದ್ದರೇನೋ
ನಿನ ಕೂಡ ಬಂದರೇನೋ…
|| ವಿಧಿ ವಿಪರೀತ ವಿಧಿ ಆಘಾತ
ವಿಧಿ ವಿಲಾಸವೆನೆ ಇದೇನಹಾ
ವಿಧಿ ವಿಲಾಸವೆನೆ ಇದೇನಹಾ…||
ವಿಧಿ ವಿಪರೀತ ವಿಧಿ ಆಘಾತ
ವಿಧಿ ವಿಲಾಸವೆನೆ ಇದೇನಹಾ
ವಿಧಿ ವಿಲಾಸವೆನೆ ಇದೇನಹಾ
ಸಪ್ತ ದ್ವೀಪ ವಸುಂಧರೆ ಆಳಿದ
ಸಾರ್ವಭೌಮ ಶ್ರೀ ಹರಿಶ್ಚಂದ್ರನೇ
ಕಾಲಕರ್ಮದಲಿ ಅನುಚರಗಣ
ಮಸಣವ ಕಾಯುವನಾದನೇ
ಆ ಮಹಾತ್ಮನಿಗೆ ಅನುಚರಗಣ
ಈ ಭೂತ ಪ್ರೇತ ಪಿಶಾಚಿಕಣಾ
ಆ…ಆ…ಆ…..
|| ವಿಧಿ ವಿಪರೀತ ವಿಧಿ ಆಘಾತ
ವಿಧಿ ವಿಲಾಸವೆನೆ ಇದೇನಹಾ
ವಿಧಿ ವಿಲಾಸವೆನೆ ಇದೇನಹಾ…||
ಕೈತುಂಬ ನವರತ್ನ ರಾಶಿಯಾ ಸತತ
ದಾನವನು ಮಾಡಿದ ದಾತೆಯಮ್ಮ
ಆತ್ಮ ಸಂತತಿಯಂತೆ ಸಕಲ ದೀನರನೆಲ್ಲಾ
ಆದರಿಸಿದಾ ತಾಯಿ ಅನ್ನಪೂರ್ಣೆ…
ಅಂಥ ಚಂದ್ರಮತಿ ದೇವಿ ಅಕಟಾ ಈಗಿಂದು..
ಮುಷ್ಟಿಯ ಕೂಳಿಗೆ ಕೈಚಾಚೋ ಗತಿ ಬಂತೆ…
ಹಂಸ ತೂಲಿಕಾ ಕಲ್ಪದಲ್ಲಿ
ಹಾಯಿ ಗಾನದ ಇಂಪಿನಲಿ
ಪವಡಿಸುವ ಯುವರಾಜನಿಂದು
ಮಲಗಿರುವನೇ ನೆಲದ ಮೇಲೆ
ಚತುರಂಭೋಧಿಪರೀತ ಸರ್ವ ಭೂಮಿಯಂ
ತಾಂ ಶಾಸಿಸಲ್ ರತ್ನರಾಜಿತ ಸದ್ದಂಡ ಧರಾಧರೇಶ
ಕರದೋಳ್ ತಾನಂತ ಕೋಲೊಂದರಿಂ
ಚಿತೆಯಂ ತಳ್ಳುತ ರುಧ್ರಭೂಮಿಲಿಹನಯ್ಯೋ
ಎಂಥ ವೈಚಿತ್ರವೋ….
ಮಾಯಾ ಪ್ರಪಂಚದ ಮರ್ಮವ ಮೆರೆತು
ಮಾನಿನಿ ಮಕ್ಕಳು ಭೋಗ ಭಾಗ್ಯಗಳು
ನನದು ನನದೆಂದು ಮರೆದಾಡಿದ
ಈ ಶರೀರವೀಗ ಚಿತೆಯ ಮೇಗಡೆ
ಉರಿದು ಬೇಯುವಾಗ
ಅದು ಮಣ್ಣು ಬೆರೆಯುವಾಗ
ಮಾನಿನಿ ಎಲ್ಲೋ ಮಕ್ಕಲ್ಲೋ ಎಲ್ಲೋ
ಮನುಜಾ ನಿನ್ನ ಮೃತ್ಯು ಗೆದ್ದರೇನೋ
ನಿನ ಕೂಡ ಬಂದರೇನೋ…
|| ವಿಧಿ ವಿಪರೀತ ವಿಧಿ ಆಘಾತ
ವಿಧಿ ವಿಲಾಸವೆನೆ ಇದೇನಹಾ
ವಿಧಿ ವಿಲಾಸವೆನೆ ಇದೇನಹಾ…||
Vidhi Vipareetha song lyrics from Kannada Movie Sathya Harishchandra starring Dr Rajkumar, Udayakumar, K S Ashwath, Lyrics penned by Hunasuru Krishna Murthy Sung by Ghantasala, P Leela, Music Composed by Pendyala Nageshwara Rao, film is Directed by Hunasuru Krishna Murthy and film is released on 1965