ಮಹಾರಾಜ ರಾಜಶ್ರೀ ಭುವನ ಭವ್ಯ ಭಾಗ್ಯಶ್ರೀ
ಹರಿರಾಯರ ಗಂಡ ಗಂಡ ಭೇರುಂಡಾ
ಹೇಹೇಹೇ... ಶ್ರೀ ಕೃಷ್ಣದೇವರಾಯರ
ಅಮೃತ ಹಸ್ತ ಸನ್ಮಾನಿತ
ಪಕ್ಷಿಧಾಮ ಕ್ಷೇತ್ರ ಕ್ಷೇಮ ಢಣಾಯಕ
ಅನ್ನದಾನಿ ಧರ್ಮಪ್ಪನ ಮಗ ಗುರುವಪ್ಪ
ಪೊನ್ನದಾನಿ ಗುರವಪ್ಪನಾ ಮಗ ಕನಕಪ್ಪ
ಪುಣ್ಯದಾನಿ ಕನಕಪ್ಪನಾ ಮೊಮ್ಮಗ ಸೂರಪ್ಪ...
ಸೂರಪ್ಪ.... ಸೂರಪ್ಪ ಸುಗುಣಶೀಲ ಸೂರಪ್ಪಾ
ನಿನ್ನ ಹೃದಯಾರವಿಂದಕ್ಕೆ ಈ ಕುರುಡು
ಕವಿಯ ಕೋಟಿ ಶರಣಪ್ಪಾ
ಆಕಾಶದಾ ಆರದ ದೀಪ ಸೂರಪ್ಪ
ಹತ್ತೂರಿಗೂ ಮುದ್ದಿನ ಮೊಮ್ಮಗ ನೀನಪ್ಪ
ಹಣ್ಣೆಲೇ ನಾನು ಚಿಗುರೆಲೆ ನೀನು
ನಿನ್ನ ನೆರಳಿನಲಿ ನಾನು ಇರಲೇನು
ಉದುರಿ ಹೋಗುವ ಘಳಿಗೆವರೆಗು
ಚಿಂತೆ ಮರೆಯುವೆನು ನಿನ್ನ ನೆರಳ ನೆನೆಯುವೆನು
|| ಆಕಾಶದಾ ಆರದ ದೀಪ ಸೂರಪ್ಪ
ಹತ್ತೂರಿಗೂ ಮುದ್ದಿನ ಮೊಮ್ಮಗ ನೀನಪ್ಪ ||
ಪ್ರತಿ ಧ್ಯಾನದ ಪ್ರತಿ ಕಣದಲಿ
ತಿನ್ನೋರ ಹೆಸರಿದೆ ಬಲ್ಲೆಯ
ನನ್ನ ಹೆಸರಿನ ಅನ್ನ ಕಾಣೆನು
ದಯೇ ತೋರಿ ಬರೆವೆಯ
ನನಗೆ ವಯಸ್ಸಿಲ್ಲ ಮನಸು ಮುದಿಯಲ್ಲಾ
ಕಣ್ಣು ಕಾಣಲ್ಲಾ ಕಂಠ ಹಿಂಗಿಲ್ಲಾ
ಮಣ್ಣು ಸೇರುವ ಘಳಿಗೆವರೆಗೂ
ಹಸಿವ ಮರೆಯುವೆನು
ನಿನ್ನ ಅನ್ನ ನೆನೆಯುವೆನು. .
|| ಆಕಾಶದಾ ಆರದ ದೀಪ ಸೂರಪ್ಪ
ಹತ್ತೂರಿಗೂ ಮುದ್ದಿನ ಮೊಮ್ಮಗ ನೀನಪ್ಪ ||
ಅಳುತಾ ಹುಟ್ಟಿ ನಗುತಾ ಬೆಳೆಯೋ
ಮಕ್ಕಳು ಉಂಟು ಜಗದಲಿ
ಹುಟ್ಟೋ ದಿವಸ ಬಂದಾ ಅಳುವು
ನಿಂತಿಲ್ಲಾ ನನ್ನ ಬಾಳಲಿ
ಅಭಯ ಹಸ್ತವಿರೋ ರಾಜನಂತಿರುವೇ
ದಯವ ತೋರಿಸುವ ದೇವರಾಗಿರುವೇ
ತಂದೆ ನೀನೆ ತಾಯಿ ನೀನೆ..ನೀನೇ ನನ್ನ ಮಗ
ತಲೆ ಕಾಯೋ ಮೊಮ್ಮಗ. . .
ಆಕಾಶದಾ ಆರದ ದೀಪ ಸೂರಪ್ಪ
ಹತ್ತೂರಿಗೂ ಮುದ್ದಿನ ಮೊಮ್ಮಗ ನೀನಪ್ಪಾ
ಹಣ್ಣಲೇ ನಾನು ಚಿಗುರೆಲೆ ನೀನು
ನಿನ್ನ ನೆರಳಿನಲಿ ನಾನು ಇರಲೇನು
ಉದುರಿ ಹೋಗುವ ಘಳಿಗೆವರೆಗೂ
ಚಿಂತೆ ಮರೆಯುವೆನು ನಿನ್ನ ನೆರಳ ನೆನೆಯುವೆನೂ
|| ಆಕಾಶದಾ ಆರದ ದೀಪ ಸೂರಪ್ಪ
ಹತ್ತೂರಿಗೂ ಮುದ್ದಿನ ಮೊಮ್ಮಗ ನೀನಪ್ಪ ||
ಮಹಾರಾಜ ರಾಜಶ್ರೀ ಭುವನ ಭವ್ಯ ಭಾಗ್ಯಶ್ರೀ
ಹರಿರಾಯರ ಗಂಡ ಗಂಡ ಭೇರುಂಡಾ
ಹೇಹೇಹೇ... ಶ್ರೀ ಕೃಷ್ಣದೇವರಾಯರ
ಅಮೃತ ಹಸ್ತ ಸನ್ಮಾನಿತ
ಪಕ್ಷಿಧಾಮ ಕ್ಷೇತ್ರ ಕ್ಷೇಮ ಢಣಾಯಕ
ಅನ್ನದಾನಿ ಧರ್ಮಪ್ಪನ ಮಗ ಗುರುವಪ್ಪ
ಪೊನ್ನದಾನಿ ಗುರವಪ್ಪನಾ ಮಗ ಕನಕಪ್ಪ
ಪುಣ್ಯದಾನಿ ಕನಕಪ್ಪನಾ ಮೊಮ್ಮಗ ಸೂರಪ್ಪ...
ಸೂರಪ್ಪ.... ಸೂರಪ್ಪ ಸುಗುಣಶೀಲ ಸೂರಪ್ಪಾ
ನಿನ್ನ ಹೃದಯಾರವಿಂದಕ್ಕೆ ಈ ಕುರುಡು
ಕವಿಯ ಕೋಟಿ ಶರಣಪ್ಪಾ
ಆಕಾಶದಾ ಆರದ ದೀಪ ಸೂರಪ್ಪ
ಹತ್ತೂರಿಗೂ ಮುದ್ದಿನ ಮೊಮ್ಮಗ ನೀನಪ್ಪ
ಹಣ್ಣೆಲೇ ನಾನು ಚಿಗುರೆಲೆ ನೀನು
ನಿನ್ನ ನೆರಳಿನಲಿ ನಾನು ಇರಲೇನು
ಉದುರಿ ಹೋಗುವ ಘಳಿಗೆವರೆಗು
ಚಿಂತೆ ಮರೆಯುವೆನು ನಿನ್ನ ನೆರಳ ನೆನೆಯುವೆನು
|| ಆಕಾಶದಾ ಆರದ ದೀಪ ಸೂರಪ್ಪ
ಹತ್ತೂರಿಗೂ ಮುದ್ದಿನ ಮೊಮ್ಮಗ ನೀನಪ್ಪ ||
ಪ್ರತಿ ಧ್ಯಾನದ ಪ್ರತಿ ಕಣದಲಿ
ತಿನ್ನೋರ ಹೆಸರಿದೆ ಬಲ್ಲೆಯ
ನನ್ನ ಹೆಸರಿನ ಅನ್ನ ಕಾಣೆನು
ದಯೇ ತೋರಿ ಬರೆವೆಯ
ನನಗೆ ವಯಸ್ಸಿಲ್ಲ ಮನಸು ಮುದಿಯಲ್ಲಾ
ಕಣ್ಣು ಕಾಣಲ್ಲಾ ಕಂಠ ಹಿಂಗಿಲ್ಲಾ
ಮಣ್ಣು ಸೇರುವ ಘಳಿಗೆವರೆಗೂ
ಹಸಿವ ಮರೆಯುವೆನು
ನಿನ್ನ ಅನ್ನ ನೆನೆಯುವೆನು. .
|| ಆಕಾಶದಾ ಆರದ ದೀಪ ಸೂರಪ್ಪ
ಹತ್ತೂರಿಗೂ ಮುದ್ದಿನ ಮೊಮ್ಮಗ ನೀನಪ್ಪ ||
ಅಳುತಾ ಹುಟ್ಟಿ ನಗುತಾ ಬೆಳೆಯೋ
ಮಕ್ಕಳು ಉಂಟು ಜಗದಲಿ
ಹುಟ್ಟೋ ದಿವಸ ಬಂದಾ ಅಳುವು
ನಿಂತಿಲ್ಲಾ ನನ್ನ ಬಾಳಲಿ
ಅಭಯ ಹಸ್ತವಿರೋ ರಾಜನಂತಿರುವೇ
ದಯವ ತೋರಿಸುವ ದೇವರಾಗಿರುವೇ
ತಂದೆ ನೀನೆ ತಾಯಿ ನೀನೆ..ನೀನೇ ನನ್ನ ಮಗ
ತಲೆ ಕಾಯೋ ಮೊಮ್ಮಗ. . .
ಆಕಾಶದಾ ಆರದ ದೀಪ ಸೂರಪ್ಪ
ಹತ್ತೂರಿಗೂ ಮುದ್ದಿನ ಮೊಮ್ಮಗ ನೀನಪ್ಪಾ
ಹಣ್ಣಲೇ ನಾನು ಚಿಗುರೆಲೆ ನೀನು
ನಿನ್ನ ನೆರಳಿನಲಿ ನಾನು ಇರಲೇನು
ಉದುರಿ ಹೋಗುವ ಘಳಿಗೆವರೆಗೂ
ಚಿಂತೆ ಮರೆಯುವೆನು ನಿನ್ನ ನೆರಳ ನೆನೆಯುವೆನೂ
|| ಆಕಾಶದಾ ಆರದ ದೀಪ ಸೂರಪ್ಪ
ಹತ್ತೂರಿಗೂ ಮುದ್ದಿನ ಮೊಮ್ಮಗ ನೀನಪ್ಪ ||
Maharaja Rajashree song lyrics from Kannada Movie Mommaga starring Ravichandran, Meena, Prakash Rai, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by V Ravichandran and film is released on 1997