ಗಂಡು : ಹೇ..ಗುಮ್ಮಾಲಕ್ಕಡಿ ಗುಮ್ತಲಕ್ಕಡಿ
ಕೇಳ್ ಕೇಳ್ ಬೆಪ್ಪುತಕ್ಕಡಿ
ಒಂಟಿ ತಕ್ಕಡಿ ತೂಗಲ್ಲ
ಒಂಟಿ ಗಾಲಿ ಚಕ್ಕಡಿ ಓಡಲ್ಲ
ಆಆಆ .. ಆಆಆ...
ಹೆಣ್ಣು : ಹೇ..ಗುಮ್ಮಾಲಕ್ಕಡಿ ಗುಮ್ತಲಕ್ಕಡಿ
ನಾನೊಬ್ಬಳು ಬೆಪ್ಪುತಕ್ಕಡಿ
ಒಲೆ ಇಲ್ಲದ ಗೂಡಿಲ್ಲ
ಒಳ್ಳೆ ಗಂಡ ಇಲ್ಲದ ಹೆಂಡ್ರಿಲ್ಲ
ಆಆಆ.... ಆಆಆ...
ಗಂಡು : ಹೇ.. ಗುಮ್ಮಾಲಕ್ಕಡಿ ಗುಮ್ತಲಕ್ಕಡಿ
ಕೇಳ್ ಕೇಳ್ ಬೆಪ್ಪುತಕ್ಕಡಿ
ಹಣ ಇಲ್ಲದೆ ಜೇಬಿಲ್ಲ
ನಾರಿ ನಡ ಇಲ್ಲದೆ ಡಾಬಿಲ್ಲ
ಆಆಆ... ಆಆಆ...
ಹೆಣ್ಣು : ಹೇ.. ಗುಮ್ಮಾಲಕ್ಕಡಿ ಗುಮ್ತಲಕ್ಕಡಿ
ನಾನೊಬ್ಬಳು ಬೆಪ್ಪುತಕ್ಕಡಿ
ಒನಕೆ ಇಲ್ಲದೆ ಒಳ್ಳಿಲ್ಲ
ಹಳ್ಳ ಕೊಳ್ಳ ಇಲ್ಲದೆ ನೀರಿಲ್ಲ
ಆಆಆ.... ಆಆಆ..
ಗಂಡು : ಊರಿಗೆ ಬಂದ ಹೆಣ್ಣು ನೀ ನೀರಿಗೆ ಬರಾಕೇನು
ಹೀಟಿಗೆ ಬಂದ ಹೈನು ಕುಂತು ನಿದ್ದೆ ಹೋದವೇನು
ಹೆಣ್ಣು : ಗದ್ದೆ ಮಧ್ಯೆ ಹೋಗಿ ನೀರೊದ್ದೆ ಅಂದರೇನು
ನಾಟಿ ನೆಡಾಕ್ ನಿಂತು ನಡ ನೋವು ಅಂದರೇನು
ಗಂಡು : ನೂಲತ್ತಿ ಕಾಟನ್ ಸೀರೆ ಸೋಬನಕ್ಕೆ ಸುತ್ತುಸ್ತಾರೆ
ಸೋಸ್ ಗಂಜಿ ಇಕ್ಕಿದ ಸೀರೆ ಸುಕ್ಕಲ್ ಮುಕ್ಕಲ್ ಎಣಿಸ್ತಾರೆ
ಜೋಡ ಮಂಚಕ ಮಡಿಗಿದ ಮೆತ್ತೆ ತಳ ಹಗುರ ತಡಕ್ತಾರೆ
ಚಿಲಕ ಜಡಿ ಮನಗೂ ನಡಿಲೇ ಹೇಹೇಹೇಹೇ ...
ಗಂಡು : ಹೇ.. ಗುಮ್ಮಾಲಕ್ಕಡಿ ಗುಮ್ತಲಕ್ಕಡಿ
ಕೇಳ್ ನನ್ನ ಕಲ್ಲಂಗಡಿ ಸಿಪ್ಪೆ ಇಲ್ಲದ ಕಾಯಿಲ್ಲ
ಉಪ್ಪು ಖಾರ ಮೆಚ್ಚದ ಬಾಯಿಲ್ಲ ... ಆಆಆಅ...
ಹೆಣ್ಣು : ಹೇ.. ಗುಮ್ಮಾಲಕ್ಕಡಿ ಗುಮ್ತಲಕ್ಕಡಿ
ನಾನೊಬ್ಬಳು ತಾರತಕ್ಕಡಿ
ಗಿಣಿ ಕಚ್ಚದ ಹಣ್ಣಿಲ್ಲ
ಮುತ್ತು ಒಲ್ಲೆ ಅನ್ನದ ಹೆಣ್ಣಿಲ್ಲ
ಆಆಆಆ...
ಹೆಣ್ಣು : ಮೊಳ ಹಾಕಿದ ಮಾಲೇಲಿ ದೇವರ ಗುಣ ಅಳಿಯೋದ
ಗಂಡು : ವಿಷ್ಯ ಇಲ್ಲದ ಬಾಣಾನ ಶ್ರೀರಾಮ ತಪ್ಪು ತಿಳಿಯೋಣ
ಹೆಣ್ಣು : ಶಿವ ನೀಡಿದ ಭಾಗ್ಯನ ಎಡಗಾಲಿಂದಾನ ಒಡೆಯೋದ
ಗಂಡು : ಪುಟ ಇಟ್ಟ ಚಿನ್ನ ನಾ ದುಡುಕಿ ತಿಪ್ಪೆಗೆ ಎಸೆಯೋದ
ಹೆಣ್ಣು : ಮೀಸೆ ಹೊತ್ತ ಗಂಡು ಮಗ ದೇಶ ಕೋಶ ಸುತ್ನಾಂತೆ
ಗಂಡು : ಹಸೆ ಏರಿ ಬಂದ ಮ್ಯಾಲೆ ಹೆಂಡ್ರೆ ಲೋಕ ಅಂತಾನಂತೆ
ಹೆಣ್ಣು : ಲೋಕದೊಳಗೆ ಲೋಕ ಕಂಡ ಸದಾಶಿವ ಆಗ್ತಾನಂತೆ
ಗಂಡು : ಚಿಲಕ ಜಡಿ ಮನಗೂ ನಡಿ ಹೇಹೇಹೇಹೇ ...
ಹೇ.. ಗುಮ್ಮಾಲಕ್ಕಡಿ ಗುಮ್ತಲಕ್ಕಡಿ ಬಾರೆ ಬಾರೆ ಮುಂಡು ಮುಕ್ಕಡಿ
ಮರ ಹತ್ತದ ಮಂಗಿಲ್ಲ ಮಂಗಾಟ ಆಡದ ಗಂಡಿಲ್ಲ ಬಾ.. ಬಾ..
ಹೆಣ್ಣು : ಹೇ.. ಗುಮ್ಮಾಲಕ್ಕಡಿ ಗುಮ್ತಲಕ್ಕಡಿ ನಾನೊಬ್ಬಳು ಬಾರಾ ಬಕ್ಕಡಿ
ಸುಖ ಉಂಡರು ತೇಗಿಲ್ಲ ಮನದೊಟ್ಟೆ ತುಂಬಿಸ ಗೊತ್ತಿಲ್ಲ ಬಾ... ಬಾ..
ಹೆಣ್ಣು : ಕಾಲ ಮಿಂಚಿನೊಡೆಯನೆ
ನನ್ನ ಅಳೆದುಕೊ ಕಣ್ಣಂಚು ನೋಡಿಕೊ
ಒಳಸಂಚು ತಿಳಿದುಕೊ
ಇಂಚಿಂಚು ಬಳಸಿಕೊ ನನ್ನ ಪ್ರೀತಿ ನೆಂಚಿಕೊ
ಗಂಡು : ಎದೆಯ ಬೀಗದೊಡತಿಯೇ
ಕಹಿಯ ಕಳೆದುಕೊ ಪ್ರೀತಿನ ಹೆಣೆದುಕೊ
ಬುಟ್ಟಿಯ ಮಾಡಿಕೊ ಬಾಳ ಬೆಲ್ಲ ತುಂಬಿಕೊ
ಸಿಹಿ ಸುಖ ತಂದುಕೊ
ಹೆಣ್ಣು : ಮನಸು ಎತ್ತೊ ಹೋಯ್ತು
ಗಂಡು : ಹೊತ್ತೆಷ್ಟೊ ಕಾಣದಾಯ್ತು
ಹೆಣ್ಣು : ಮಾತು ಮಾಗಿ ಹೋಯ್ತು
ಗಂಡು : ರತಿಯಾಸೆ ರಾಗವಾಯ್ತು ಆ.... ಆ..
ಹೆಣ್ಣು : ಮನ ಇದ್ದರೆ ಸಾಕು ಕಾಮನ ಕಟ್ಟಿ ಹಾಕು
ಗಂಡು : ಬೇಕು ಅಂದರೆ ಬೇಕು ಬೇಡೆಂದರೆ ಬೀಗ ಹಾಕು
ನೂಲತ್ತಿ ಕಾಟನ್ ಸೀರೆ ಸೋಬನಕ್ಕೆ ಸುತ್ತುಸ್ತಾರೆ
ಸೋಸ್ ಗಂಜಿ ಇಕ್ಕಿದ ಸೀರೆ ಸುಕ್ಕಲ್ ಮುಕ್ಕಲ್ ಎಣಿಸ್ತಾರೆ
ಜೋಡ ಮಂಚಕ ಮಡಿಗಿದ ಮೆತ್ತೆ ತಳ ಹಗುರ ತಡಕ್ತಾರೆ
ಚಿಲಕ ಜಡಿ ಮನಗೂ ನಡಿಲೇ ಹೇಹೇಹೇಹೇ ...
||ಹೆಣ್ಣು : ಹೇ..ಗುಮ್ಮಾಲಕ್ಕಡಿ ಗುಮ್ತಲಕ್ಕಡಿ
ನಾನೊಬ್ಬಳು ಬೆಪ್ಪುತಕ್ಕಡಿ
ಒಲೆ ಇಲ್ಲದ ಗೂಡಿಲ್ಲ
ಒಳ್ಳೆ ಗಂಡ ಇಲ್ಲದ ಹೆಂಡ್ರಿಲ್ಲ
ಆಆಆ.... ಆಆಆ...||
|| ಗಂಡು : ಹೇ..ಗುಮ್ಮಾಲಕ್ಕಡಿ ಗುಮ್ತಲಕ್ಕಡಿ
ಕೇಳ್ ಕೇಳ್ ಬೆಪ್ಪುತಕ್ಕಡಿ
ಒಂಟಿ ತಕ್ಕಡಿ ತೂಗಲ್ಲ
ಒಂಟಿ ಗಾಲಿ ಚಕ್ಕಡಿ ಓಡಲ್ಲ
ಆಆಆ .. ಆಆಆ...||