Baaleya Hrudayava Lyrics

in Bhookailasa

Video:

LYRIC

ಬಾಲೆಯ ಹೃದಯವ ಆವರಿಸಿರುವ
ಬಯಕೆಯ ತೀರಿಸೋ ಮಹಾನುಭಾವ
ಬಾಲೆಯ ಹೃದಯವ ಆವರಿಸಿರುವ
ಬಯಕೆಯ ತೀರಿಸೋ ಮಹಾನುಭಾವ
ಮನದಲಿ ಮೂಡಿದ ಅನನ್ಯ ಭಾವ
ಮನದಲಿ ಮೂಡಿದ ಅನನ್ಯ ಭಾವ
ಮನ್ನಿಸಿ ಕಾಯೋ ಮಾದೇವಾ…..

 
|| ಬಾಲೆಯ ಹೃದಯವ ಆವರಿಸಿರುವ
ಬಯಕೆಯ ತೀರಿಸೋ ಮಹಾನುಭಾವ…||

ದುಂಬಿಯ ಕಾಯುವ ತಾವರೆಯಂತೆ
ಅಂಬರ ನೋಡುವ ಸಾಹಸದಂತೆ
ದುಂಬಿಯ ಕಾಯುವ ತಾವರೆಯಂತೆ
ಅಂಬರ ನೋಡುವ ಸಾಹಸದಂತೆ
ಹಂಬಲದಂಬಿಗೆ ನಾ ಗುರಿಯಾಗಿಹೇ
ಹಂಬಲದಂಬಿಗೆ ನಾ ಗುರಿಯಾಗಿಹೇ
ಬೆಂಬಲ ನೀಡೋ ಸದಾಶಿವಾ…

 
|| ಬಾಲೆಯ ಹೃದಯವ ಆವರಿಸಿರುವ
ಬಯಕೆಯ ತೀರಿಸೋ ಮಹಾನುಭಾವ…||

ಮೂಡಿದ ಪ್ರೇಮಾಂಕುರವ ಬೆಳೆಸಿ
ಎದೆಯಾಳದ ಹಿರಿಯಾಸೆಯ ಸಲಿಸೋ
ಮೂಡಿದ ಪ್ರೇಮಾಂಕುರವ ಬೆಳೆಸಿ
ಎದೆಯಾಳದ ಹಿರಿಯಾಸೆಯ ಸಲಿಸೋ
ನೋಡಿದ ಕೂಡಲೇ ಮನಸೋಲಿಸಿದ
ನೋಡಿದ ಕೂಡಲೇ ಮನಸೋಲಿಸಿದ
ಹೃದೆಯೇಶನ ಸೇವೆಯ ನೀಡೋ

|| ಬಾಲೆಯ ಹೃದಯವ ಆವರಿಸಿರುವ
ಬಯಕೆಯ ತೀರಿಸೋ ಮಹಾನುಭಾವ
ಮನದಲಿ ಮೂಡಿದ ಅನನ್ಯ ಭಾವ
ಮನ್ನಿಸಿ ಕಾಯೋ ಮಾದೇವಾ…..
 
ಬಾಲೆಯ ಹೃದಯವ ಆವರಿಸಿರುವ
ಬಯಕೆಯ ತೀರಿಸೋ ಮಹಾನುಭಾವ
ಬಯಕೆಯ ತೀರಿಸೋ ಮಹಾನುಭಾವ…||

Baaleya Hrudayava song lyrics from Kannada Movie Bhookailasa starring Dr Rajkumar, Kalyan Kumar, K S Ashwath, Lyrics penned by Ku Ra Seetharama Shastry Sung by P Susheela, Music Composed by R Sudarshanam, R Govardhanam, film is Directed by K Shankar and film is released on 1958