ಓಂ
ಪರಮಪವಿತ್ರಂ ಮಹಾ ಕ್ಷೇತ್ರಂ
ಜ್ಞಾನ ಜ್ಯೋತಿ ಶ್ರೀ ಸಿದ್ದಗಂಗಾ
ಹರನ ಕರುಣೋದಯದ
ತೆರೆದಲಿ ಬೆಳಗುತೆರೆಯುವ ಹೊತ್ತಿಗೆ
ಬೆಳಗುತೆರೆಯುವ ಹೊತ್ತಿಗೆ
ವೇದಘೋಷದ ದಿವ್ಯಲಹರಿಯು
ಮನವ ತೊಳೆಯಲು ಮೆಲ್ಲಗೆ
ಮನವ ತೊಳೆಯಲು ಮೆಲ್ಲಗೆ
ಬರುವ ಶ್ರೀ ಗುರುಪಾದುಕೆಯದನಿ
ಅನುರಣಿತವಾಗಲು ಮೌನಕೆ
ಅನುರಣಿತವಾಗಲು ಮೌನಕೆ
ಸಿದ್ದಗಂಗೆಯ ನೆಲವು ಜಲವು
ನಮಿಸಿ ನಿಲುವುದು ಸುಮ್ಮಗೆ
ನಮಿಸಿ ನಿಲುವುದು ಸುಮ್ಮಗೆ
||ಹರನ ಕರುಣೋದಯದ
ತೆರೆದಲಿ ಬೆಳಗುತೆರೆಯುವ ಹೊತ್ತಿಗೆ
ಬೆಳಗುತೆರೆಯುವ ಹೊತ್ತಿಗೆ||
ಬೆಟ್ಟ ಬಂಡೆಯ ನಡುವೆ ಗಿಡ ಮರ
ಹೂವನಿತ್ತಿರೆ ಪೂಜೆಗೆ
ಹೂವನಿತ್ತಿರೆ ಪೂಜೆಗೆ
ದೇಗುಲದ ಪೂಜಾರತಿಯ ಘಂಟೆಯ
ಮೊಳಗು ಮುಟ್ಟಲು ಬಾನಿಗೆ
ಮೊಳಗು ಮುಟ್ಟಲು ಬಾನಿಗೆ
ಧೂಪಗಂಧವು
ಮಂದ ವಂದಾನಿಲನ ಜೊತೆಯೊಳು ಮನಸಿಗೆ
ವಂದಾನಿಲನ ಜೊತೆ ಮನಸಿಗೆ
ಸಂಭ್ರಮನುಕ್ಕಿಸೆ ಬೆಳಗು ಹಿಡಿವುದು
ಸಿದ್ದಗಂಗೆಯ ಕ್ಷೇತ್ರಕೆ
ಸಿದ್ದಗಂಗೆಯ ಕ್ಷೇತ್ರಕೆ
||ಹರನ ಕರುಣೋದಯದ
ತೆರೆದಲಿ ಬೆಳಗುತೆರೆಯುವ ಹೊತ್ತಿಗೆ
ಬೆಳಗುತೆರೆಯುವ ಹೊತ್ತಿಗೆ||
ಇಲ್ಲಿ ಇಲ್ಲ ಪವಾಡದದ್ಭುತ
ಅಥವ ಉತ್ಸವದ ಅಬ್ಬರ
ಅಥವ ಉತ್ಸವದ ಅಬ್ಬರ
ಮುಡಿಯೆನೆತ್ತಿರೆ ಸರಳ
ಸಾಧಾರಣದ ಬದುಕಿನ ಗೋಪುರ
ಸರಳ ಬದುಕಿನ ಗೋಪುರ
ಅದರ ಮೇಲಿದೆ ತ್ಯಾಗಧ್ವಜ
ಕೈಬೀಸಿ ಕರೆವುದು ಪಥಿಕರ
ಕೈಬೀಸಿ ಕರೆವುದು ಪಥಿಕರ
ಪರಮನಿರಪೇಕ್ಷೆಯಲಿ ದಿನವು
ಸೇವೆಗಾಗಿದೆ ಸರ್ವರ
ಸೇವೆಗಾಗಿದೆ ಸರ್ವರ
||ಹರನ ಕರುಣೋದಯದ
ತೆರೆದಲಿ ಬೆಳಗುತೆರೆಯುವ ಹೊತ್ತಿಗೆ
ಬೆಳಗುತೆರೆಯುವ ಹೊತ್ತಿಗೆ||
ದೀಕ್ಷೆ ಹೊರಟಿದೆ
ಜಂಗಮದ ಜೋಳಿಗೆ
ಲಕ್ಷ ಜನಗಳ ಪೊರೆದಿದೆ
ಲಕ್ಷ ಜನಗಳ ಪೊರೆದಿದೆ
ತೀರ್ಥವಾಗಿದೆ ಭಕ್ತರಿಗೆ ಜೊತೆಗೆ
ಸ್ಪೂರ್ತಿಯಾಗಿದೆ ಬುದ್ದಿಗೆ
ಸ್ಪೂರ್ತಿಯಾಗಿದೆ ಬುದ್ದಿಗೆ
ಬಂದ ಹಣತೆಗೆ ಎಣ್ಣೆಬತ್ತಿಯ
ದೀಪ್ತಿ ದಾನವ ಮಾಡಿದೆ
ದೀಪ್ತಿ ದಾನವ ಮಾಡಿದೆ
ರಕ್ಷೆಯಾಗಿದೆ ಮುಗಿಲನೇರಿದ
ಎಷ್ಟೋ ರೆಕ್ಕೆಯ ಹಾದಿಗೆ
||ಹರನ ಕರುಣೋದಯದ
ತೆರೆದಲಿ ಬೆಳಗುತೆರೆಯುವ ಹೊತ್ತಿಗೆ
ಬೆಳಗುತೆರೆಯುವ ಹೊತ್ತಿಗೆ||
ಓಂ
ಪರಮಪವಿತ್ರಂ ಮಹಾ ಕ್ಷೇತ್ರಂ
ಜ್ಞಾನ ಜ್ಯೋತಿ ಶ್ರೀ ಸಿದ್ದಗಂಗಾ
ಹರನ ಕರುಣೋದಯದ
ತೆರೆದಲಿ ಬೆಳಗುತೆರೆಯುವ ಹೊತ್ತಿಗೆ
ಬೆಳಗುತೆರೆಯುವ ಹೊತ್ತಿಗೆ
ವೇದಘೋಷದ ದಿವ್ಯಲಹರಿಯು
ಮನವ ತೊಳೆಯಲು ಮೆಲ್ಲಗೆ
ಮನವ ತೊಳೆಯಲು ಮೆಲ್ಲಗೆ
ಬರುವ ಶ್ರೀ ಗುರುಪಾದುಕೆಯದನಿ
ಅನುರಣಿತವಾಗಲು ಮೌನಕೆ
ಅನುರಣಿತವಾಗಲು ಮೌನಕೆ
ಸಿದ್ದಗಂಗೆಯ ನೆಲವು ಜಲವು
ನಮಿಸಿ ನಿಲುವುದು ಸುಮ್ಮಗೆ
ನಮಿಸಿ ನಿಲುವುದು ಸುಮ್ಮಗೆ
||ಹರನ ಕರುಣೋದಯದ
ತೆರೆದಲಿ ಬೆಳಗುತೆರೆಯುವ ಹೊತ್ತಿಗೆ
ಬೆಳಗುತೆರೆಯುವ ಹೊತ್ತಿಗೆ||
ಬೆಟ್ಟ ಬಂಡೆಯ ನಡುವೆ ಗಿಡ ಮರ
ಹೂವನಿತ್ತಿರೆ ಪೂಜೆಗೆ
ಹೂವನಿತ್ತಿರೆ ಪೂಜೆಗೆ
ದೇಗುಲದ ಪೂಜಾರತಿಯ ಘಂಟೆಯ
ಮೊಳಗು ಮುಟ್ಟಲು ಬಾನಿಗೆ
ಮೊಳಗು ಮುಟ್ಟಲು ಬಾನಿಗೆ
ಧೂಪಗಂಧವು
ಮಂದ ವಂದಾನಿಲನ ಜೊತೆಯೊಳು ಮನಸಿಗೆ
ವಂದಾನಿಲನ ಜೊತೆ ಮನಸಿಗೆ
ಸಂಭ್ರಮನುಕ್ಕಿಸೆ ಬೆಳಗು ಹಿಡಿವುದು
ಸಿದ್ದಗಂಗೆಯ ಕ್ಷೇತ್ರಕೆ
ಸಿದ್ದಗಂಗೆಯ ಕ್ಷೇತ್ರಕೆ
||ಹರನ ಕರುಣೋದಯದ
ತೆರೆದಲಿ ಬೆಳಗುತೆರೆಯುವ ಹೊತ್ತಿಗೆ
ಬೆಳಗುತೆರೆಯುವ ಹೊತ್ತಿಗೆ||
ಇಲ್ಲಿ ಇಲ್ಲ ಪವಾಡದದ್ಭುತ
ಅಥವ ಉತ್ಸವದ ಅಬ್ಬರ
ಅಥವ ಉತ್ಸವದ ಅಬ್ಬರ
ಮುಡಿಯೆನೆತ್ತಿರೆ ಸರಳ
ಸಾಧಾರಣದ ಬದುಕಿನ ಗೋಪುರ
ಸರಳ ಬದುಕಿನ ಗೋಪುರ
ಅದರ ಮೇಲಿದೆ ತ್ಯಾಗಧ್ವಜ
ಕೈಬೀಸಿ ಕರೆವುದು ಪಥಿಕರ
ಕೈಬೀಸಿ ಕರೆವುದು ಪಥಿಕರ
ಪರಮನಿರಪೇಕ್ಷೆಯಲಿ ದಿನವು
ಸೇವೆಗಾಗಿದೆ ಸರ್ವರ
ಸೇವೆಗಾಗಿದೆ ಸರ್ವರ
||ಹರನ ಕರುಣೋದಯದ
ತೆರೆದಲಿ ಬೆಳಗುತೆರೆಯುವ ಹೊತ್ತಿಗೆ
ಬೆಳಗುತೆರೆಯುವ ಹೊತ್ತಿಗೆ||
ದೀಕ್ಷೆ ಹೊರಟಿದೆ
ಜಂಗಮದ ಜೋಳಿಗೆ
ಲಕ್ಷ ಜನಗಳ ಪೊರೆದಿದೆ
ಲಕ್ಷ ಜನಗಳ ಪೊರೆದಿದೆ
ತೀರ್ಥವಾಗಿದೆ ಭಕ್ತರಿಗೆ ಜೊತೆಗೆ
ಸ್ಪೂರ್ತಿಯಾಗಿದೆ ಬುದ್ದಿಗೆ
ಸ್ಪೂರ್ತಿಯಾಗಿದೆ ಬುದ್ದಿಗೆ
ಬಂದ ಹಣತೆಗೆ ಎಣ್ಣೆಬತ್ತಿಯ
ದೀಪ್ತಿ ದಾನವ ಮಾಡಿದೆ
ದೀಪ್ತಿ ದಾನವ ಮಾಡಿದೆ
ರಕ್ಷೆಯಾಗಿದೆ ಮುಗಿಲನೇರಿದ
ಎಷ್ಟೋ ರೆಕ್ಕೆಯ ಹಾದಿಗೆ
||ಹರನ ಕರುಣೋದಯದ
ತೆರೆದಲಿ ಬೆಳಗುತೆರೆಯುವ ಹೊತ್ತಿಗೆ
ಬೆಳಗುತೆರೆಯುವ ಹೊತ್ತಿಗೆ||
Harana Karunodaya song lyrics from Kannada Movie Jnana Jyothi Sri Siddaganga starring Srinivasamurthy, Sridhar, Shivadhwaj, Lyrics penned by G S Shivarudrappa Sung by S P Balasubrahmanyam, Music Composed by K Yuvaraj, film is Directed by Omkar B A and film is released on 2008