ಈ ಕಣ್ಣಿನ ಜಲಪಾತದ
ಮೇಲೆ ನಿಂತು
ಹಾಡುತಿದೆ ಈ ಹೃದಯ ಜೋಕಾಲಿ
ಅತಿ ಸುಂದರ ಅತಿ ಮೌನದ ಸೆಳೆತಕೆ ಸೋತು
ಹಿಂಬಾಲಿಸಿದೆ ಹರೆಯ ಖಾಲಿಗೈಯ್ಯಲಿ
ನಿನ್ನ ಸಂಘ ಅತಿರೋಚಕ
ಪ್ರತಿಗನಸ ನೀ ಮಾಲೀಕ
ಸಿಕ್ಕಿಹುದು ನನಗೀಗ ಪಾರಿತೋಷಕ
ಅಭಿಮಾನಿ ನಾ ನಿನಗೆ ವಿದೂಷಕ
ನಾ ನಿನಗೆ….ಕಾವಲುಗಾರ
ಕಾಯುವೆನೂ ಜನುಮ ಪೂರ
ನಾ ನಿನಗೆ….ಕಾವಲುಗಾರ
ಕಾಯುವೆನೂ ಜನುಮ ಪೂರ
ಸಿಕ್ಕಿಹುದು ನನಗೀಗ ಪಾರಿತೋಷಕ
ಅಭಿಮಾನಿ ನಾ ನಿನಗೆ ವಿದೂಷಕ
ಇತಿಹಾಸದ ಪುಟದ ಒಳಗೆ
ಇರಬಹುದು ಒಂದು ನಂಟು
ಪ್ರತಿಘಳಿಗೆಗು ಒಂದು ಚೂರು
ಅಪ್ಪುಗೆಯ ಸೆಳೆತ ಉಂಟು
ಸಾಟಿ ಇಲ್ಲದ ನೋಟದ ಧಾಟಿ ನಿನ್ನದು
ಭೇಟಿ ಆಗಲು ಕಾಯುವ ಮನಸ್ಸು ನನ್ನದು
ಬದಲಾಗಿದೆ ದಿನಚರಿ ಬೇಕು ನಿನ್ನ ಹಾಜರಿ
ಈ ಹೃದಯಕೆ ನೀನೆಂದಿಗು ರಾಯಭಾರಿ
ಸಿಕ್ಕಂಗೆ ಆಗಿಹುದು ಪಾರಿತೋಷಕ
ಅಭಿಮಾನಿ ನಾ ನಿನಗೆ ವೀಕ್ಷಕ
||ನೀ ನನಗೆ ಕಾವಲುಗಾರ
ಚಿರಋಣಿಯು ಜನುಮ ಪೂರ
ಬಿಟ್ಟಿರಲು ಆಗದು ದೂರ
ತಿಳಿಸಿ ಕೊಡು ಪ್ರೀತಿಯ ಸಾರ
ಹ್ಮ್...ಆಆ...ಪಾರಿತೋಷಕ
ಆಆ…ಹ್ಮ್... ವಿದೂಷಕ||
ಈ ಕಣ್ಣಿನ ಜಲಪಾತದ
ಮೇಲೆ ನಿಂತು
ಹಾಡುತಿದೆ ಈ ಹೃದಯ ಜೋಕಾಲಿ
ಅತಿ ಸುಂದರ ಅತಿ ಮೌನದ ಸೆಳೆತಕೆ ಸೋತು
ಹಿಂಬಾಲಿಸಿದೆ ಹರೆಯ ಖಾಲಿಗೈಯ್ಯಲಿ
ನಿನ್ನ ಸಂಘ ಅತಿರೋಚಕ
ಪ್ರತಿಗನಸ ನೀ ಮಾಲೀಕ
ಸಿಕ್ಕಿಹುದು ನನಗೀಗ ಪಾರಿತೋಷಕ
ಅಭಿಮಾನಿ ನಾ ನಿನಗೆ ವಿದೂಷಕ
ನಾ ನಿನಗೆ….ಕಾವಲುಗಾರ
ಕಾಯುವೆನೂ ಜನುಮ ಪೂರ
ನಾ ನಿನಗೆ….ಕಾವಲುಗಾರ
ಕಾಯುವೆನೂ ಜನುಮ ಪೂರ
ಸಿಕ್ಕಿಹುದು ನನಗೀಗ ಪಾರಿತೋಷಕ
ಅಭಿಮಾನಿ ನಾ ನಿನಗೆ ವಿದೂಷಕ
ಇತಿಹಾಸದ ಪುಟದ ಒಳಗೆ
ಇರಬಹುದು ಒಂದು ನಂಟು
ಪ್ರತಿಘಳಿಗೆಗು ಒಂದು ಚೂರು
ಅಪ್ಪುಗೆಯ ಸೆಳೆತ ಉಂಟು
ಸಾಟಿ ಇಲ್ಲದ ನೋಟದ ಧಾಟಿ ನಿನ್ನದು
ಭೇಟಿ ಆಗಲು ಕಾಯುವ ಮನಸ್ಸು ನನ್ನದು
ಬದಲಾಗಿದೆ ದಿನಚರಿ ಬೇಕು ನಿನ್ನ ಹಾಜರಿ
ಈ ಹೃದಯಕೆ ನೀನೆಂದಿಗು ರಾಯಭಾರಿ
ಸಿಕ್ಕಂಗೆ ಆಗಿಹುದು ಪಾರಿತೋಷಕ
ಅಭಿಮಾನಿ ನಾ ನಿನಗೆ ವೀಕ್ಷಕ
||ನೀ ನನಗೆ ಕಾವಲುಗಾರ
ಚಿರಋಣಿಯು ಜನುಮ ಪೂರ
ಬಿಟ್ಟಿರಲು ಆಗದು ದೂರ
ತಿಳಿಸಿ ಕೊಡು ಪ್ರೀತಿಯ ಸಾರ
ಹ್ಮ್...ಆಆ...ಪಾರಿತೋಷಕ
ಆಆ…ಹ್ಮ್... ವಿದೂಷಕ||