LYRIC
ಓಓಓ ಓಓಓ ಓಓಓ ಓಓಓ
ದೇವರೆ
ಮಣ್ಣು ಮಣ್ಣು ಜೀವ ಮಣ್ಣು
ಮಾಡಿ ಕುಳಿತಿರುವೆ
ಎಂಥ ನೋವ ನೀಡಿರುವೆ
ಹೇ ದೇವರೇ
ಕಂಡ ಕನಸಿಗೆ ಬೆಂಕಿ ಹಚ್ಚಿ
ಎಲ್ಲಿ ಅವಿತಿರುವ
ಎಂಥ ಘಾಸಿ ಮಾಡಿರುವೆ
ಅಯ್ಯೋ ದೇವರೆ
ನಗಿಸಿ ನಗಿಸಿ
ಅಳಿಸೋ ನೀನು
ಮೋಸಗಾರನು
ಎಲ್ಲಾ ಕೊಟ್ಟು
ಕಸಿಯೋ ನೀನು
ಆಟಗಾರನು...
ಓಹೋ
ಧಿಕ್ಕಾರ ನಿನಗೆ ದೇವರೇ
ಈ ಉಸಿರು ಇರೋವರಿಗೆ
ಕಸಿದುಕೊಂಡ ಜೀವವಾ
ಮರಳಿ ಕೊಡು ನನಗೆ
ಧಿಕ್ಕಾರ ನಿನಗೆ ದೇವರೇ
ನಿನ್ನ ಈ ನಡೆಗೆ
ಕ್ಷಮಿಸಲಾರೆ ನಿನ್ನನು
ನಾನು ಕೊನೆವರೆಗೆ
ಓಓಓ ಓಓಓ ಓಓಓ ಓಓಓ
ಅಯ್ಯೋ... ದೇವರೇ
ನಿನ್ನ ನೆನಪಲ್ಲಿಯೇ
ಪ್ರತಿ ದಿನವ ಕಳೆಯುವುದು...
ನಿನ್ನ ಧ್ವನಿ ಕೇಳಲು
ಕಂಬನಿಯು ಮಿಡಿಯುವುದು
ಹೇಗೇ ಹೇಗೆ
ಸಹಿಸುವುದು ಈ ವ್ಯಥೆ
ಏಕೆ ಏಕೆ
ಬರದಿರುವೆ ಈ ಕಥೆ
ಹೇಳು ನೀ...
ಓಹೋ
ಧಿಕ್ಕಾರ ನಿನಗೆ ದೇವರೇ
ಈ ದುಃಖ ಅನುಭವಿಸು
ಮನಸು ಪಡುತಿರೋ ಕಷ್ಟವ
ನೀನು ಬಾ ಭರಿಸು
ಧಿಕ್ಕಾರ ನಿನಗೆ ದೇವರೇ
ನನ್ನ ಸ್ವೀಕರಿಸು
ಒಳ್ಳೆತನದ ಜೀವವ
ಮತ್ತೇ ನೀ ಕರೆಸು
ಓಓಓ ಓಓಓ ಓಓಓ ಓಓಓ
Please log in to see the full lyrics of this song.
Dhikkara Ninage Devare song lyrics from Kannada Movie James starring Puneeth Rajkumar, Priya Anand, Anu Prabhakar, Lyrics penned by V Nagendra Prasad Sung by Rajesh Krishnan, Music Composed by , film is Directed by Chethan Kumar and film is released on 2021