ಎಲೆ ಎಲೆವೋ ಕಡು ಮೂರ್ಖ
ನುಡಿಯದಿರು ಮತ್ತೊಮ್ಮೆ
ಸೀಳುವೆನು ಹರಿಯೆನುವ
ನಾಲಿಗೆಯನು ನಾ…ಆ ಆ ಆ…
ಕಡು ವೈರಿ ನಮಗವನು….
ಕಡು ವೈರಿ ನಮಗವನು….
ಮೃಢನಾಣೆ ಹೇಳುವೆನು
ಬಡಿದು ಕೊಲ್ಲುವೇ
ಎಲ್ಲಿ ತೋರು ಅವನ…ಆ ಆ ಆ….
ಆಕಾಶವೇ ವದನ…
ಸೂರ್ಯ ಚಂದ್ರರೇ ನಯನ
ಗ್ರಹತಾರೆಗಳೇ ಅವನ ಆಭರಣವೋ…
ಸಿಡಿಲು ಗುಡುಗೇ ನಗುವು
ಬ್ರಹ್ಮಾಂಡವೇ ತನುವು..
ಪಾತಾಳದಲ್ಲಿಹುದು ಹರಿ ಚರಣವು
“ ಹೇಹೇ..ಪಾತಾಳದಲ್ಲಿ ಹರಿ ಚರಣ…”
ವಿಶ್ವವನೇ ಆಳುತಿರುವ ದಾನವೇಶ್ವರನೆದುರು
ವಿಶ್ವರೂಪಿಯು ಹರಿಯು ಎನ್ನುವೆಯ ಮೂಢ..
ದಿಟ್ಟತನವಿದ್ದರೆ ಎದುರಿಸಲಿ ನನ್ನನ್ನು
ಮೆಟ್ಟಿ ತುಳಿಯುವ ಅವನ ಶಿರವ ನಾ…..
ಭಕ್ತಿ ನಂಭಿಹೆ ನಾನು, ಶಕ್ತಿ ನಂಬಿಹೆ ನೀನು..
ಪ್ರೇಮದಲಿ ನಾ ಕರೆವೆ, ದ್ವೇಷದಲಿ ನೀ ಕರೆವೆ
ಇಬ್ಬರಲೂ ಆ ಹರಿಯೇ ತುಂಬಿರುವನು
ಕೂಗಿದರೆ ನನ್ನಾಣೆ…ಬಾರದಿಹನು
ಅಹ್ಹಹ್ಹಹ್ಹಾ….
ಹೆಜ್ಜೆ ಸಪ್ಪಲ ನೋಡಿ ನಡುಗಿ
ಓಡಿದಾ ಹೇಡಿ ಬಾ…ಎಂದು ಕೂಗಿದರೆ
ಬರುವನೇನೋ….ಓ ಓ ಓ ಓ ಓ…..
ಗೆಜ್ಜೆ ಕಟ್ಟಿ ಕುಣಿದ ಮೋಹಿನಿಯೋ ಆ ಹರಿಯು
ಗಂಡೆದೆಯ ಗುಂಡಿಗೆಯು ಅವನಿಗುಂಟೇನೋ
ಗಂಡೆದೆಯ ಗುಂಡಿಗೆಯು ಅವನಿಗುಂಟೇನೋ
ಅವನಿಗುಂಟೇನೋ….
ಹರಿ ನಿಂದ ತರವಲ್ಲಾ, ಹರಿ ವೈರ ಸರಿಯಲ್ಲಾ
ಹರಿಗಿಂತ ಅಧಿಕರು ಇಲ್ಲಾರೂ ಇಲ್ಲಾ
ಹರಿಯ ಬಿಟ್ಟರೆ ನಮಗೆ ಮುಕ್ತಿಯಿಲ್ಲಾ…
ಎಲೆ ಎಲೆವೋ ಕಡು ಮೂರ್ಖ
ನುಡಿಯದಿರು ಮತ್ತೊಮ್ಮೆ
ಸೀಳುವೆನು ಹರಿಯೆನುವ
ನಾಲಿಗೆಯನು ನಾ…ಆ ಆ ಆ…
ಕಡು ವೈರಿ ನಮಗವನು….
ಕಡು ವೈರಿ ನಮಗವನು….
ಮೃಢನಾಣೆ ಹೇಳುವೆನು
ಬಡಿದು ಕೊಲ್ಲುವೇ
ಎಲ್ಲಿ ತೋರು ಅವನ…ಆ ಆ ಆ….
ಆಕಾಶವೇ ವದನ…
ಸೂರ್ಯ ಚಂದ್ರರೇ ನಯನ
ಗ್ರಹತಾರೆಗಳೇ ಅವನ ಆಭರಣವೋ…
ಸಿಡಿಲು ಗುಡುಗೇ ನಗುವು
ಬ್ರಹ್ಮಾಂಡವೇ ತನುವು..
ಪಾತಾಳದಲ್ಲಿಹುದು ಹರಿ ಚರಣವು
“ ಹೇಹೇ..ಪಾತಾಳದಲ್ಲಿ ಹರಿ ಚರಣ…”
ವಿಶ್ವವನೇ ಆಳುತಿರುವ ದಾನವೇಶ್ವರನೆದುರು
ವಿಶ್ವರೂಪಿಯು ಹರಿಯು ಎನ್ನುವೆಯ ಮೂಢ..
ದಿಟ್ಟತನವಿದ್ದರೆ ಎದುರಿಸಲಿ ನನ್ನನ್ನು
ಮೆಟ್ಟಿ ತುಳಿಯುವ ಅವನ ಶಿರವ ನಾ…..
ಭಕ್ತಿ ನಂಭಿಹೆ ನಾನು, ಶಕ್ತಿ ನಂಬಿಹೆ ನೀನು..
ಪ್ರೇಮದಲಿ ನಾ ಕರೆವೆ, ದ್ವೇಷದಲಿ ನೀ ಕರೆವೆ
ಇಬ್ಬರಲೂ ಆ ಹರಿಯೇ ತುಂಬಿರುವನು
ಕೂಗಿದರೆ ನನ್ನಾಣೆ…ಬಾರದಿಹನು
ಅಹ್ಹಹ್ಹಹ್ಹಾ….
ಹೆಜ್ಜೆ ಸಪ್ಪಲ ನೋಡಿ ನಡುಗಿ
ಓಡಿದಾ ಹೇಡಿ ಬಾ…ಎಂದು ಕೂಗಿದರೆ
ಬರುವನೇನೋ….ಓ ಓ ಓ ಓ ಓ…..
ಗೆಜ್ಜೆ ಕಟ್ಟಿ ಕುಣಿದ ಮೋಹಿನಿಯೋ ಆ ಹರಿಯು
ಗಂಡೆದೆಯ ಗುಂಡಿಗೆಯು ಅವನಿಗುಂಟೇನೋ
ಗಂಡೆದೆಯ ಗುಂಡಿಗೆಯು ಅವನಿಗುಂಟೇನೋ
ಅವನಿಗುಂಟೇನೋ….
ಹರಿ ನಿಂದ ತರವಲ್ಲಾ, ಹರಿ ವೈರ ಸರಿಯಲ್ಲಾ
ಹರಿಗಿಂತ ಅಧಿಕರು ಇಲ್ಲಾರೂ ಇಲ್ಲಾ
ಹರಿಯ ಬಿಟ್ಟರೆ ನಮಗೆ ಮುಕ್ತಿಯಿಲ್ಲಾ…
Ela Elavo song lyrics from Kannada Movie Bhaktha Prahlada starring Dr Rajkumar, Master Lohith, Ananthnag, Lyrics penned by Traditional Sung by Dr Rajkumar, Music Composed by T G Lingappa, film is Directed by Vijay and film is released on 1983