Haduu Baa Kogile Lyrics

in Veera Sankalpa

Video:

LYRIC

ಹಾಡು ಬಾ ಕೋಗಿಲೆ
ನಲಿದಾಡು ಬಾರೆ ನವಿಲೇ
ಸಿರಿಗನ್ನಡಾಂಬೆಯ
ಜಯಧ್ವನಿ ಮೊಳಗಲೆ

|| ಹಾಡು ಬಾ ಕೋಗಿಲೆ
ನಲಿದಾಡು ಬಾರೆ ನವಿಲೇ…||

(ಓಓಓಓಓಓಓ..ಓಓಓಓಓಓಓ.)

ಕನ್ನಡ ನಾಡು ನಮದೆಂದು
ಕನ್ನಡಿಗರಿಗದೆ ಗುಡಿಯೆಂದು
(ಆಆಆಆ.... ಆಆಆಆ....ಆಆಆಆ....)
ಕನ್ನಡ ನಾಡು ನಮದೆಂದು
ಕನ್ನಡಿಗರಿಗದೆ ಗುಡಿಯೆಂದು
ಕಂಡ ಕಂಡವರ ಜಡತೆ ನೀಗಿಸಿ
ಗಂಡುಗಲಿಗಳ ತಂಡವ ಬೆಳಸೆ

|| ಹಾಡು ಬಾ ಕೋಗಿಲೆ
ನಲಿದಾಡು ಬಾರೆ ನವಿಲೇ
ಸಿರಿಗನ್ನಡಾಂಬೆಯ
ಜಯಧ್ವನಿ ಮೊಳಗಲೆ
 
ಹಾಡು ಬಾ ಕೋಗಿಲೆ
ನಲಿದಾಡು ಬಾರೆ ನವಿಲೇ…||

ಇಂದಿನ ಕೀರ್ತಿಯಗಳಿಸಲು ಬಂದು
ಮುಂದಡಿಯಿಡುತ ನಡೆಯಿರೊ ಎಂದು
ಇಂದಿನ ಕೀರ್ತಿಯಗಳಿಸಲು ಬಂದು
ಮುಂದಡಿಯಿಡುತ ನಡೆಯಿರೊ ಎಂದು
ಮಾರ್ದನಿಗೊಳಲೆ ನಿನ್ನಯ ಸ್ವರವು
ಮುಗಿಲಿಗೇರಲೇ ಕನ್ನಡ ಧ್ವಜವು….
ಮಾರ್ದನಿಗೊಳಲೆ ನಿನ್ನಯ ಸ್ವರವು
ಮುಗಿಲಿಗೇರಲೇ ಕನ್ನಡ ಧ್ವಜವು

|| ಹಾಡು ಬಾ ಕೋಗಿಲೆ
ನಲಿದಾಡು ಬಾರೆ ನವಿಲೇ
ಸಿರಿಗನ್ನಡಾಂಬೆಯ
ಜಯಧ್ವನಿ ಮೊಳಗಲೆ
 
ಹಾಡು ಬಾ ಕೋಗಿಲೆ
ನಲಿದಾಡು ಬಾರೆ ನವಿಲೇ…||

Haduu Baa Kogile song lyrics from Kannada Movie Veera Sankalpa starring Hunasuru Krishna Murthy, B M Venkatesh, B S Dwarakanath, Lyrics penned by Hunasuru Krishna Murthy Sung by P Nageswara Rao, Music Composed by Rajan-Nagendra, film is Directed by Hunasuru Krishna Murthy and film is released on 1964