Gaganadali Mugilaneri Lyrics

in Mahishasura Mardini

Video:

LYRIC

ಗಗನದಲಿ ಮುಗಿಲನೇರಿ ತೇಲಿ ಬರುವೆವು
ತೇಲಿ ಬರುವೆವು ಮಳೆಯ ಗಾಳಿ ತರುವೆವು
ಅಂದದ ಸುರಸುಂದರಿಯರು ಜಗಕೆ ಬಂದೆವು  
ಅಹ್ಹಅಂದದ ಸುರಸುಂದರಿಯರು ಜಗಕೆ ಬಂದೆವು    
 
|| ಗಗನದಲಿ ಮುಗಿಲನೇರಿ ತೇಲಿ ಬರುವೆವು
ತೇಲಿ ಬರುವೆವು ಮಳೆಯ ಗಾಳಿ ತರುವೆವು
ಅಂದದ ಸುರಸುಂದರಿಯರು ಜಗಕೆ ಬಂದೆವು  
ಅಹ್ಹಅಂದದ ಸುರಸುಂದರಿಯರು ಜಗಕೆ ಬಂದೆವು…||    
 
ಓಓಓ...ಬೆಳಕಿನ ಹೊಂಗಿರಣಗಳ ರಾಶಿ ಮೂಡಿಸಿ 
ಮೊಗ್ಗನರಳಿಸಿ ಮಧುರ ಗಂಧ ಕೆರಳಿಸಿ 
ಮೊಗ್ಗನರಳಿಸಿ ಮಧುರ ಗಂಧ ಕೆರಳಿಸಿ   
ಹೆಣ್ಣು ಗಂಡು ಜೋಡಿಗಳ
ಕಣ್ಣು ನೋಟದಾಟೊಗಳಲಿ  
ಕುಣಿಸಿ ತಣಿಸುವಾ ನಾವು ತಣಿಸಿ ಧಣಿಸುವಾ 
 
|| ಅಹ್ಹ ಅಂದಂದ ಸುರಸುಂದರಿಯರು ಜಗಕೆ ಬಂದೆವು 
ಗಗನದಲಿ ಮುಗಿಲನೇರಿ ತೇಲಿ ಬರುವೆವು
ತೇಲಿ ಬರುವೆವು ಮಳೆಯ ಗಾಳಿ ತರುವೆವು
ಅಂದದ ಸುರಸುಂದರಿಯರು ಜಗಕೆ ಬಂದೆವು  
ಅಹ್ಹಅಂದದ ಸುರಸುಂದರಿಯರು ಜಗಕೆ ಬಂದೆವು…||    
  
ಓಓಓಓಓ.....
ಕಾಮನ ಬಿಲ್ಲೇರಿ ಏಳು ಬಣ್ಣ ಬರೆಯುತಾ
ಹುರುಳನಾಡಿಸಿ ಹೆಣ್ಣು ಮನವ ಕಾಡಿಸಿ
ಹುರುಳನಾಡಿಸಿ ಹೆಣ್ಣು ಮನವ ಕಾಡಿಸಿ
ಕಾಮನ ಬಿಲ್ಲೇರಿ ಏಳು ಬಣ್ಣ ಬರೆಯುತಾ
ಹುರುಳನಾಡಿಸಿ ಹೆಣ್ಣು ಮನವ ಕಾಡಿಸಿ
ಮನಗಳಲ್ಲಿ ಪ್ರೇಮ ಚೆಲ್ಲಿ
ಸುಳಿವು ಸುತ್ತಿ ಪ್ರಣಯ ಬಿತ್ತಿ 
ತಂಪನೆರೆವೆವು ಜಗಕೆ ತಂಪು ಸುರಿವೆವು ಅಹ್ಹ
 
|| ಅಂದಂದ ಸುರಸುಂದರಿಯರು ಜಗಕೆ ಬಂದೆವು 
ಗಗನದಲಿ ಮುಗಿಲನೇರಿ ತೇಲಿ ಬರುವೆವು
ತೇಲಿ ಬರುವೆವು ಮಳೆಯ ಗಾಳಿ ತರುವೆವು
ಅಂದದ ಸುರಸುಂದರಿಯರು ಜಗಕೆ ಬಂದೆವು  
ಅಹ್ಹಅಂದದ ಸುರಸುಂದರಿಯರು ಜಗಕೆ ಬಂದೆವು…||   

Gaganadali Mugilaneri song lyrics from Kannada Movie Mahishasura Mardini starring Dr Rajkumar, V Nagaiah, Udayakumar, Lyrics penned by Chi Sadashivaiah Sung by S Janaki, Music Composed by G K Venkatesh, film is Directed by B S Ranga and film is released on 1959