Devaru Devaru Devarembuvaru Lyrics

ದೇವರು ದೇವರು ದೇವರೆಂಬುವರು Lyrics

in Kitthuru Chennamma

in ಕಿತ್ತೂರು ಚೆನ್ನಮ್ಮ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓಓಓಓಓ....‌ ಓಓಓಓಓ....
ದೇವರು ದೇವರು ದೇವರೆಂಬುವರು 
ದೇವರೆಲ್ಲಿಹನೆಂದು ಯಾರು ತೋರಿಸರು
ದೇವರು ದೇವರು ದೇವರೆಂಬುವರು 
ದೇವರೆಲ್ಲಿಹನೆಂದು ಯಾರು ತೋರಿಸರು
ಏನೇನೊ ಕಟ್ಟು ಕಥೆ ಹೇಳಿ ಹೋಗುವರು...  
ಓಯ್ ಏನೇನೊ ಕಟ್ಟು ಕಥೆ ಹೇಳಿ ಹೋಗುವರು...
ನನ್ನಂತೆ ಕೋಟಿ ಜನ ಪ್ರಶ್ನೆ ಕೇಳುವರು
ಸಂದೇಹ ನೀಗುವರು ಮುಂದೆ ಬರ್ರಣ್ಣ ..
ಸಂದೇಹ ನೀಗುವರು ಮುಂದೆ ಬರ್ರಣ್ಣ ..

(ದೇಸಾಯಿಯವರು ಒಳ್ಳೆ ಸವಾಲ ಹಾಕ್ಯಾರೆ
ಜವಾಬ ಕೊಡೋರು ಯಾರ್ಯಾರು
ಮುಂದೆ ಬರ್ರಪ್ಪ
ಆಗಲಪ್ಪ...ಹೇ  ಕುಂಡ್ರಲೇ... ಹ್ಹಾಂ)

ಸೂರ್ಯ ಚಂದ್ರರ ಚಲನ ನಿಲ್ಲೆಂದು ಹೇಳಿ  ಬಾ...
ಸೂರ್ಯ ಚಂದ್ರರ ಚಲನ ನಿಲ್ಲೆಂದು ಹೇಳಿ  ಬಾ     
ಸಾಗರ ಮಧ್ಯದ ನದಿ ನೀರನು ನೀನೆತ್ತಿ ಬಾ
ಸಾಗರ ಮಧ್ಯದ ನದಿ ನೀರನು ನೀನೆತ್ತಿ ಬಾ
ಮಲ್ಲಿಗೆ ಹೂವಿನ ಕಂಪನು ನೀನು  ಮುಟ್ಟಿ ಬಾ 
ಮಲ್ಲಿಗೆ ಹೂವಿನ ಕಂಪನು ನೀನು  ಮುಟ್ಟಿ ಬಾ 
ನಿನ್ನ ದೇವರ ನಿನಗೆ ತಂದು ತೋರುವೆನು...ತೋರುವೆನು 
 
ವ್ಹಾ... ವ್ಹಾ... ವ್ಹಾ... ವ್ಹಾ... 
 
ಮಗಳೇ ನೀನು ಅವನಿಗೊಂದು ಸವಾಲು ಹಾಕುವ... 
 
ನಾ ನೀರಲಿರುವಾಗ ನನಗೆ ಮಿತ್ರ
ನಾ ನೀರ ಮೇಲೆ ಬರೆ ನನಗೆ ಶತ್ರು 
ನಾ ನೀರಲಿರುವಾಗ ನನಗೆ ಮಿತ್ರ
ನಾ ನೀರ ಮೇಲೆ ಬರೆ ನನಗೆ ಶತ್ರು 
ಹಗಲೆಲ್ಲ ನಗುವಿನಲಿ ತೇಲಿಸುವನು... 
ಹಗಲೆಲ್ಲ ನಗುವಿನಲಿ ತೇಲಿಸುವನು...  
ಮೊಗಮುಚ್ಚಿ ಇರುಳೆಲ್ಲ ಅಲೆವೆ ನಾನು 
ನಾನಾರು ಅವನಾರು ಹೇಳು ಜಾಣ 
ನಾನಾರು ಅವನಾರು ಹೇಳು ಜಾಣ

(ನನ್ನ ಮಗಳ ಸವಾಲಿಗೆ ಏನ್ ಉತ್ತರ ಹೇಳ್ತಿಯಪ್ಪ)

ನಿನ್ನಂತೆ ಮೊಗವಿರುವುದೊಂದು ಹೂವು
ಆ ಹೂವ ದಳದಂತೆ ನಿನ್ನ ಕಣ್ಣು
ನಿನ್ನಂತೆ ಮೊಗವಿರುವುದೊಂದು ಹೂವು
ಆ ಹೂವ ದಳದಂತೆ ನಿನ್ನ ಕಣ್ಣು
ನೀರಿನಲಿ ನೇಸರನು ಅದಕೆ ಮಿತ್ರ
ನೀರ ಹೋರಗಿರೆ ಅವನೆ ಅದಕೆ ಶತ್ರು
ನೀರಿನಲಿ ನೇಸರನು ಅದಕೆ ಮಿತ್ರ
ನೀರ ಹೋರಗಿರೆ ಅವನೆ ಅದಕೆ ಶತ್ರು 
ಕಮಲೆಯನ್ನುವ ಹೆಸರು ನಿನಗೆ ಗೊತ್ತೆ..
ಕಮಲೆಯನ್ನುವ ಹೆಸರು ನಿನಗೆ ಗೊತ್ತೆ

(ಗೊತ್ತು... ಆ.. ಇದೇನ್ ಹೇಳಿ ನೋಡೋಣ...
ಹ್ಹಾಂ..   ಹೇಳಿ ನೋಡೋಣ)

ಕಣ್ಣಿಲ್ಲ ಕಾಲಿಲ್ಲ ಆದರು ಚಲಿಸುತಿದೆ...  
ಕಣ್ಣಿಲ್ಲ ಕಾಲಿಲ್ಲ ಆದರು ಚಲಿಸುತಿದೆ...
ಕೊಳ್ಳಲು ಅದು ಸಿಗದು ಕಾಣಲದು ಬರದು ಕಣ್ಣಿಲ್ಲ
ಕಾಲಿಲ್ಲ ಆದರು ಚಲಿಸುತಿದೆ...
ಬೆಲೆ ಕಟ್ಟದ ಒಡವೆ  ಎಲ್ಲ ಅಲ್ಲಿಹುದು... 
ಬೆಲೆ ಕಟ್ಟದ ಒಡವೆ  ಎಲ್ಲ ಅಲ್ಲಿಹುದು...
ಯಾವುದು ಎಲ್ಲಿದೆ ಬಲ್ಲಿದವ ಹೇಳಲ್ಲ
ಯಾವುದು ಎಲ್ಲಿದೆ ಬಲ್ಲಿದವ ಹೇಳಲ್ಲ

(ಅದನ್ನು ಅವರನ್ ಯಾಕ್ ಕೇಳ್ತೀರಿ
ನಾ ನಿಲ್ವೇ ಮಹಾನುಭವಿ ಹೇಳ್ತಿನಿ ಕೇಳ್ರಲ)

ಉಂಡ ಕೂಡಲೆ ಉಬ್ಬಿ ಗೋಟಾಳೆ ಮಾಡುವದು
ಹಸಿವಿನೊಂದಿಗೆ ಕುಣಿದು ತಾಳ ಹಾಕುವುದು      
ಉಂಡ ಕೂಡಲೆ ಉಬ್ಬಿ ಗೋಟಾಳೆ ಮಾಡುವದು
ಹಸಿವಿನೊಂದಿಗೆ ಕುಣಿದು ತಾಳು ಹಾಕುವುದು    
ಹಾಲೂಟ ಹೋಳಿಗೆಗೆ ಹಗಲೆಲ್ಲ ಕಾಯುವದು 
ಹಾಲು ಊಟ ಹೋಳಿಗೆಗೆ ಹಗಲೆಲ್ಲ ಕಾಯುವದು
ಹುಟ್ಟಿನೊಂದಿಗೆ ಬೆನ್ನ ಅಂಟಿ ಬಂದಿಹುದೊ 
ಹೊಟ್ಟೆ ಹೊಟ್ಟೆ ಹೊಟ್ಟೆ ಹೊಟ್ಟೆ...
ಅಹ್ಹಹ್ಹಹ ಅಹ್ಹಹ್ಹಹ್ಹ 
ಹೊಟ್ಟೆ ಅಲ್ಲವೇನು... ಹೇ..ಹೇ..ಹೇ..
ಹೊಟ್ಟೆ ಅಲ್ಲ ಇಲ್ಲಿ ಕೇಳು 
 
ಆಳು ಅರಸನ ಕಣ್ಣ ಭಾಷೆ ತಬ್ಬುವುದು  
ಕಲ್ಲು ಹಾಸಿಗೆ ಒಂದು ಲೆಕ್ಕಕೆ ತರದು 
ಆಳು ಅರಸನ ಕಣ್ಣ ಭಾಷೆ ತಬ್ಬುವುದು  
ಕಲ್ಲು ಹಾಸಿಗೆ ಒಂದು ಲೆಕ್ಕಕೆ ತರದು
ಎಚ್ಚರಿಕೆ ತಪ್ಪಲ್ಲದು
ಗೊರಕೆ ಹೊಡೆಯುವದು 
ಸ್ವಚ್ಛ ಮನದವರೊಡನೆ
ಸರಸವಾಡುವುದು ನಿದ್ದೆ 
ಸರಸವಾಡುವುದು ನಿದ್ದೆ
ಸರಸವಾಡುವುದು ನಿದ್ದೆ
ನಿದ್ದೆ ನಿದ್ದೆ ನಿದ್ದೆ 
ಇವರೆಲ್ಲೊ ಗೂಟ ನಿದ್ದೆಗಳಲ್ಲಿ
ರಸಿಕರೆಂದು ತೋರುತ್ತದೆ… 
 
(ಏಕೆ ಸೋತು ಹೋದರೇನು)   
ಹ್ಮ್.  ಸೋಲು.... 
ನನ್ನಲ್ಲಿ ನಿನ್ನಲ್ಲಿ ಎಲ್ಲರಲ್ಲಿಹುದು
ಒಂದೇ ಹೆಸರಿನ ಒಡನೆ ರೂಪ ಹಲವು 
ನನ್ನಲ್ಲಿ ನಿನ್ನಲ್ಲಿ ಎಲ್ಲರಲ್ಲಿಹುದು
ಒಂದೇ ಹೆಸರಿನ ಒಡನೆ ರೂಪ ಹಲವು 
ಮಾನವನ ದೇವತೆಯ ಮಾಡುವುದು ಕೆಲವು 
ಮಾನವನ ದೇವತೆಯ ಮಾಡುವುದು ಕೆಲವು 
ವಿಶ್ವ ಸೃಷ್ಟಿಯ ನಿಲುವೇ ಪ್ರೇಮಮಯವು 
ವಿಶ್ವ ಸೃಷ್ಟಿಯ ನಿಲುವೇ ಪ್ರೇಮಮಯವು ಆಹಾಆಆ...

ಓಓಓಓಓ....‌ ಓಓಓಓಓ....
ದೇವರು ದೇವರು ದೇವರೆಂಬುವರು 
ದೇವರೆಲ್ಲಿಹನೆಂದು ಯಾರು ತೋರಿಸರು
ದೇವರು ದೇವರು ದೇವರೆಂಬುವರು 
ದೇವರೆಲ್ಲಿಹನೆಂದು ಯಾರು ತೋರಿಸರು
ಏನೇನೊ ಕಟ್ಟು ಕಥೆ ಹೇಳಿ ಹೋಗುವರು...  
ಓಯ್ ಏನೇನೊ ಕಟ್ಟು ಕಥೆ ಹೇಳಿ ಹೋಗುವರು...
ನನ್ನಂತೆ ಕೋಟಿ ಜನ ಪ್ರಶ್ನೆ ಕೇಳುವರು
ಸಂದೇಹ ನೀಗುವರು ಮುಂದೆ ಬರ್ರಣ್ಣ ..
ಸಂದೇಹ ನೀಗುವರು ಮುಂದೆ ಬರ್ರಣ್ಣ ..

(ದೇಸಾಯಿಯವರು ಒಳ್ಳೆ ಸವಾಲ ಹಾಕ್ಯಾರೆ
ಜವಾಬ ಕೊಡೋರು ಯಾರ್ಯಾರು
ಮುಂದೆ ಬರ್ರಪ್ಪ
ಆಗಲಪ್ಪ...ಹೇ  ಕುಂಡ್ರಲೇ... ಹ್ಹಾಂ)

ಸೂರ್ಯ ಚಂದ್ರರ ಚಲನ ನಿಲ್ಲೆಂದು ಹೇಳಿ  ಬಾ...
ಸೂರ್ಯ ಚಂದ್ರರ ಚಲನ ನಿಲ್ಲೆಂದು ಹೇಳಿ  ಬಾ     
ಸಾಗರ ಮಧ್ಯದ ನದಿ ನೀರನು ನೀನೆತ್ತಿ ಬಾ
ಸಾಗರ ಮಧ್ಯದ ನದಿ ನೀರನು ನೀನೆತ್ತಿ ಬಾ
ಮಲ್ಲಿಗೆ ಹೂವಿನ ಕಂಪನು ನೀನು  ಮುಟ್ಟಿ ಬಾ 
ಮಲ್ಲಿಗೆ ಹೂವಿನ ಕಂಪನು ನೀನು  ಮುಟ್ಟಿ ಬಾ 
ನಿನ್ನ ದೇವರ ನಿನಗೆ ತಂದು ತೋರುವೆನು...ತೋರುವೆನು 
 
ವ್ಹಾ... ವ್ಹಾ... ವ್ಹಾ... ವ್ಹಾ... 
 
ಮಗಳೇ ನೀನು ಅವನಿಗೊಂದು ಸವಾಲು ಹಾಕುವ... 
 
ನಾ ನೀರಲಿರುವಾಗ ನನಗೆ ಮಿತ್ರ
ನಾ ನೀರ ಮೇಲೆ ಬರೆ ನನಗೆ ಶತ್ರು 
ನಾ ನೀರಲಿರುವಾಗ ನನಗೆ ಮಿತ್ರ
ನಾ ನೀರ ಮೇಲೆ ಬರೆ ನನಗೆ ಶತ್ರು 
ಹಗಲೆಲ್ಲ ನಗುವಿನಲಿ ತೇಲಿಸುವನು... 
ಹಗಲೆಲ್ಲ ನಗುವಿನಲಿ ತೇಲಿಸುವನು...  
ಮೊಗಮುಚ್ಚಿ ಇರುಳೆಲ್ಲ ಅಲೆವೆ ನಾನು 
ನಾನಾರು ಅವನಾರು ಹೇಳು ಜಾಣ 
ನಾನಾರು ಅವನಾರು ಹೇಳು ಜಾಣ

(ನನ್ನ ಮಗಳ ಸವಾಲಿಗೆ ಏನ್ ಉತ್ತರ ಹೇಳ್ತಿಯಪ್ಪ)

ನಿನ್ನಂತೆ ಮೊಗವಿರುವುದೊಂದು ಹೂವು
ಆ ಹೂವ ದಳದಂತೆ ನಿನ್ನ ಕಣ್ಣು
ನಿನ್ನಂತೆ ಮೊಗವಿರುವುದೊಂದು ಹೂವು
ಆ ಹೂವ ದಳದಂತೆ ನಿನ್ನ ಕಣ್ಣು
ನೀರಿನಲಿ ನೇಸರನು ಅದಕೆ ಮಿತ್ರ
ನೀರ ಹೋರಗಿರೆ ಅವನೆ ಅದಕೆ ಶತ್ರು
ನೀರಿನಲಿ ನೇಸರನು ಅದಕೆ ಮಿತ್ರ
ನೀರ ಹೋರಗಿರೆ ಅವನೆ ಅದಕೆ ಶತ್ರು 
ಕಮಲೆಯನ್ನುವ ಹೆಸರು ನಿನಗೆ ಗೊತ್ತೆ..
ಕಮಲೆಯನ್ನುವ ಹೆಸರು ನಿನಗೆ ಗೊತ್ತೆ

(ಗೊತ್ತು... ಆ.. ಇದೇನ್ ಹೇಳಿ ನೋಡೋಣ...
ಹ್ಹಾಂ..   ಹೇಳಿ ನೋಡೋಣ)

ಕಣ್ಣಿಲ್ಲ ಕಾಲಿಲ್ಲ ಆದರು ಚಲಿಸುತಿದೆ...  
ಕಣ್ಣಿಲ್ಲ ಕಾಲಿಲ್ಲ ಆದರು ಚಲಿಸುತಿದೆ...
ಕೊಳ್ಳಲು ಅದು ಸಿಗದು ಕಾಣಲದು ಬರದು ಕಣ್ಣಿಲ್ಲ
ಕಾಲಿಲ್ಲ ಆದರು ಚಲಿಸುತಿದೆ...
ಬೆಲೆ ಕಟ್ಟದ ಒಡವೆ  ಎಲ್ಲ ಅಲ್ಲಿಹುದು... 
ಬೆಲೆ ಕಟ್ಟದ ಒಡವೆ  ಎಲ್ಲ ಅಲ್ಲಿಹುದು...
ಯಾವುದು ಎಲ್ಲಿದೆ ಬಲ್ಲಿದವ ಹೇಳಲ್ಲ
ಯಾವುದು ಎಲ್ಲಿದೆ ಬಲ್ಲಿದವ ಹೇಳಲ್ಲ

(ಅದನ್ನು ಅವರನ್ ಯಾಕ್ ಕೇಳ್ತೀರಿ
ನಾ ನಿಲ್ವೇ ಮಹಾನುಭವಿ ಹೇಳ್ತಿನಿ ಕೇಳ್ರಲ)

ಉಂಡ ಕೂಡಲೆ ಉಬ್ಬಿ ಗೋಟಾಳೆ ಮಾಡುವದು
ಹಸಿವಿನೊಂದಿಗೆ ಕುಣಿದು ತಾಳ ಹಾಕುವುದು      
ಉಂಡ ಕೂಡಲೆ ಉಬ್ಬಿ ಗೋಟಾಳೆ ಮಾಡುವದು
ಹಸಿವಿನೊಂದಿಗೆ ಕುಣಿದು ತಾಳು ಹಾಕುವುದು    
ಹಾಲೂಟ ಹೋಳಿಗೆಗೆ ಹಗಲೆಲ್ಲ ಕಾಯುವದು 
ಹಾಲು ಊಟ ಹೋಳಿಗೆಗೆ ಹಗಲೆಲ್ಲ ಕಾಯುವದು
ಹುಟ್ಟಿನೊಂದಿಗೆ ಬೆನ್ನ ಅಂಟಿ ಬಂದಿಹುದೊ 
ಹೊಟ್ಟೆ ಹೊಟ್ಟೆ ಹೊಟ್ಟೆ ಹೊಟ್ಟೆ...
ಅಹ್ಹಹ್ಹಹ ಅಹ್ಹಹ್ಹಹ್ಹ 
ಹೊಟ್ಟೆ ಅಲ್ಲವೇನು... ಹೇ..ಹೇ..ಹೇ..
ಹೊಟ್ಟೆ ಅಲ್ಲ ಇಲ್ಲಿ ಕೇಳು 
 
ಆಳು ಅರಸನ ಕಣ್ಣ ಭಾಷೆ ತಬ್ಬುವುದು  
ಕಲ್ಲು ಹಾಸಿಗೆ ಒಂದು ಲೆಕ್ಕಕೆ ತರದು 
ಆಳು ಅರಸನ ಕಣ್ಣ ಭಾಷೆ ತಬ್ಬುವುದು  
ಕಲ್ಲು ಹಾಸಿಗೆ ಒಂದು ಲೆಕ್ಕಕೆ ತರದು
ಎಚ್ಚರಿಕೆ ತಪ್ಪಲ್ಲದು
ಗೊರಕೆ ಹೊಡೆಯುವದು 
ಸ್ವಚ್ಛ ಮನದವರೊಡನೆ
ಸರಸವಾಡುವುದು ನಿದ್ದೆ 
ಸರಸವಾಡುವುದು ನಿದ್ದೆ
ಸರಸವಾಡುವುದು ನಿದ್ದೆ
ನಿದ್ದೆ ನಿದ್ದೆ ನಿದ್ದೆ 
ಇವರೆಲ್ಲೊ ಗೂಟ ನಿದ್ದೆಗಳಲ್ಲಿ
ರಸಿಕರೆಂದು ತೋರುತ್ತದೆ… 
 
(ಏಕೆ ಸೋತು ಹೋದರೇನು)   
ಹ್ಮ್.  ಸೋಲು.... 
ನನ್ನಲ್ಲಿ ನಿನ್ನಲ್ಲಿ ಎಲ್ಲರಲ್ಲಿಹುದು
ಒಂದೇ ಹೆಸರಿನ ಒಡನೆ ರೂಪ ಹಲವು 
ನನ್ನಲ್ಲಿ ನಿನ್ನಲ್ಲಿ ಎಲ್ಲರಲ್ಲಿಹುದು
ಒಂದೇ ಹೆಸರಿನ ಒಡನೆ ರೂಪ ಹಲವು 
ಮಾನವನ ದೇವತೆಯ ಮಾಡುವುದು ಕೆಲವು 
ಮಾನವನ ದೇವತೆಯ ಮಾಡುವುದು ಕೆಲವು 
ವಿಶ್ವ ಸೃಷ್ಟಿಯ ನಿಲುವೇ ಪ್ರೇಮಮಯವು 
ವಿಶ್ವ ಸೃಷ್ಟಿಯ ನಿಲುವೇ ಪ್ರೇಮಮಯವು ಆಹಾಆಆ...

Devaru Devaru Devarembuvaru song lyrics from Kannada Movie Kitthuru Chennamma starring M V Rajamma, B Sarojadevi, Leelavathi, Lyrics penned by G V Iyer Sung by P B Srinivas, Music Composed by T G Lingappa, film is Directed by B R Panthulu and film is released on 1961

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ