Irabekanna Irabeku Lyrics

in Kaiwara Mahathme

Video:

LYRIC

ಇರಬೇಕಣ್ಣ ಇರಬೇಕು…
ಊರಿನಲಿರುವ ನಾಕು ಜನರಿಗೆ
ಬೇಕೆನುವಂಥದು ಇರಬೇಕು
ಕಂಡರೆಯದನು ಕೊಡಬೇಕು
 
|| ಇರಬೇಕಣ್ಣ ಇರಬೇಕು….||
 
ಕೇರಿಯಲೊಂದು ಹೆಮ್ಮಾರಿ
ಇದು ಊರಿನಲ್ಲೊಂದು ಉರಿಮಾರಿ
ಕೇರಿಯಲೊಂದು ಹೆಮ್ಮಾರಿ
ಇದು ಊರಿನಲ್ಲೊಂದು ಉರಿಮಾರಿ
ಇದ್ದರೂ ಅಂಜದೆ ಇರಬೇಕು
ಎಂದರೆ ಇದನು ಕೊಡಬೇಕು…
 
|| ಇರಬೇಕಣ್ಣ ಇರಬೇಕು….||
 
ಯಂತ್ರವಿದೊಂದನು ಕಟ್ಟಲು
ವೈಕುಂಠವದೊಂದೆ ಮೆಟ್ಟಲು
ಯಂತ್ರವಿದೊಂದನು ಕಟ್ಟಲು
ವೈಕುಂಠವದೊಂದೆ ಮೆಟ್ಟಲು
ಮಾತ್ರಯಿದೊಂದನು ನುಂಗಲು
ಕೈಲಾಸವದಿಲ್ಲೆ ಕಾಣಲು..
 
|| ಇರಬೇಕಣ್ಣ ಇರಬೇಕು….||
 
ಅಮರನಾರೇಯಣ ಯಂತ್ರಕೆ
ಭೀಮಲಿಂಗನ ವಿಭೂದಿಗೆ
ಸಾಲವಾದರೂ ಚಿಂತೆಯಿಲ್ಲ
ಸಾಲವಾದರೂ ಚಿಂತೆಯಿಲ್ಲ
ಶೂಲದೇರಿದರೂ ಭಯವಿಲ್ಲ
 
|| ಇರಬೇಕಣ್ಣ ಇರಬೇಕು….||
 
ಸಂಬ್ರಾಣಿ ಹೊಗೆಯ ಹಾಕಿರಿ
ಹೂತಿಟ್ಟ ಹಣ ನೋಡಿರಿ
ಭೂತ ಪಿಶಾಚಿ ಬಂದರೆ
ಭೂತ ಪಿಶಾಚಿ ಬಂದರೆ
ಏತಕೆ ನಿಮಗೆ ತೊಂದರೆ…
 
|| ಇರಬೇಕಣ್ಣ ಇರಬೇಕು…
ಊರಿನಲಿರುವ ನಾಕು ಜನರಿಗೆ
ಬೇಕೆನುವಂಥದು ಇರಬೇಕು
ಕಂಡರೆಯದನು ಕೊಡಬೇಕು
ಇರಬೇಕಣ್ಣ ಇರಬೇಕು….||

Irabekanna Irabeku song lyrics from Kannada Movie Kaiwara Mahathme starring Dr Rajkumar, Narasimharaju, Balakrishna, Lyrics penned by G V Iyer Sung by S Janaki, Music Composed by G K Venkatesh, film is Directed by T V Singh Takur and film is released on 1961