Eno Entho Jum Endithu Lyrics

in Amarashilpi Jakanachari

LYRIC

ಏನೋ…. ಎಂತೋ,
ಜುಮ್ಮೆಂದಿತು ತನುವು ಬೆಚ್ಚಿತು ಮನವು
ಏಕೋ ಕಾಣೆನು ಎಂದೂ ಅರಿಯೆನು,
ಇಂತ ಸವಿ ನೋವ ಸುಖವಾಂತ ಅನುಭಾವ

|| ಏನೋ…. ಎಂತೋ,
ಜುಮ್ಮೆಂದಿತು ತನುವು ಬೆಚ್ಚಿತು ಮನವು
ಏಕೋ ಕಾಣೆನು ಎಂದೂ ಅರಿಯೆನು,
ಇಂತ ಸವಿ ನೋವ ಸುಖವಾಂತ ಅನುಭಾವ…||

ಪ್ರಣಯ ಗಾಳಿ ಬೀಸೆ,
ತೆರೆಯಿತು ಕಣ್ಣ ಮನದೊಳಾಸೆ
ಆ…ಆ…ಆ….ಆಆಆ……
ಪ್ರಣಯ ಗಾಳಿ ಬೀಸೆ,
ತೆರೆಯಿತು ಕಣ್ಣ ಮನದೊಳಾಸೆ
ನಿನ್ನ ಸೋಕಲು ಮೈ ಅರಳಿತು
ಯೌವನವು ಸೂಸಿ…

|| ಏನೋ ಎಂತೋ…||
 
ಕಣ್ಣು ಕಣ್ಣು ಕಲೆಯೆ,
ಚಿನ್ನದ ಕನಸು ಮೂಡಿ ನಲಿಯೆ
ಆ…ಆ…ಆ….ಆಆಆ……
ಕಣ್ಣು ಕಣ್ಣು ಕಲೆಯೆ,
ಚಿನ್ನದ ಕನಸು ಮೂಡಿ ನಲಿಯೆ
ಹುಣ್ಣಿಮೆ ಚಂದ್ರನ ತಣ್ಣನೆ
ಬೆಳಕಲಿ ಹಣ್ಣಾಯಿತು ಪ್ರೇಮ

|| ಏನೋ ಎಂತೋ….||
 
ಗಾನ ಭಾವ ನೀನೆ,
ನನ್ನ ಪ್ರಾಣ ದೇವ ನೀನೆ
ನನ್ನ ರೂಪಿಸಿ ವೀಣೆಯಾಗಿಸಿ
ವಾಸಿಸುವವ ನೀನೆ

|| ಏನೋ ಎಂತೋ ||

ನಗುತ ನಲಿದು ಬಾರೆ,
ನನ್ನ ಭವ್ಯ ಭಾಗ್ಯ ತಾರೆ
ನನ್ನ ಕಲೆಗೆ ನವ ಕಳೆಯನಿತ್ತ
ಸೌಂದರ್ಯ ನಿಧಿಯ ತೋರೆ

|| ಏನೋ…. ಎಂತೋ,
ಜುಮ್ಮೆಂದಿತು ತನುವು ಬೆಚ್ಚಿತು ಮನವು
ಏಕೋ ಕಾಣೆನು ಎಂದೂ ಅರಿಯೆನು,
ಇಂತ ಸವಿ ನೋವ ಸುಖವಾಂತ ಅನುಭಾವ…||

Eno Entho Jum Endithu song lyrics from Kannada Movie Amarashilpi Jakanachari starring Kalyan Kumar, B Sarojadevi, Udayakumar, Lyrics penned by Chi Sadashivaiah Sung by Ghantasala, P Susheela, Music Composed by S Rajeshwara Rao, film is Directed by B S Ranga and film is released on 1964