Bareyada Mounada Kavithe Lyrics

ಬರೆಯದ ಮೌನದ ಕವಿತೆ Lyrics

in Sparsha

in ಸ್ಪರ್ಶ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬರೆಯದ ಮೌನದ ಕವಿತೆ ಹಾಡಾಯಿತು
ಎದೆಯಲಿ ನೆನಪಿನ ನೋವು ಸುಖ ತಂದಿತು

ಬರೆಯದ ಮೌನದ ಕವಿತೆ ಹಾಡಾಯಿತು
ಎದೆಯಲಿ ನೆನಪಿನ ನೋವು ಸುಖ ತಂದಿತು
ಹೃದಯದಿ ಪ್ರೇಮತರಂಗ ನೀ ಮೀಟಿದೆ 
ಬದುಕಿಗೆ ನೂತನ ಅರ್ಥ ನೀ ನೀಡಿದೆ
ಸುಮಧುರ ಅನುಭವ ನೂರು ನಾ ನೋಡಿದೆ
ನಡೆಯುವ ಮುಂದಿನ ದಾರಿ ಮರೆ ಎಂದಿದೆ
ನಡೆ ಎಂದಿದೆ ಗುರಿ ತೋರಿದೆ
ಹೃದಯದಿ ಪ್ರೇಮತರಂಗ ನೀ ಮೀಟಿದೆ 
ಬದುಕಿಗೆ ನೂತನ ಅರ್ಥ ನೀ ನೀಡಿದೆ

ಓ....ಹೂವ ಕಂಪು ಪರರಿಗಾಗಿ ಸಫಲ ಜನ್ಮವೂ...
ಪರರ ಬಾಳು ಬೆಳಗಿದಾಗ ಬಾಳು ಪೂರ್ಣವೂ ...
ಓ....ಕಾಲ ಬರೆದ ಹೊಸತು ಹಾಡು ಹಾಡಲಾರೆನು....
ಮನದ ಪುಟದಿ ಬರೆದ ಗೀತೆ ಮರೆಯಲಾರೆನು....
ಎಲ್ಲಿಯ ಬಂಧವೊ ಕಾಣೆ ಬೆಸೆಯಿತು ಜೀವಕೆಜೀವ
ಅರ್ಪಣೆ ಮಾಡುವೆ ನಿನಗೆ ನನ್ನೀ ಹೃದಯದ ಭಾವ
 
|| ಬರೆಯದ ಮೌನದ ಕವಿತೆ ಹಾಡಾಯಿತು
ಎದೆಯಲಿ ನೆನಪಿನ ನೋವು ಸುಖ ತಂದಿತು
ಸುಮಧುರ ಅನುಭವ ನೂರು ನಾ ನೋಡಿದೆ
ನಡೆಯುವ ಮುಂದಿನ ದಾರಿ ಮರೆ ಎಂದಿದೆ
ನಡೆ ಎಂದಿದೆ ಗುರಿ ತೋರಿದೆ ||

 
ಆ....ಆ....
ಯಾವ ಹೂವು ಯಾರ ಮುಡಿಗೋ ಅವನ ಆಟದಿ...
ಚೈತ್ರ ಬಂದು ಹೋಯಿತನ್ನು ನನ್ನ ತೋಟದಿ...
ಓ....ಓ...
ತಂತಿ ಹರಿದ ವೀಣೆಯಲ್ಲಿ ಶ್ರುತಿಯ ಕಂಡೆನು...
ನುಡಿಸುವವನು ಸ್ವರವ ಬೆರೆಸೆ ಸಾಟಿ ಕಾಣೆನು....
ಬಾಳಲಿ ಪಡೆದುದು ಏನೋ
ಅರಿಯದೆ ಕಳೆದುದು ಏನೋ
ಕಾಣದ ಕೈಗಳ ಸ್ಪರ್ಶ ಮುಂದೆ ತರುವುದು ಏನೋ
 
ಸ ಸ ನಿ ಸ ಸ ಗ ಸ ಸ ರಿ ಸ ಸ

|| ಹೃದಯದಿ ಪ್ರೇಮತರಂಗ ನೀ ಮೀಟಿದೆ
ಬದುಕಿಗೆ ನೂತನ ಅರ್ಥ ನೀ ನೀಡಿದೆ
ಸುಮಧುರ ಅನುಭವ ನೂರು ನಾ ನೋಡಿದೆ
ನಡೆಯುವ ಮುಂದಿನ ದಾರಿ
ಮರೆ ಎಂದಿದೆ ನಡೆ ಎಂದಿದೆ ಗುರಿ ತೋರಿದೆ ||

ಬರೆಯದ ಮೌನದ ಕವಿತೆ ಹಾಡಾಯಿತು
ಎದೆಯಲಿ ನೆನಪಿನ ನೋವು ಸುಖ ತಂದಿತು

ಬರೆಯದ ಮೌನದ ಕವಿತೆ ಹಾಡಾಯಿತು
ಎದೆಯಲಿ ನೆನಪಿನ ನೋವು ಸುಖ ತಂದಿತು
ಹೃದಯದಿ ಪ್ರೇಮತರಂಗ ನೀ ಮೀಟಿದೆ 
ಬದುಕಿಗೆ ನೂತನ ಅರ್ಥ ನೀ ನೀಡಿದೆ
ಸುಮಧುರ ಅನುಭವ ನೂರು ನಾ ನೋಡಿದೆ
ನಡೆಯುವ ಮುಂದಿನ ದಾರಿ ಮರೆ ಎಂದಿದೆ
ನಡೆ ಎಂದಿದೆ ಗುರಿ ತೋರಿದೆ
ಹೃದಯದಿ ಪ್ರೇಮತರಂಗ ನೀ ಮೀಟಿದೆ 
ಬದುಕಿಗೆ ನೂತನ ಅರ್ಥ ನೀ ನೀಡಿದೆ

ಓ....ಹೂವ ಕಂಪು ಪರರಿಗಾಗಿ ಸಫಲ ಜನ್ಮವೂ...
ಪರರ ಬಾಳು ಬೆಳಗಿದಾಗ ಬಾಳು ಪೂರ್ಣವೂ ...
ಓ....ಕಾಲ ಬರೆದ ಹೊಸತು ಹಾಡು ಹಾಡಲಾರೆನು....
ಮನದ ಪುಟದಿ ಬರೆದ ಗೀತೆ ಮರೆಯಲಾರೆನು....
ಎಲ್ಲಿಯ ಬಂಧವೊ ಕಾಣೆ ಬೆಸೆಯಿತು ಜೀವಕೆಜೀವ
ಅರ್ಪಣೆ ಮಾಡುವೆ ನಿನಗೆ ನನ್ನೀ ಹೃದಯದ ಭಾವ
 
|| ಬರೆಯದ ಮೌನದ ಕವಿತೆ ಹಾಡಾಯಿತು
ಎದೆಯಲಿ ನೆನಪಿನ ನೋವು ಸುಖ ತಂದಿತು
ಸುಮಧುರ ಅನುಭವ ನೂರು ನಾ ನೋಡಿದೆ
ನಡೆಯುವ ಮುಂದಿನ ದಾರಿ ಮರೆ ಎಂದಿದೆ
ನಡೆ ಎಂದಿದೆ ಗುರಿ ತೋರಿದೆ ||

 
ಆ....ಆ....
ಯಾವ ಹೂವು ಯಾರ ಮುಡಿಗೋ ಅವನ ಆಟದಿ...
ಚೈತ್ರ ಬಂದು ಹೋಯಿತನ್ನು ನನ್ನ ತೋಟದಿ...
ಓ....ಓ...
ತಂತಿ ಹರಿದ ವೀಣೆಯಲ್ಲಿ ಶ್ರುತಿಯ ಕಂಡೆನು...
ನುಡಿಸುವವನು ಸ್ವರವ ಬೆರೆಸೆ ಸಾಟಿ ಕಾಣೆನು....
ಬಾಳಲಿ ಪಡೆದುದು ಏನೋ
ಅರಿಯದೆ ಕಳೆದುದು ಏನೋ
ಕಾಣದ ಕೈಗಳ ಸ್ಪರ್ಶ ಮುಂದೆ ತರುವುದು ಏನೋ
 
ಸ ಸ ನಿ ಸ ಸ ಗ ಸ ಸ ರಿ ಸ ಸ

|| ಹೃದಯದಿ ಪ್ರೇಮತರಂಗ ನೀ ಮೀಟಿದೆ
ಬದುಕಿಗೆ ನೂತನ ಅರ್ಥ ನೀ ನೀಡಿದೆ
ಸುಮಧುರ ಅನುಭವ ನೂರು ನಾ ನೋಡಿದೆ
ನಡೆಯುವ ಮುಂದಿನ ದಾರಿ
ಮರೆ ಎಂದಿದೆ ನಡೆ ಎಂದಿದೆ ಗುರಿ ತೋರಿದೆ ||

Bareyada Mounada Kavithe song lyrics from Kannada Movie Sparsha starring Sudeep, Rekha, Sudharani, Lyrics penned by R N Jayagopal Sung by Pankaj Udas, Kavitha Krishnamurthy, Archana, Music Composed by Hamsalekha, film is Directed by Sunil Kumar Desai and film is released on 2000
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ