Kudure Kudure Lyrics

in Shrungara Raja

Video:

LYRIC

-
ಕುದುರೆ ಕುದುರೆ ಮದವೇರಿದ ಹುಚ್ಚುಕುದುರೆ
ಕುದುರೆ ಕುದುರೆ ಮದವೇರಿದ ಬಿಚ್ಚುಕುದುರೆ
ಹಿಡಿಯೋ ಕುಡಿಯೋ ಶ್ರೀರಾಮರಸಂ ಶ್ರೀರಾಮರಸಂ
ಕುದುರೆ ಕುದುರೆ ಮದವೇರಿದ ಹುಚ್ಚುಕುದುರೆ
 
ಚದುರೆಯ ಕೈಲಿ ಕುಡಿದವರು ಅಸುರರಾಗೋದು ಕಾಣೆ
ಮದಿರೆಯ ಬಾಯಿಗೆ ಬಿದ್ದವರು ಸುರರು ಆಗೋದು ಕಾಣೆ
ಮದಿರೆಯು ಮಾರಕವಂತೆ ಚದುರೆಯು ಮಾದಕವಂತೆ
ಮದಿರೆಗೆ ಏರಿಸಿ ಗೊತ್ತು ಚದುರೆಗೆ ಸೋಲಿಸಿ ಗೊತ್ತು
ನರರೆಲ್ಲ ವಾನರರೆಲ್ಲ ಶ್ರೀರಾಮನ ನೆಪದೊಳಗೆ
 
||ಕುದುರೆ ಕುದುರೆ ಮದವೇರಿದ ಹುಚ್ಚುಕುದುರೆ
ಕುದುರೆ ಕುದುರೆ ಮದವೇರಿದ ಬಿಚ್ಚುಕುದುರೆ
ಹಿಡಿಯೋ ಕುಡಿಯೋ ಶ್ರೀರಾಮರಸಂ ಶ್ರೀರಾಮರಸಂ||
 
||ಕುದುರೆ ಕುದುರೆ ಮದವೇರಿದ ಹುಚ್ಚುಕುದುರೆ||
 
ಈಟಿಂಗ್‌ ಸ್ಲೀಪಿಂಗ್‌ ಫೈಟಿಂಗ್‌ ಮುಖ್ಯ ಕೆಲಸಗಳು ಮೂರು
ಇದು ಬಿಟ್ಟು ನರನಿಗೆ ಭೂಮಿಯಲಿ ಬದುಕು ಮಾಡೋದು ಬೋರು
ಸಿಕ್ಕರೆ ಕುಡಿಯುವನಿವನು ಕುಡಿದರೆ ಕುಣಿಯುವನಿವನು
ಕುಣಿಯುತ ಭೂಮಿಗೆ ಬಂದ ದಾರಿಯ ಹುಡುಕುವನಿವನು
ನರರೆಲ್ಲ ವಾನರರೆಲ್ಲ ಶ್ರೀರಾಮನ ನೆಪದೊಳಗೆ
 
||ಕುದುರೆ ಕುದುರೆ ಮದವೇರಿದ ಹುಚ್ಚುಕುದುರೆ
ಕುದುರೆ ಕುದುರೆ ಮದವೇರಿದ ಬಿಚ್ಚುಕುದುರೆ
ಹಿಡಿಯೋ ಕುಡಿಯೋ ಶ್ರೀರಾಮರಸಂ ಶ್ರೀರಾಮರಸಂ||
 
||ಕುದುರೆ ಕುದುರೆ ಮದವೇರಿದ ಹುಚ್ಚುಕುದುರೆ||
 

Kudure Kudure song lyrics from Kannada Movie Shrungara Raja starring Shashikumar, Ranjitha, Vajramuni, Lyrics penned by Hamsalekha Sung by Manjula Gururaj, Music Composed by Hamsalekha, film is Directed by Anand and film is released on 1993