Olave Olave Mandaaravaythu Lyrics

in Olave Mandara

Video:

LYRIC

ಲವ್‌ ಲವ್‌ ಲವ್‌ ಲವ್
 
ಒಲವೇ ಒಲವೇ ಮಂದಾರವಾಯ್ತು
ನನ್ನ ಜೀವಕೆ
ಹೃದಯ ಹಣೆಯ ಸಿಂಧೂರವಾಯ್ತು
ಕಂಡ ಪ್ರೀತಿಗೆ
ಕಾಣೋ ಎಲ್ಲ ಕ್ಷಣವು ಕೂಡ
ಬರೆದೆ ನಿನ್ನ ಹಾಡ..
ನೀ ಬಾ… ನೀ ಬಾ…
ದಾರಿ ಕಾದಿರುವೆ ನಾ..
 
||ಒಲವೇ ಒಲವೇ ಮಂದಾರವಾಯ್ತು
ನನ್ನ ಜೀವಕೆ||
 
ನಿನ್ನ ಕಣ್ಣ ಬೆಳದಿಂಗಳಾಚೆ
ಒಬಂಟ್ಟಿ ಚಂದ್ರ ನಾನಾಗಿ ಇದ್ದೆ.ಏಏಏ
ನಿನ್ನ ಎದೆಯ ಸಿಹಿ ಹಾಲ ಬೆಲೆಯ
ಮಗುವಾಗೊ ಸುಖವ ಕಳಕೊಳ್ಳುತ್ತಿದ್ದೆ
ಅಡಿ ಅಡಿಯಲಿ ಗುಡಿ ಗೋಪುರ ಎಡ ತಾಕುತಲಿರಲಿ
ಗಡಿ ಗಡಿಯಲಿ ಅಡೆತಡೆಗಳು ಎದುರಾಗುತಲಿರಲಿ
ದಿಕ್ಕಿನ ಪ್ರತಿ ತವಕದ ಬಿಸಿಯುಸಿರೆ ಸಾಕು
ಅರೆಕ್ಷಣದಲಿ ನೀನೆಲ್ಲಿಯೊ ನಾನಲ್ಲಿರಬೇಕು
ದೇಹದ ಆಚೆಗು ದೇಶದ ಆಚೆಗು ಪ್ರೀತಿಸುವೇ ಗೆಳತಿ
ಐ ಆಮ್‌ ಸಾರಿ ಪ್ರೀತಿ ಐ ಆಮ್‌ ರಿಯಲ್ಲಿ ಸಾರಿ
 
||ಒಲವೇ ಒಲವೇ ಮಂದಾರವಾಯ್ತು
ನನ್ನ ಜೀವಕೆ||
 
ನಡೆಯೊ ದಾರಿ ಮುಳ್ಳಾದರೂನು
ಸುಳ್ಳಾಗದಮ್ಮಈ ನನ್ನ ಪ್ರೀತಿ
ತಪ್ಪು ಒಪ್ಪು ನೂರಿದ್ದರೂನು
ಚೂರಾಗದಮ್ಮ ಮುಗ್ದ ಪ್ರೀತಿ
ಪ್ರೀತಿಯ ಹುಡುಕಾಡುವ
ಪಯಣಿಗನು ನಾನು
ಇಡಿ ಜೀವನ ಚಡಪಡಿಕೆಗೆ
ಕಾರಣಳು ನೀನು
ನೀನಿಲ್ಲದ ಭೂಮಿಯು
ಮರುಭೂಮಿಯು ನಿನಗೆ
ನಿನ ನೆನಪಿನ ಮಳೆ ಬಿದ್ದರೆ
ಮರುಜನ್ಮವು ನನಗೆ
ಕಾಲದ ಆಚೆಗು ಕಾರಣದಾಚೆಗು
ಪ್ರೀತಿಸುವೇ ಒಡತಿ..
 
||ಒಲವೇ ಒಲವೇ ಮಂದಾರವಾಯ್ತು
ನನ್ನ ಜೀವಕೆ
ಹೃದಯ ಹಣೆಯ ಸಿಂಧೂರವಾಯ್ತು
ಕಂಡ ಪ್ರೀತಿಗೆ
ಕಾಣೋ ಎಲ್ಲ ಕ್ಷಣವು ಕೂಡ
ಬರೆದೆ ನಿನ್ನ ಹಾಡ..
ನೀ ಬಾ… ನೀ ಬಾ…
ದಾರಿ ಕಾದಿರುವೆ ನಾ..||

Olave Mandaaravaythu song lyrics from Kannada Movie Olave Mandara starring Srikanth, Akanksha, Rangayana Raghu, Lyrics penned by K Kalyan Sung by Rajesh Krishnan, Nanditha, Music Composed by Deva, film is Directed by Jayatheertha and film is released on 2011