ಹೆಣ್ಣು : ಕೃಷ್ಣಾ....
ಗಂಡು : ರಾಧಾ....
ಹೆಣ್ಣು : ಕೃಷ್ಣಾ....
ಗಂಡು : ರಾಧಾ....
ಹೆಣ್ಣು : ನಿಂಗೆ ಒಂದು ಹ್ಯಾಪಿ ನ್ಯೂಸ್
ಗಂಡು : ನಿಂಗೂ ಒಂದು ಹ್ಯಾಪಿ ನ್ಯೂಸ್
ಹೆಣ್ಣು : ಮೊದಲು ನಾನ್ ಹೇಳ್ತೀನಿ...
ಗಂಡು : ಇಲ್ಲಾ.. ನಾನ್ ಹೇಳ್ತೀನಿ..
ಹೆಣ್ಣು : ನೋ ನೋ ನೋ ಲೇಡಿಸ್ ಫಸ್ಟ್
ಗಂಡು : ಹ್ಹಾಂ ... ಸರಿ ನೀನೇ ಹೇಳು…
ಹೆಣ್ಣು : ಕದ್ದು ಕದ್ದು ಪ್ರೀತಿ ಮಾಡೋ ಕಳ್ಳಾಟ ಬೇಕಾಗಿಲ್ಲಾ..
ನಮ್ಮಪ್ಪ ಅಮ್ಮಾ ಒಪ್ಪಿಕೊಂಡು
ನಿಮ್ಮಪ್ಪ ಅಮ್ಮಾ ಒಪ್ಪಿಕೊಂಡು
ಗಂಡ ಹೆಂಡತಿ ಆಗ್ತೀವಲ್ಲಾ...
ಗಂಡು : ನಾನ್ ಹೇಳೋದು ಅದೇ...
ಕದ್ದು ಕದ್ದು ಪ್ರೀತಿ ಮಾಡೋ ಕಳ್ಳಾಟ ಬೇಕಾಗಿಲ್ಲಾ..
ನಮ್ಮಪ್ಪ ಅಮ್ಮಾ ಒಪ್ಪಿಕೊಂಡು
ನಿಮ್ಮಪ್ಪ ಅಮ್ಮಾ ಒಪ್ಪಿಕೊಂಡು
ಗಂಡ ಹೆಂಡತಿ ಆಗ್ತೀವಲ್ಲಾ...
|| ಹೆಣ್ಣು : ಕದ್ದು ಕದ್ದು
ಗಂಡು : ಪ್ರೀತಿ ಮಾಡೋ
ಹೆಣ್ಣು : ಕಳ್ಳಾಟ ಬೇಕಾಗಿಲ್ಲಾ..
ಗಂಡು : ಕಳ್ಳಾಟ ಬೇಕಾಗಿಲ್ಲಾ.. ಹ್ಹಾಂ ...||
ಗಂಡು : ಡ್ಯೂಯೆಟ್ ಅಂದ್ರೆ ಸಾಕಿ ಬೆಟ್ಟಗುಡ್ಡ ಹತ್ತಿ..
ಮರ ಸುತ್ತ ಬೇಕಾಗಿಲ್ಲಾ..
ಹೂವು ನೀನೆಂಬಾ ದುಂಬಿ ನಾನೆಂಬಾ
ಸವಕಲು ಸಾಹಿತ್ಯ ಸಾಕಲ್ಲಾ..
ಹೆಣ್ಣು : ಹಾಗಾದರೆ ಏನ್ಮಾಡಬೇಕು..
ಗಂಡು : ಜೋಕ್ ಕಟ್ ಮಾಡ್ಬೇಕು.. ಮಾಡ್ಲಾ.. (ಹ್ಹಾಂ )
ಒಬ್ಬ ಗಂಡ ಹೆಂಡತಿಯಿದ್ದರಂರೆ
ಇಬ್ಬರೂ ಬೇರೆ ಬೇರೆ ಊರಲ್ಲಿದರಂತೆ
ಗಂಡ ಹೆಂಡತಿಗೆ ಪ್ರತಿ ತಿಂಗಳು
ಸಾವಿರದ ಐದನೂರು ರೂಪಾಯಿ ಕಳಿಸ್ತಿದ್ದನಂತೆ..
ಒಂದ್ ಸಲ ಗಂಡ ಕಾಗದ ಬರೆದನಂತೆ..
ಈ ಸಲ ನನ್ನ ಕೈಲಿ ದುಡ್ಡು ಕಳಿಸೋಕಾಗಲಿಲ್ಲಾ
ಅದಕ್ಕ್ ಬದಲು ಸಾವಿರದ ಐನೂರು
ಸಿಹಿ ಮುತ್ತುಗಳನ್ನ ಕಳಿಸಿದ್ದೀನಿ ಡಿಯರ್ ಅಂತಾ
ಅದಲ್ಲೆ ಅವಳೇನು ಬರೆದಳಂತೆ ಗೊತ್ತಾ ...
ಸರಿ ಬಿಡಿ ಹಾಲನೊಂಗು.. ಮೊಸರನೊಂಗು..
ಮನೆ ಓನರ್ಗೂ ಎಲ್ಲರಿಗೂ ಮುತ್ತೆ ಕೊಟ್ಟು
ಅಡ್ಜೆಸ್ಟ್ ಮಾಡ್ತೀನಿ ಅಂತಾ.. (ಅಹ್ಹಹ್ಹಹ್ಹ)
ಅಹ್ಹಹ್ಹಹ್ಹ (ಅಹ್ಹಹ್ಹ)
ಲಲಲ್ಲಲ್ಲಾ.. (ಲಲಲ್ಲಲ್ಲಾ..)
ಲಲಲ್ಲಲಲಲಲಲ ಲಲ್ಲಲ್ಲಲ್ಲಾಲ್ಲಾ..
(ಲಲಲ್ಲಲ್ಲಾಲಲಲಲಾ ..)
ಕೋರಸ್ : ಒನ್ ಟೂ ಥ್ರೀ ಫೋರ್
ಹೆಣ್ಣು : ರೋಬಟ್ನಂತೆ ನಡೆದು ಸಿಕ್ಕಾಪಟ್ಟೆ
ನೆಗೆದು ಡಾನ್ಸ್ ಮಾಡಬೇಕಾಗಿಲ್ಲಾ..
ಡ್ರಿಲ್ ಮಾಡುತಾ ಥ್ರಿಲ್ ನೋಡುವಾ
ಚೆಲ್ಲಾಟ ನಮಗಿನ್ನೂ ಬೇಕಿಲ್ಲಾ..
ಗಂಡು : ಸುಮ್ಮನೆ ಇರೋಕ ಆಗಲ್ಲಾ.. ಆಆಅಹ್ಹಹ್ಹಹಾ..
ಹೆಣ್ಣು : ಈ ಸಲ ನಾ ಜೋಕ್ ಹೇಳ್ತೀನಿ..
ಒಬ್ಬ ಗಂಡ ಹೆಂಡತಿ
ತುಂಬಾ ಹುಡುಗಾಟ ಆಡ್ತಾ ಇದ್ದರಂತೆ
ಒಂದ್ ಸಲ ಹೆಂಡತಿ ನಿದೆ ಮಾಡ್ತಿದ್ದಾಗ
ಗಂಡ ಬಂದು ಅವಳನ್ನ ತಬ್ಬಿಕೊಂಡು
ಹೇ.. ನಾನ್ ಪಕ್ಕದ ಮೆನೆ ರಮೇಶ ಅಂದನಂತೆ..
ಅವಳು ಗಾಭರಿಯಿಂದ ಪಟಾರ್ ಅಂತಾ
ಅವನ ಕಪಾಳಕೊಡೆದು ದೂರ ತಳ್ಳಿಬಿಟ್ಟಳಂತೆ
ಆಮೇಲೆ ನೋಡಿದರೆ.. ಗಂಡಾ..
ನಾನು ಹೀಗೆ ಮಾಡಬೇಕು ಅನ್ಕೊಂಡಿದ್ದೆ
ಒಂದ್ ಸಲ ಗಂಡ ನಿದ್ದೆ ಮಾಡ್ತಾ ಇದ್ದಾಗ
ಅವಳು ಬಂದು ತಬ್ಬಿಕೊಂಡು..
ನಾನು ಪಕ್ಕದ್ಮನೆ ಉಷಾ ಅಂದಳಂತೆ..
ಅದಕ್ಕವನು.. ಹಾಗಾ .. ನನ್ನ ಹೆಂಡತಿ
ಹ್ಯಾಗಿದ್ದರೂ ಹಾಲಿಗೋಗಿದ್ದಾಳೆ
ಅವಳು ಬಾರೋ ಅಷ್ಟರಲ್ಲಿ ನಾವಿಬ್ಬರು...
ಅಂತಾ ಹೇಳಿದ್ದೆ ಎಳಕೊಂಡು.. (ಥೂ.. ನಿನ್ನಾ)
ಅಹ್ಹಹ್ಹಹ್ಹಹ್ಹಾ (ಅಹ್ಹಹ್ಹಹ್ಹಹ್ಹಾ)
|| ಹೆಣ್ಣು : ಕದ್ದು ಕದ್ದು
ಗಂಡು : ಪ್ರೀತಿ ಮಾಡೋ
ಹೆಣ್ಣು : ಕಳ್ಳಾಟ ಬೇಕಾಗಿಲ್ಲಾ..
ಗಂಡು : ನಿಮ್ಮಪ್ಪ ಅಮ್ಮಾ ಒಪ್ಪಿಕೊಂಡು
ಹೆಣ್ಣು : ನಿಮ್ಮಪ್ಪ ಅಮ್ಮಾ ಒಪ್ಪಿಕೊಂಡು
ಇಬ್ಬರು : ಗಂಡ ಹೆಂಡತಿ ಆಗ್ತೀವಲ್ಲಾ...
ಕದ್ದು ಕದ್ದು ಪ್ರೀತಿ ಮಾಡೋ
ಕಳ್ಳಾಟ ಬೇಕಾಗಿಲ್ಲಾ.. ಕಳ್ಳಾಟ ಬೇಕಾಗಿಲ್ಲಾ…||
Kaddu Kaddu Preethi Maado song lyrics from Kannada Movie Nanendu Nimmavane starring Vishnuvardhan, Srishanthi, Ramesh Bhat, Lyrics penned by Hamsalekha Sung by S P Balasubrahmanyam, Chithra, Music Composed by Rajan-Nagendra, film is Directed by H S Phani Ramachandra and film is released on 1993