ಮನಸುಗಳು ದೂರವಾಗಿವೆ
ಅರಿವಿರದ ಸಣ್ಣ ತಪ್ಪಿಗೆ
ಒಂಟಿ ಜೀವವು ನೊಂದು ಹೋಗಿದೆ
ನಂಬಿದವಳು ಹೇಳಿದ ಮಾತಿಗೆ
ನಾ ನೆಟ್ಟ ಸಸಿಯನ್ನು ಚಿಗುರಲ್ಲೆ ಕಿತ್ತಿಟ್ಟು
ಹೊರಡೋಕೆ ನಿನಗೇಗೆ ಮನಸ್ಸಾಗಿದೆ
ನಿನ ಮೇಲೆ ನಾನಿಟ್ಟ ನಂಬಿಕೆಯ ಗಿರಿಶಿಖರ
ಸಿಡಿಲಿನ ಬಡಿತಕ್ಕೆ ಉರಿದೋಗಿದೆ
ಬರಬೇಡ ನೀನು ನೆನಪಾಗಿ ಹಿಂದೆ
ಇನ್ನು ಮುಂದೆ ಮನಸ್ಸಲ್ಲಿ ನೋವು ಒಂದೆ
ಕಣ್ಣೀರು ಕೂಡ ಹೇಳೊದು ಒಂದೆ
ನಿನ ನೆರಳೆ ನಿನಗಿಲ್ಲ ನಡೆಯೊ ಮುಂದೆ
ಕನಸುಗಳು ಕದವ ಹಾಕಿವೆ
ಹಳೆ ನೆನಪ ಹೊರಗೆ ಬಿಟ್ಟಿಹೆ
ನರನಾಡಿಯಲ್ಲೆಲ್ಲಾ ಹರಿದೋಗಿವೆ
ನನ್ನ ಜೀವ ಜೊತೆಯಲ್ಲಿ ನರಳಾಡಿದೆ
ಮನಸುಗಳು ದೂರವಾಗಿವೆ
ಅರಿವಿರದ ಸಣ್ಣ ತಪ್ಪಿಗೆ
ಒಂಟಿ ಜೀವವು ನೊಂದು ಹೋಗಿದೆ
ನಂಬಿದವಳು ಹೇಳಿದ ಮಾತಿಗೆ
ನಾ ನೆಟ್ಟ ಸಸಿಯನ್ನು ಚಿಗುರಲ್ಲೆ ಕಿತ್ತಿಟ್ಟು
ಹೊರಡೋಕೆ ನಿನಗೇಗೆ ಮನಸ್ಸಾಗಿದೆ
ನಿನ ಮೇಲೆ ನಾನಿಟ್ಟ ನಂಬಿಕೆಯ ಗಿರಿಶಿಖರ
ಸಿಡಿಲಿನ ಬಡಿತಕ್ಕೆ ಉರಿದೋಗಿದೆ
ಬರಬೇಡ ನೀನು ನೆನಪಾಗಿ ಹಿಂದೆ
ಇನ್ನು ಮುಂದೆ ಮನಸ್ಸಲ್ಲಿ ನೋವು ಒಂದೆ
ಕಣ್ಣೀರು ಕೂಡ ಹೇಳೊದು ಒಂದೆ
ನಿನ ನೆರಳೆ ನಿನಗಿಲ್ಲ ನಡೆಯೊ ಮುಂದೆ
ಕನಸುಗಳು ಕದವ ಹಾಕಿವೆ
ಹಳೆ ನೆನಪ ಹೊರಗೆ ಬಿಟ್ಟಿಹೆ
ನರನಾಡಿಯಲ್ಲೆಲ್ಲಾ ಹರಿದೋಗಿವೆ
ನನ್ನ ಜೀವ ಜೊತೆಯಲ್ಲಿ ನರಳಾಡಿದೆ