Kamalava Muddisi Thanuvanu Aralisi Lyrics

in Mahasathi Anasuya

LYRIC

ಆ ಆ ಆ...ಆ ಆ ಆ…
ಆ ಆ ಆ….ಆ ಆ ಆ…
 
ಕಮಲವ ಮುದ್ದಿಸಿ…..
ತನುವನು ಅರಳಿಸಿ….
ಕಮಲವ ಮುದ್ದಿಸಿ
ತನುವನು ಅರಳಿಸಿ
ತರುಣಿಯ ಬಾಳಿಗೆ
ಸವಿಯನು ನೀಡಿದೆ
 
|| ಕಮಲವ…. ಮುದ್ದಿಸಿ…..||
 
ಒಲವನು ನೀ ತೋರಿದೆ
ವಿರಹವ ನೀ ನೀಗಿದೆ
ಒಲವನು ನೀ ತೋರಿದೆ
ವಿರಹವ ನೀ ನೀಗಿದೆ
ಮನಗಳು ಒಂದಾಗಿವೆ
ನಿನ್ನ ಬೆರೆಯಲು ತನುವಿದು
ತಾ ಕಾದಿದೆ ಹೂಂ… 
ಮನಗಳು ಒಂದಾಗಿವೆ
ನಿನ್ನ ಬೆರೆಯಲು ತನುವಿದು
ತಾ ಕಾದಿದೆ ಹೂಂ… 
  
|| ಮುಖ ಕಮಲವ ಮುದ್ದಿಸಿ…|| 
 
ಋತು ವಸಂತ ನೀನಾದರೆ
ಕೋಗಿಲೆ ನಾನಾಗುವೇ 
ಪ್ರಣಯ ಗಾನ ನೀನಾದರೆ
ನಾಟ್ಯ ರಾಣಿ  
 
ಋತು ವಸಂತ ನೀನಾದರೆ
ಕೋಗಿಲೆ ನಾನಾಗುವೇ 
ಪ್ರಣಯ ಗಾನ ನೀನಾದರೆ
ನಾಟ್ಯ ರಾಣಿಯಾಗುವೇ 
ಹೃದಯದ ವೀಣೆಯ
ಮೌನವ ನೀ ನೀಗಿದೆ 
ಹೃದಯದ ವೀಣೆಯ
ಮೌನವ ನೀ ನೀಗಿದೆ 
 
ಪ್ರಣಯದ ಸವಿಗಾನವ
ಬಲು ಹರುಷದಿ ನುಡಿಸುತ
ನೀ ಹಾಡಿದೆ.. ಹಾಂ...  
ಪ್ರಣಯದ ಸವಿಗಾನವ
ಬಲು ಹರುಷದಿ ನುಡಿಸುತ
ನೀ ಹಾಡಿದೆ
 
|| ಮುಖ ಕಮಲವ ಮುದ್ದಿಸಿ
ತನುವನು ಅರಳಿಸಿ
ತರುಣಿಯ ಬಾಳಿಗೆ
ಸವಿಯನು ನೀಡಿದೆ
ಕಮಲವ ಮುದ್ದಿಸಿ….|| 
 

Kamalava Muddisi Thanuvanu Aralisi song lyrics from Kannada Movie Mahasathi Anasuya starring Pandari Bai, Leelavathi, Mainavathi, Lyrics penned by Chi Udayashankar Sung by S Janaki, Music Composed by S Hanumantha Rao, film is Directed by B S Ranga and film is released on 1965