Aaduvenu Nimagagi Lyrics

in Krishna Nee Kunidaga

Video:

LYRIC

ಆಆಆಆಆಆಆಆಆ ...
ಆಡುವೆನು ನಿಮಗಾಗಿ
ಆಡುವೆನು ನಿಮಗಾಗಿ
ಕುಣಿದಾಡುವೆನು ನಿಮಗಾಗಿ
ಬಿಸಿಲೋ ಇಲ್ಲ ನೆರಳೋ
ಮಳೆಯೋ ಇಲ್ಲ ಸಿಡಿಲೋ
ಅನುದಿನ ಜೊತೆಯಲಿ ನೀನಿರಲು ..
ಮನಸ್ಸಿಗೆ ಹುರೂಪನು ತಂದಿರಲು....
 
|| ಆಡುವೆನು ನಿಮಗಾಗಿ
ಕುಣಿದಾಡುವೆನು ನಿಮಗಾಗಿ||
 
ಈ ನಾಡು ಬಲು ಸೊಗಸಾಗಿದೆ
ಈ ನಮ್ಮ ನುಡಿ ಸವಿಯಾಗಿದೆ
ಈ ನಾಡು ಬಲು ಸೊಗಸಾಗಿದೆ
ಈ ನಮ್ಮ ನುಡಿ ಸವಿಯಾಗಿದೆ
ಲತೆಗಳಲೀ ಹೂವೂ ನಗುತಲಿರೇ
ಭ್ರಮರಗಳು ಗೀತೆಯ ಹಾಡುತಿರೇ
ಕಾಡೆಲ್ಲ ಶ್ರೀಗಂಧದಿಂದ ಕಂಪನ್ನು
ಚೆಲ್ಲಾಡಿ ನಲಿದಿರೇ ..
ಮಣ್ಣೆಲ್ಲ ಬಂಗಾರವಾಗಿ ಶ್ರೀದೇವಿ
ಹಾಡುತ್ತ ಕುಣಿದಿರೇ
ಕನ್ನಡದ (ತಾಗಿರತಕಿಟ ಥಾ.. )
ಈ ನೆಲವೂ (ತಾಗಿರತಕಿಟತಾಕಿಟ ಥಾ)
ಕನ್ನಡದ ಈ ನೆಲವು
ಎಂಥ ಚೆಂದ ಎಂದೂ ನಾನೂ .. ಆಆಆ...

||ಆಡುವೆನು ನಿಮಗಾಗಿ
ಕುಣಿದಾಡುವೆನು ನಿಮಗಾಗಿ||
 
ಈ ನಾಟ್ಯ ನನ್ನ ಬದುಕಾಗಿದೆ...
ಈ ಗೆಜ್ಜೆ ಧನಿ ಉಸಿರಾಗಿದೆ ..
ಈ ನಾಟ್ಯ ನನ್ನ ಬದುಕಾಗಿದೆ...
ಈ ಗೆಜ್ಜೆ ಧನಿ ಉಸಿರಾಗಿದೆ.. ..
ಕೋಗಿಲೆಯೂ ಹಾಡಿ ನಲಿವಂತೆ ...
ನವಿಲುಗಳೂ ಕೂಗಿ ಕುಣಿವಂತೆ ..
ಬಾಳೆಲ್ಲ ಆನಂದದಿಂದ ನಿಮ್ಮಲ್ಲಿ
ಒಂದಾಗಿ ನಲಿಯುವೇ
ಆ ಬಾನೂ ಈ ಭೂಮಿ ಸೇರಿ
ಒಂದಾಗಿ ಹೋದಂತೆ ಕುಣಿಯುವೆ
ಮೈಮನವ ದಿದಾ ದಿಗದಿಘತೈ
ಮರೆಸುವೆನೂ ದಿದಾ ದಿಗದಿಗಥೈ
ಮೈಮನವ ಮರೆಸುವೆನೂ
ಕಾಣದಂತ ಹರುಷ ತಂದೂ ..

||ಆಆಆ.. ಆಆಆ.. ಆಡುವೆನು ನಿಮಗಾಗಿ
ಕುಣಿದಾಡುವೆನು ನಿಮಗಾಗಿ
ಬಿಸಿಲೋ ಇಲ್ಲ ನೆರಳೋ
ಮಳೆಯೋ ಇಲ್ಲ ಸಿಡಿಲೋ
ಅನುದಿನ ಜೊತೆಯಲಿ ನೀನಿರಲು ..
ಮನಸ್ಸಿಗೆ ಹುರೂಪನು ತಂದಿರಲು ||

Aaduvenu Nimagagi Kunidaaduvenu song lyrics from Kannada Movie Krishna Nee Kunidaga starring Vinod Raj, Sudharani, C R Simha, Lyrics penned by Chi Udayashankar Sung by S P Balasubrahmanyam, Music Composed by Vijayanand, film is Directed by Dwarakish and film is released on 1989