Kaveramma Kapadamma Lyrics

in Ganesha I Love You

LYRIC

-
ಕಾವೇರಮ್ಮ ಕಾಪಾಡಮ್ಮ
ಈ ದೋಣಿಯ ತೇಲಿಸು..
ಆ ತೀರವ ಸೇರಿಸು.. ಓ…
ಕಾವೇರಮ್ಮ ಕಾಪಾಡಮ್ಮ
ಈ ದೋಣಿಯ ತೇಲಿಸು..
ಆ ತೀರವ ಸೇರಿಸು..
ತಾಯೊಡಲೇ ನಿನಗೆ ಶರಣು
ಕಾವೇರಮ್ಮ ಕಾಪಾಡಮ್ಮ
ಈ ದೋಣಿಯ ತೇಲಿಸು..
ಆ ತೀರವ ಸೇರಿಸು..
 
ಮುಗಿಲಾಗುವೆ ಹನಿಯಾಗುವೆ
ಮಳೆಯಾಗಿ ಹೊಳೆಯಾಗಿ ಹರಿದಾಡುವೆ
ನಿತ್ಯ ನಲಿದಾಡುವೆ
ಉಸಿರಾಗುವೆ ಹಸಿರಾಗುವೆ
ಬರ ನೀಗಿ ತಂಪಾಗಿ ಕಡಲಾಗುವೆ
ಅಲ್ಲಿ ಅಲೆಯಾಗುವೆ
ಎಲ್ಲರ ಕಡು ಪಾಪವ ಬಯ್ಯದೆ ಕೊಂಡೊಯ್ಯುವ
ತಾಯೊಡಲೇನಿನಗೆ ಶರಣು..
 
||ಕಾವೇರಮ್ಮ ಕಾಪಾಡಮ್ಮ
ಈ ದೋಣಿಯ ತೇಲಿಸು..
ಆ ತೀರವ ಸೇರಿಸು..|| ಓ…
 
ಜೇನಲ್ಲೂ ನೀ ತೆಂಗಲ್ಲೂ ನೀ
ನೆಲಯೋಗಿ ಉಳುವಾಗ ಬೆವರಲ್ಲು ನೀ
ಅವನ ಫಲದಲ್ಲು ನೀ
 
ಕಣ್ಣಲ್ಲು ನೀ ಎದೆಯಲ್ಲುಲ್ಲೂ ನೀ
ಹಸುಗೂಸು ತೊದಲಾಡೊ ಜೊಲ್ಲಲ್ಲು ನೀ
ನುಡಿ ಜೇನಲ್ಲು ನೀ
ನಿಲ್ಲದ ಸಂಚಾರದ
ಸಾವಿರ ಅವತಾರದ
ತಾಯೊಡಲೆ ನಿನಗೆ ಶರಣು
 
||ಕಾವೇರಮ್ಮ ಕಾಪಾಡಮ್ಮ
ಈ ದೋಣಿಯ ತೇಲಿಸು..
ಆ ತೀರವ ಸೇರಿಸು..
ತಾಯೊಡಲೇ ನಿನಗೆ ಶರಣು||
||ಕಾವೇರಮ್ಮ ಕಾಪಾಡಮ್ಮ
ಈ ದೋಣಿಯ ತೇಲಿಸು..
ಆ ತೀರವ ಸೇರಿಸು..||
 
 

Kaveramma Kapadamma song lyrics from Kannada Movie Ganesha I Love You starring Ananthnag, Gururaj Kumar, Sithara, Lyrics penned by M N Vyasa Rao Sung by Chithra, Chorus, Music Composed by Rajesh Ramanath, film is Directed by H S Phani Ramachandra and film is released on 1997