-
ನೆರಳು ಹೇಳಿದ ಮಾತು
ಲಾಟೀನು ನಾಚುತಾವೊ
ತಂತಾನೆ ಬಿಗಿದ ಎರಡು ತೋಳು
ಜಾಮೀನು ಕೇಳುತಾವೊ
ಬಲಗೈ ಬಳೆಸದ್ದುಎಡಗೈಗೆ ಕೇಳ್ಯಾವೊ
ಮಧ್ಯರಾತ್ರಿಯ ಚುಕ್ಕಿ ಮನಸ್ಸಾರೆ ನಕ್ಕಾವೊ
ತುಂಬು ತುರುಬಿನ ನಡುವೆ
ಬಿಳಿ ಹೂವು ನರಳ್ಯಾವೊ
ಬರಡು ಬೆನ್ನನು ಹುಡುಕಿ
ಬರಡು ಬೆನ್ನನು ಹುಡುಕಿ
ಹಸಿಗಾಯ ಬಂದಾವೊ
ಹುಸಿನ್ಯಾಯ ಕೇಳಾವೊ
ಹೊಸಮಾಯೆ ಮಾಡ್ಯಾವೆ
||ನೆರಳು ಹೇಳಿದ ಮಾತು
ಲಾಟೀನು ಹಾಡುತಾವೊ
ತಂತಾನೆ ಬಿಗಿದ ಎರಡು ತೋಳು
ಜಾಮೀನು ಕೇಳುತಾವೊ||
ಸದ್ದು ಮರೆತ ವಾದ್ಯವೊಂದು
ಗುಟ್ಟನ್ನು ನುಡಿದಂತೆ
ಕದ್ದು ಕಂಡ ಕಳ್ಳ ಸ್ವಪ್ನ
ಮೈದುಂಬಿಕೊಂಡಂತೆ
ಬೆವರು ಎರೆದೆರೆದು ಉಸಿರು ಸೆಳೆಸೆಳೆದು
ಕೊರಳು ಬರಸೆಳೆದು ಸರಸ ಸುರಿದುರಿದು
ಎಲ್ಲ ಸೇರಿ ಮುದ್ದು ಮಡಿಲ ತೋಟಕ್ಕೆ
ಗುಂಪು ಗುಂಪು ಪಾತರಗಿತ್ತಿ ಹಾಡ್ಯಾವೊ
ಒಡಲ ಕಪ್ಪೆಚಿಪ್ಪಿನೊಳಗೆ ಮುತ್ತು ಮೂಡ್ಯಾವೊ
||ನೆರಳು ಹೇಳಿದ ಮಾತು
ಲಾಟೀನು ಹಾಡುತಾವೊ
ತಂತಾನೆ ಬಿಗಿದ ಎರಡು ತೋಳು
ಜಾಮೀನು ಕೇಳುತಾವೊ||
-
ನೆರಳು ಹೇಳಿದ ಮಾತು
ಲಾಟೀನು ನಾಚುತಾವೊ
ತಂತಾನೆ ಬಿಗಿದ ಎರಡು ತೋಳು
ಜಾಮೀನು ಕೇಳುತಾವೊ
ಬಲಗೈ ಬಳೆಸದ್ದುಎಡಗೈಗೆ ಕೇಳ್ಯಾವೊ
ಮಧ್ಯರಾತ್ರಿಯ ಚುಕ್ಕಿ ಮನಸ್ಸಾರೆ ನಕ್ಕಾವೊ
ತುಂಬು ತುರುಬಿನ ನಡುವೆ
ಬಿಳಿ ಹೂವು ನರಳ್ಯಾವೊ
ಬರಡು ಬೆನ್ನನು ಹುಡುಕಿ
ಬರಡು ಬೆನ್ನನು ಹುಡುಕಿ
ಹಸಿಗಾಯ ಬಂದಾವೊ
ಹುಸಿನ್ಯಾಯ ಕೇಳಾವೊ
ಹೊಸಮಾಯೆ ಮಾಡ್ಯಾವೆ
||ನೆರಳು ಹೇಳಿದ ಮಾತು
ಲಾಟೀನು ಹಾಡುತಾವೊ
ತಂತಾನೆ ಬಿಗಿದ ಎರಡು ತೋಳು
ಜಾಮೀನು ಕೇಳುತಾವೊ||
ಸದ್ದು ಮರೆತ ವಾದ್ಯವೊಂದು
ಗುಟ್ಟನ್ನು ನುಡಿದಂತೆ
ಕದ್ದು ಕಂಡ ಕಳ್ಳ ಸ್ವಪ್ನ
ಮೈದುಂಬಿಕೊಂಡಂತೆ
ಬೆವರು ಎರೆದೆರೆದು ಉಸಿರು ಸೆಳೆಸೆಳೆದು
ಕೊರಳು ಬರಸೆಳೆದು ಸರಸ ಸುರಿದುರಿದು
ಎಲ್ಲ ಸೇರಿ ಮುದ್ದು ಮಡಿಲ ತೋಟಕ್ಕೆ
ಗುಂಪು ಗುಂಪು ಪಾತರಗಿತ್ತಿ ಹಾಡ್ಯಾವೊ
ಒಡಲ ಕಪ್ಪೆಚಿಪ್ಪಿನೊಳಗೆ ಮುತ್ತು ಮೂಡ್ಯಾವೊ
||ನೆರಳು ಹೇಳಿದ ಮಾತು
ಲಾಟೀನು ಹಾಡುತಾವೊ
ತಂತಾನೆ ಬಿಗಿದ ಎರಡು ತೋಳು
ಜಾಮೀನು ಕೇಳುತಾವೊ||
Neralu Helida Maathu song lyrics from Kannada Movie Dyavre starring Yogaraj Bhat, Ninasam Sathish, Sardhar Sathya, Lyrics penned by Yogaraj Bhat Sung by Chethan Gowdanda, Music Composed by Veer Samarth, film is Directed by Gadda Viji and film is released on 2013