ಮಂಜಂತೆ ಎಲೆ ಮೇಲೆ ನೀನು
ಉರುಳಿ ಹೋಗುವಾಗ ಅಳಬೋದೇನು
ಮಂಜಂತೆ ಎಲೆ ಮೇಲೆ ನೀನು
ಉರುಳಿ ಹೋಗುವಾಗ ಅಳಬೋದೇನು..
ನೀನ್ಯಾರಿಲ್ಲಿ ನಿನ್ನವರ್ ಯಾರಿಲ್ಲಿ..
ಅಂಟಿ ಅಂಟದಹಾಗೆ ಇರಬೇಕೊ ಇರಬೇಕೊ ತಮ್ಮ..
ಮಂಜಂತೆ ಎಲೆ ಮೇಲೆ ನೀನು
ಉರುಳಿ ಹೋಗುವಾಗ ಅಳಬೋದೇನು
ಜನ್ಮದಾನ ನೀಡಿದಮ್ಮ ತನ್ನ ಮೊಗವನ್ನು ತೋರಲಿಲ್ಲ
ಬಾಳದಾನ ನೀಡಿದಮ್ಮ ನಿನ್ನ ಸುಖವ ನೋಡಲಿಲ್ಲ
ತಾಯಿ ಇದ್ದು ತಬ್ಬಲಿ ಕರ್ಣ
ಪತಿ ಇದ್ದು ತಬ್ಬಲಿ ಸೀತೆ..
ಇದು ಅಂದವಾದ ಬಾಳಬನಕೆ ಬೆಂಕಿ ಹಚ್ಚುವಾ ವಿಧಿಯಾಟ
ಸಾವಿಲ್ಲದ ಗುಡಿಸಲಿಲ್ಲ ಒಂದು ಹಿಡಿ ಸಾಸುವೆ ತರುವೆಯೇನೊ
ತನಗಿಂತಲೂ ನೊಂದ ಜನರ ದುಃಖ ಅರಿತೋನೆ ಸುಖಿಯಲ್ಲವೇನೊ
ಹಿಡಿಯಲಾಗದ ನೂರು ಹಕ್ಕಿಗಂತ
ಕೈಯಲ್ಲಿರುವ ಹಕ್ಕಿ ಮೇಲು ಅಂತ
ಕಂಡುಕೊಳ್ಳೊ ನೀನೇನಂತ
ಅತ್ತು ಅಳದೆ ಹಾಗಿರಬೇಕೊ ತಮ್ಮ..
||ಮಂಜಂತೆ ಎಲೆ ಮೇಲೆ ನೀನು
ಉರುಳಿ ಹೋಗುವಾಗ ಅಳಬೋದೇನು||
ಒಂದು ಪ್ರಾಣ ಸರ್ಪದ ಸುತ್ತ ನವರಂದ್ರ ಕಾಯದೆ ವೃತ್ತ..
ಪೊರೆ ಕಳಚಿಹೋಗೊ ಹಾವು ಹೇಳದೇನು ಎಂದು ಎತ್ತ..
ಬರೋ ಬಾಗಿಲು ಉಂಟು ಇಲ್ಲಿ
ಹೋಗೊ ಊರು ತಿಳಿಯದಿಲ್ಲಿ
ಈ ಹಾವು ಏಣಿಯಾಟನೋಟ ಯಾರ ಲಾಭಕೋ..ತಿಳಿದಿಲ್ಲ
ಕಡಲಾಚೆ ಜವರಾಯನಿಲ್ಲ ಅವನ ಬರುವೆಲ್ಲ ಅಲೆಯಂತೆ ತಮ್ಮ
ಬೂದಿಯಳಗಿನ ಕೆಂಡದಂತೆ
ಕೆಂಡದೊಳಗಿನ ಮೌನದಂತೆ
ಸಾವು ಸೆರಗಲ್ಲೆ ಇದೆ ತಮ್ಮ..
ಬೆಂದು ಬೇಯದ ಹಾಗೆ ಇರಬೇಕೊ ತಮ್ಮ.
||ಮಂಜಂತೆ ಎಲೆ ಮೇಲೆ ನೀನು
ಉರುಳಿ ಹೋಗುವಾಗ ಅಳಬೋದೇನು
ಮಂಜಂತೆ ಎಲೆ ಮೇಲೆ ನೀನು
ಉರುಳಿ ಹೋಗುವಾಗ ಅಳಬೋದೇನು..
ನೀನ್ಯಾರಿಲ್ಲಿ ನಿನ್ನವರ್ ಯಾರಿಲ್ಲಿ..
ಅಂಟಿ ಅಂಟದಹಾಗೆ ಇರಬೇಕೊ ಇರಬೇಕೊ ತಮ್ಮ..
ಮಂಜಂತೆ ಎಲೆ ಮೇಲೆ ನೀನು
ಉರುಳಿ ಹೋಗುವಾಗ ಅಳಬೋದೇನು||
ಮಂಜಂತೆ ಎಲೆ ಮೇಲೆ ನೀನು
ಉರುಳಿ ಹೋಗುವಾಗ ಅಳಬೋದೇನು
ಮಂಜಂತೆ ಎಲೆ ಮೇಲೆ ನೀನು
ಉರುಳಿ ಹೋಗುವಾಗ ಅಳಬೋದೇನು..
ನೀನ್ಯಾರಿಲ್ಲಿ ನಿನ್ನವರ್ ಯಾರಿಲ್ಲಿ..
ಅಂಟಿ ಅಂಟದಹಾಗೆ ಇರಬೇಕೊ ಇರಬೇಕೊ ತಮ್ಮ..
ಮಂಜಂತೆ ಎಲೆ ಮೇಲೆ ನೀನು
ಉರುಳಿ ಹೋಗುವಾಗ ಅಳಬೋದೇನು
ಜನ್ಮದಾನ ನೀಡಿದಮ್ಮ ತನ್ನ ಮೊಗವನ್ನು ತೋರಲಿಲ್ಲ
ಬಾಳದಾನ ನೀಡಿದಮ್ಮ ನಿನ್ನ ಸುಖವ ನೋಡಲಿಲ್ಲ
ತಾಯಿ ಇದ್ದು ತಬ್ಬಲಿ ಕರ್ಣ
ಪತಿ ಇದ್ದು ತಬ್ಬಲಿ ಸೀತೆ..
ಇದು ಅಂದವಾದ ಬಾಳಬನಕೆ ಬೆಂಕಿ ಹಚ್ಚುವಾ ವಿಧಿಯಾಟ
ಸಾವಿಲ್ಲದ ಗುಡಿಸಲಿಲ್ಲ ಒಂದು ಹಿಡಿ ಸಾಸುವೆ ತರುವೆಯೇನೊ
ತನಗಿಂತಲೂ ನೊಂದ ಜನರ ದುಃಖ ಅರಿತೋನೆ ಸುಖಿಯಲ್ಲವೇನೊ
ಹಿಡಿಯಲಾಗದ ನೂರು ಹಕ್ಕಿಗಂತ
ಕೈಯಲ್ಲಿರುವ ಹಕ್ಕಿ ಮೇಲು ಅಂತ
ಕಂಡುಕೊಳ್ಳೊ ನೀನೇನಂತ
ಅತ್ತು ಅಳದೆ ಹಾಗಿರಬೇಕೊ ತಮ್ಮ..
||ಮಂಜಂತೆ ಎಲೆ ಮೇಲೆ ನೀನು
ಉರುಳಿ ಹೋಗುವಾಗ ಅಳಬೋದೇನು||
ಒಂದು ಪ್ರಾಣ ಸರ್ಪದ ಸುತ್ತ ನವರಂದ್ರ ಕಾಯದೆ ವೃತ್ತ..
ಪೊರೆ ಕಳಚಿಹೋಗೊ ಹಾವು ಹೇಳದೇನು ಎಂದು ಎತ್ತ..
ಬರೋ ಬಾಗಿಲು ಉಂಟು ಇಲ್ಲಿ
ಹೋಗೊ ಊರು ತಿಳಿಯದಿಲ್ಲಿ
ಈ ಹಾವು ಏಣಿಯಾಟನೋಟ ಯಾರ ಲಾಭಕೋ..ತಿಳಿದಿಲ್ಲ
ಕಡಲಾಚೆ ಜವರಾಯನಿಲ್ಲ ಅವನ ಬರುವೆಲ್ಲ ಅಲೆಯಂತೆ ತಮ್ಮ
ಬೂದಿಯಳಗಿನ ಕೆಂಡದಂತೆ
ಕೆಂಡದೊಳಗಿನ ಮೌನದಂತೆ
ಸಾವು ಸೆರಗಲ್ಲೆ ಇದೆ ತಮ್ಮ..
ಬೆಂದು ಬೇಯದ ಹಾಗೆ ಇರಬೇಕೊ ತಮ್ಮ.
||ಮಂಜಂತೆ ಎಲೆ ಮೇಲೆ ನೀನು
ಉರುಳಿ ಹೋಗುವಾಗ ಅಳಬೋದೇನು
ಮಂಜಂತೆ ಎಲೆ ಮೇಲೆ ನೀನು
ಉರುಳಿ ಹೋಗುವಾಗ ಅಳಬೋದೇನು..
ನೀನ್ಯಾರಿಲ್ಲಿ ನಿನ್ನವರ್ ಯಾರಿಲ್ಲಿ..
ಅಂಟಿ ಅಂಟದಹಾಗೆ ಇರಬೇಕೊ ಇರಬೇಕೊ ತಮ್ಮ..
ಮಂಜಂತೆ ಎಲೆ ಮೇಲೆ ನೀನು
ಉರುಳಿ ಹೋಗುವಾಗ ಅಳಬೋದೇನು||
Manjanthe Ele Mele Neenu song lyrics from Kannada Movie Devara Maga starring Ambarish, Shivarajkumar, Bhanupriya, Lyrics penned by Hamsalekha Sung by Dr Rajkumar, Music Composed by Hamsalekha, film is Directed by D Rajendra Babu and film is released on 2000