Naguthide Dhare Indu Lyrics

in Aliya Geleya

Video:

LYRIC

ಆ ಆ…ಆ ಆ ಆ…(ಆ ಆ ಆ ಆ ಆ)
ಆ ಆ…ಆ ಆ ಆ…(ಆ ಆ ಆ ಆ ಆ)
ಆ ಆ ಆ…ಆ…ಆಆಆ…ಆಆ…
ಲಾ ಲಾ ಲಾ ಲಾ ಲಾ ಲ
 
ನಗುತಿದೆ ಧರೆ ಇಂದು ಮುತ್ತಿನ ಮಳೆಯಲ್ಲಿ
ನಗುತಿದೆ ಧರೆ ಇಂದು ಮುತ್ತಿನ ಮಳೆಯಲ್ಲಿ
ತೇಲೋಣ ನಾವಿಂದು ಹರುಷದ ಹೊಳೆಯಲ್ಲಿ
ತೇಲೋಣ ನಾವಿಂದು ಹರುಷದ ಹೊಳೆಯಲ್ಲಿ
 
|| ನಗುತಿದೆ ಧರೆ ಇಂದು ಮುತ್ತಿನ ಮಳೆಯಲ್ಲಿ…||
 
ತಾವರೆ ಹೂವಿನ ಕಂಗಳಲಿ
ತುಂಬಿದ ಬಯಕೆಯ ತಂಪಿರಲಿ
ಆಡಿದ ಮಾತು ನೆನಪಿರಲಿ
ನಾಳೆಯ ನಮ್ಮ ಬಾಳಿನಲಿ
ಹೊಸ ಹೊಸ ಅನುಭವ ದೊರಕಲಿ
ಹೊಸ ಹೊಸ ಕವಿತೆಯ ಬರೆಯಲಿ
ಹೊಸ ಹೊಸ ಅನುಭವ ದೊರಕಲಿ
ಹೊಸ ಹೊಸ ಕವಿತೆಯ ಬರೆಯಲಿ
 
|| ನಗುತಿದೆ ಧರೆ ಇಂದು ಮುತ್ತಿನ ಮಳೆಯಲ್ಲಿ…||
 
ಸಿರಿತನ ಬಡತನ ಏನಿರಲಿ
ನಮ್ಮಯ ಮನಸು ಒಂದಿರಲಿ
ಅಂಬಲಿ ಗಂಜಿಯೇ ಆಗಿರಲಿ
ಆದರಲೇ ಸುಖವು ನಮಗಿರಲಿ
ಕಿಲಕಿಲ ನಗೆಯು ಹರಿಯಲಿ
ಪುಲಕಿತ ಮನವು ನಲಿಯಲಿ
ಕಿಲಕಿಲ ನಗೆಯು ಹರಿಯಲಿ
ಪುಲಕಿತ ಮನವು ನಲಿಯಲಿ
 
|| ನಗುತಿದೆ ಧರೆ ಇಂದು ಮುತ್ತಿನ ಮಳೆಯಲ್ಲಿ
ಲಾ ಲಾ ಲಾ ಲಾ ಲಾ…ಲಾ ಲಾ ಲಾ ಲಾ ಲಾ
ಲಾ ಲಾ ಲಾ ಲಾ ಲಾ…ಲಾ ಲಾ ಲಾ ಲಾ ಲಾ…||

Naguthide Dhare Indu song lyrics from Kannada Movie Aliya Geleya starring Gangadhar, Bharathi, Narasimharaju, Lyrics penned by R N Jayagopal Sung by P B Srinivas, S Janaki, Music Composed by T G Lingappa, film is Directed by B R Panthulu and film is released on 1971