Eno Ideno Yako Alakaluku Lyrics

in Vishakanye

LYRIC

ಏನೋ ಇದೇನೋ ಯಾಕೋ ಅಳಕಳಕೋ 
ಕಾಣೋದೆಲ್ಲಾ ಮಸ ಮಸ ಮಸಕೋ 
ಏನೋ ಇದೇನೋ ಯಾಕೋ ಅಳಳಕೋ 
ಕಾಣೋದೆಲ್ಲಾ ಮಸ ಮಸ ಮಸಕೋ 
ಎದೆಯಲ್ಲಿ ಬೆಳಕೋ ಇರದಂಥ ಬದುಕೋ
ನನಗೇಕೆ ಬೇಕು.....ಬೇಕು....
 
|| ಏನೋ ಇದೇನೋ ಯಾಕೋ ಅಳಕಳಕೋ 
ಕಾಣೋದೆಲ್ಲಾ ಮಸ ಮಸ ಮಸಕೋ.....|| 
 
ಗುಡಿಯಲ್ಲಿ ಶಿವನಾ ಮುಡಿಸೇರಲೆಂದೋ
ಮಡಿಲಾಗಿ ಹೋಳೊಂದು ಬಿರಿದು 
ಗುಡಿಯಲ್ಲೇ ಕುಣಿದು ಕಳೆಗೊಂಡು ನಲಿದು
ಸೌಗಂಧ ಚೆಲ್ಲಾಡುತಿರಲು ಆ ಆ ಆ... 
ಗುಡಿಯಲ್ಲಿ ಶಿವನಾ ಮುಡಿಸೇರಲೆಂದೋ
ಮಡಿಲಾಗಿ ಹೋಳೊಂದು ಬಿರಿದು 
ಗುಡಿಯಲ್ಲೇ ಕುಣಿದು ಕಳೆಗೊಂಡು ನಲಿದು
ಸೌಗಂಧ ಚೆಲ್ಲಾಡುತಿರಲು.... 
ವಿಧಿ ಕೈಯ ವಿಷ ಸೋಕಿ ಸೊರಗಿ... 
ಹಾಳಾಯ್ತು ನಿರ್ಮಾಯವಾಗಿ...
 
|| ಏನೋ ಇದೇನೋ ಯಾಕೋ ಅಳಕಳಕೋ 
ಕಾಣೋದೆಲ್ಲಾ ಮಸ ಮಸ ಮಸಕೋ.....|| 
 
ಪರಮೇಶ ಮುಡಿದ ಪರಮ ಪ್ರಸಾದ
ಎನುವಂಥ ಪುಣ್ಯವಳಿದು
ಕಸದಲ್ಲೇ ಕಳೆತು ಕಸವಾಗಿ ಕೊಳೆತು
ಕೀಳಾಗಿ ತಾ ನಾಶವಾಯ್ತು..ಹೂಂಹೂಂ...
ಪರಮೇಶ ಮುಡಿದ ಪರಮ ಪ್ರಸಾದ
ಎನುವಂಥ ಪುಣ್ಯವಳಿದು
ಕಸದಲ್ಲೇ ಕಳೆತು ಕಸವಾಗಿ ಕೊಳೆತು
ಕೀಳಾಗಿ ತಾ ನಾಶವಾಯ್ತು.. 
ಹೂವಂತೆ ನನಗಾಯ್ತು ಪತನಾ...
ಸಾಕಯ್ಯೋ ಕಣ್ಣೀರ ಕಥನಾ...
 
|| ಏನೋ ಇದೇನೋ ಯಾಕೋ ಅಳಕಳಕೋ 
ಕಾಣೋದೆಲ್ಲಾ ಮಸ ಮಸ ಮಸಕೋ 
ಎದೆಯಲ್ಲಿ ಬೆಳಕೋ ಇರದಂಥ ಬದುಕೋ
ನನಗೇಕೆ ಬೇಕು ..ಹ್ಹಾ....
 
ಏನೋ ಇದೇನೋ ಯಾಕೋ ಅಳಕಳಕೋ 
ಕಾಣೋದೆಲ್ಲಾ ಮಸ ಮಸ ಮಸಕೋ....|| 
 

Eno Ideno Yako Alakaluku song lyrics from Kannada Movie Vishakanye starring Rajesh, Dwarakish, M P Shankar, Lyrics penned by Hunasuru Krishna Murthy Sung by P Susheela, Music Composed by Rajan-Nagendra, film is Directed by Hunasuru Krishna Murthy and film is released on 1972