ಕೇಳು ಏಳೇಳು ತಲೆಮಾರು ಕಾಯುತ
ನಮ್ಮೂರು ನಿಂತಿರುವಳು ತಾಯಿಯು
ನಮ್ಮ ಈ ಮಣ್ಣು ಅವಳುಸಿರು
ಕಣಕಣವು ಅವಳ್ ಹೆಸರು
ಅವಳೆ ನಿಜ ಶಕ್ತಿಯು
ಆ ತಾಯಿ ಬಂದಿಲ್ಲಿ
ನಿಂತಾಗ ಒಲವಲ್ಲಿ
ಆಯಿತಮ್ಮ
ನಮ್ಮೂರು ದೇವಿಪುರ….
ದೇವಿಪುರ..
ಕಂದ ನಿನಗೋಸ್ಕರ ಹೇಳುವೆ
ಆ ತಾಯಿ ಇಲ್ಲಿ ಬಂದು ನಿಂತ ಕಥೆಯನು
ಭಕ್ತಿ ಮೈತುಂಬಿದೆ ಹಾಡುವೆ
ನಮ್ಮೂರು ದೇವಿಪುರವು ಆದ ಕಥೆಯನು ನಾನು
ಮಣ್ಣಿನ ಪುಣ್ಯವೋ ಹಿರಿಯರ ಪುಣ್ಯವೋ
ದೇವಿ ಕರುಣೆ ಹೊಳೆಯು ಹರಿದಿಹುವುದಿಲ್ಲಿ
ಒರೆಸಿ ಚಂಬನಿ ಹರಿಸಿ ಜೇನಹನಿ
ಉರುವ ಲೀಲೆಗಳು ಸಾವಿರ ಇಲ್ಲಿ
||ಕಂದ ನಿನಗೋಸ್ಕರ ಹೇಳುವೆ
ಆ ತಾಯಿ ಇಲ್ಲಿ ಬಂದು ನಿಂತ ಕಥೆಯನು||
ಹಿಂದೆ ಒಂದು ಕಾಲದಲಿ
ಪೂರ್ವಜರು ತಪ ಮಾಡಿ
ನೀಡಿದಳು ದರ್ಶನವ ತಾಯಿಯು ಬಂದು
ಮಾನವನ ಕಷ್ಟಗಳ
ಪರಿಹಾರ ಮಾಡಲು ನೀ
ಧರೆಗೆ ಬಂದು ನೆಲೆಸು ಎಂದು ಬೇಡಿದರಂದು
ಆ ಒಲವಿನಲಿ ನಗುನಗುತಾ ನುಡಿದಳು ಆ ಶ್ರೀ ಮಾತಾ
ಬರುವೆ ನಾನು ಮಗು ನಿನ್ನ ಜೊತೆಯಲಿ
ಷರತ್ತೊಂದ ಕೇಳೆಂದೆ ನೀ ಮುಂದೆ ನಾ ಹಿಂದೆ
ತಿರುಗಿನೋಡಕೂಡದೆನ್ನ ದಿಕ್ಕಲಿ
ಒಪ್ಪಿದರು ಹಿರಿಯರು
ಮುಂದೆ ಮುಂದೆ ನಡೆದರು
ತಾಯಿಹೆಜ್ಜೆಗೆಜ್ಜೆ ನಾದ ನಿಲ್ಲತವಕ ಮನದಲಿ
ಏಕೆ ಎಂದು ಹಿಂದೆ ತಿರುಗಿ ನೋಡಲು ಶಿಲೆಯಾದಳು ಕ್ಷಣದಲಿ
||ಯಾದೇವಿ ಸರ್ವಭೂತೇಷು ಶಕ್ತಿರೂಪೇಣ ಸಂಸ್ಥಿತಾ
ನಮಸ್ತಸ್ತೈ ನಮಸ್ತಸ್ತೈ ನಮಸ್ತಸ್ತೈ ನಮೋ ನಮಃ||
ತಿರುಗಿ ನೋಡ್ದ ಕಾರಣವೆ
ನಿಂತೆ ಏನು ಹೇಳು ನೀ
ಕೇಳಿದರು ಮನದಲಿ ನೊಂದು
ತಾಯಿ ಆಗ ಹೇಳಿದರು
ಅದಕೆ ಉಂಟು ಕಾರಣವು
ತಪ್ಪು ನಿನ್ನದಲ್ಲ ಮಗನೇ ಮರುಗದಿರೆಂದು
ಈ ನೆಲದೊಳಗೆ ಅಸುರ ಬಲ
ಕುಣಿತಿಹುದು ಮದದಲ್ಲಿ
ನಿಗ್ರಹಿಸಿ ಸಲಹಬೇಕು ಭುವಿಯನು
ನೀ ನನಗೆ ಗುಡಿ ಕಟ್ಟಿ
ಸ್ಥಾಪಿಸಲು ಶಿಲೆ ಇಲ್ಲಿ
ಜನರನ್ನು ರಕ್ಷಿಸಲು ಇರುವೆನು
ಕಟ್ಟಿದರೂ ಗುಡಿಯನು
ಇಟ್ಟರ್ ಆ ಶಿಲೆಯನು
ಆ ಕ್ಷಣದೊಳಿಂದ ಭಕ್ತಜನಕೆ
ಭರಮಳೆಯು ಸುರಿಯಿತು
ಈ ದೇವಿಪುರದ ಮಹಿಮೆ ನೂರು
ನಾಡಲೆಲ್ಲ ಹರಿಡಿತು
||ಕಂದ ನಿನಗೋಸ್ಕರ ಹೇಳುವೆ
ಆ ತಾಯಿ ಇಲ್ಲಿ ಬಂದು ನಿಂತ ಕಥೆಯನು||
ಮಣ್ಣಿನ ಪುಣ್ಯವೋ ಹಿರಿಯರ ಪುಣ್ಯವೋ
ದೇವಿ ಕರುಣೆ ಹೊಳೆಯು ಹರಿದಿಹುವುದಿಲ್ಲಿ
ಕೇಳು ಏಳೇಳು ತಲೆಮಾರು ಕಾಯುತ
ನಮ್ಮೂರು ನಿಂತಿರುವಳು ತಾಯಿಯು
ನಮ್ಮ ಈ ಮಣ್ಣು ಅವಳುಸಿರು
ಕಣಕಣವು ಅವಳ್ ಹೆಸರು
ಅವಳೆ ನಿಜ ಶಕ್ತಿಯು
ಆ ತಾಯಿ ಬಂದಿಲ್ಲಿ
ನಿಂತಾಗ ಒಲವಲ್ಲಿ
ಆಯಿತಮ್ಮ
ನಮ್ಮೂರು ದೇವಿಪುರ….
ದೇವಿಪುರ..
ಕಂದ ನಿನಗೋಸ್ಕರ ಹೇಳುವೆ
ಆ ತಾಯಿ ಇಲ್ಲಿ ಬಂದು ನಿಂತ ಕಥೆಯನು
ಭಕ್ತಿ ಮೈತುಂಬಿದೆ ಹಾಡುವೆ
ನಮ್ಮೂರು ದೇವಿಪುರವು ಆದ ಕಥೆಯನು ನಾನು
ಮಣ್ಣಿನ ಪುಣ್ಯವೋ ಹಿರಿಯರ ಪುಣ್ಯವೋ
ದೇವಿ ಕರುಣೆ ಹೊಳೆಯು ಹರಿದಿಹುವುದಿಲ್ಲಿ
ಒರೆಸಿ ಚಂಬನಿ ಹರಿಸಿ ಜೇನಹನಿ
ಉರುವ ಲೀಲೆಗಳು ಸಾವಿರ ಇಲ್ಲಿ
||ಕಂದ ನಿನಗೋಸ್ಕರ ಹೇಳುವೆ
ಆ ತಾಯಿ ಇಲ್ಲಿ ಬಂದು ನಿಂತ ಕಥೆಯನು||
ಹಿಂದೆ ಒಂದು ಕಾಲದಲಿ
ಪೂರ್ವಜರು ತಪ ಮಾಡಿ
ನೀಡಿದಳು ದರ್ಶನವ ತಾಯಿಯು ಬಂದು
ಮಾನವನ ಕಷ್ಟಗಳ
ಪರಿಹಾರ ಮಾಡಲು ನೀ
ಧರೆಗೆ ಬಂದು ನೆಲೆಸು ಎಂದು ಬೇಡಿದರಂದು
ಆ ಒಲವಿನಲಿ ನಗುನಗುತಾ ನುಡಿದಳು ಆ ಶ್ರೀ ಮಾತಾ
ಬರುವೆ ನಾನು ಮಗು ನಿನ್ನ ಜೊತೆಯಲಿ
ಷರತ್ತೊಂದ ಕೇಳೆಂದೆ ನೀ ಮುಂದೆ ನಾ ಹಿಂದೆ
ತಿರುಗಿನೋಡಕೂಡದೆನ್ನ ದಿಕ್ಕಲಿ
ಒಪ್ಪಿದರು ಹಿರಿಯರು
ಮುಂದೆ ಮುಂದೆ ನಡೆದರು
ತಾಯಿಹೆಜ್ಜೆಗೆಜ್ಜೆ ನಾದ ನಿಲ್ಲತವಕ ಮನದಲಿ
ಏಕೆ ಎಂದು ಹಿಂದೆ ತಿರುಗಿ ನೋಡಲು ಶಿಲೆಯಾದಳು ಕ್ಷಣದಲಿ
||ಯಾದೇವಿ ಸರ್ವಭೂತೇಷು ಶಕ್ತಿರೂಪೇಣ ಸಂಸ್ಥಿತಾ
ನಮಸ್ತಸ್ತೈ ನಮಸ್ತಸ್ತೈ ನಮಸ್ತಸ್ತೈ ನಮೋ ನಮಃ||
ತಿರುಗಿ ನೋಡ್ದ ಕಾರಣವೆ
ನಿಂತೆ ಏನು ಹೇಳು ನೀ
ಕೇಳಿದರು ಮನದಲಿ ನೊಂದು
ತಾಯಿ ಆಗ ಹೇಳಿದರು
ಅದಕೆ ಉಂಟು ಕಾರಣವು
ತಪ್ಪು ನಿನ್ನದಲ್ಲ ಮಗನೇ ಮರುಗದಿರೆಂದು
ಈ ನೆಲದೊಳಗೆ ಅಸುರ ಬಲ
ಕುಣಿತಿಹುದು ಮದದಲ್ಲಿ
ನಿಗ್ರಹಿಸಿ ಸಲಹಬೇಕು ಭುವಿಯನು
ನೀ ನನಗೆ ಗುಡಿ ಕಟ್ಟಿ
ಸ್ಥಾಪಿಸಲು ಶಿಲೆ ಇಲ್ಲಿ
ಜನರನ್ನು ರಕ್ಷಿಸಲು ಇರುವೆನು
ಕಟ್ಟಿದರೂ ಗುಡಿಯನು
ಇಟ್ಟರ್ ಆ ಶಿಲೆಯನು
ಆ ಕ್ಷಣದೊಳಿಂದ ಭಕ್ತಜನಕೆ
ಭರಮಳೆಯು ಸುರಿಯಿತು
ಈ ದೇವಿಪುರದ ಮಹಿಮೆ ನೂರು
ನಾಡಲೆಲ್ಲ ಹರಿಡಿತು
||ಕಂದ ನಿನಗೋಸ್ಕರ ಹೇಳುವೆ
ಆ ತಾಯಿ ಇಲ್ಲಿ ಬಂದು ನಿಂತ ಕಥೆಯನು||
ಮಣ್ಣಿನ ಪುಣ್ಯವೋ ಹಿರಿಯರ ಪುಣ್ಯವೋ
ದೇವಿ ಕರುಣೆ ಹೊಳೆಯು ಹರಿದಿಹುವುದಿಲ್ಲಿ
Kanda Ninagoskara song lyrics from Kannada Movie Vijaya Dashami starring Saikumar, Prema, Soundarya, Lyrics penned by R N Jayagopal Sung by S P Balasubrahmanyam, Music Composed by Deva, film is Directed by Bharathi Kannan and film is released on 2003