Dasara Banthamma Lyrics

in Vijaya Dashami

Video:

LYRIC

-
ದಸರ ದಸರ ದಸರ ಬಂತಮ್ಮ
ಹೊಸದು ಖುಷಿಯ ನಮಗೆ ತಂತಮ್ಮ
 
ದಸರ ದಸರ ದಸರ ಬಂತಮ್ಮ
ಹೊಸದು ಖುಷಿಯ ನಮಗೆ ತಂತಮ್ಮ
ಹತ್ತು ದಿನ ಪೂಜೆಯು
ಅಮ್ಮಾ ನಿನ್ನ ಉತ್ಸವ
ನಿತ್ಯ ಹೊಸ ರೂಪದಿ
ಕಂಡೆ ನಿನ್ನ ವೈಭವ
 
ನಮ್ಮ ಕಣ್ಣ ತುಂಬಾ ನೀನಮ್ಮಾssss
 
||ದಸರ ದಸರ ದಸರ ಬಂತಮ್ಮ
ಹೊಸದು ಖುಷಿಯ ನಮಗೆ ತಂತಮ್ಮ||
 
ಶೃಂಗಗಿರಿ  ನೆಲದಿ ನಿಂತಿರುವೆ
ತಾಯೆ ನೀನು ಶಾರದೆ ರೂಪದಲಿ
ಅಮ್ಮಾ ನೀನೆ ಕೊಲ್ಹಾಪುರದ ಮಹಲಕ್ಷ್ಮೀಯು
 
ಸವದತ್ತಿ ಎಲ್ಲಮ್ಮ ನೀ
ಬೆಂಗಳೂರಲ್ಲಿ ಅಣ್ಣಮ್ಮ ನೀ
 
ಕೊಲ್ಲೂರಲ್ಲಿ ರಾಜ್ಯವ ಆಳೊ ಮೂಕಾಂಬಿಕೆ ನೀ
 
ಕಂಚಿಯ ಪುರವೆ ಕಾಮಾಕ್ಷಿ ನೀನೆ
ಕಾಶಿಯ ನೆಲವೆ ವಿಶಾಲಾಕ್ಷಿ ನೀನೆ
 
ಮಾತೆಯೆ ಮಧುರೆಯ ಮೀನಾಕ್ಷಿ ನೀನೆ
ಸೌಂದರ್ಯಲಹರಿಯೆ ಹರಿಣಾಕ್ಷಿ ನೀನೆ
 
ಹೊರನಾಡಿನಲ್ಲಿ ನೀನೆ ಅನ್ನಪೂರ್ಣೇಯು
ಬಣ್ಣಿಸಲು ಮಾತೆ ಇಲ್ಲಮ್ಮಾsss
 
ಮಹಿಷನ ಮರ್ದನಗೈದವಳೆ
ಮೈಸೂರಿನ ಬೆಟ್ಟದಿ ನಿಂತವಳೆ
ಶೂಲವನು ಹಿಡಿದು ನಿಂತ ಚಾಮುಂಡಿಯೆ
 
ದುಷ್ಟರನು ಕೋಪದಿ ಶಿಕ್ಷಿಸುವೆ
ಭಕ್ತರನು ಪ್ರೀತಿಲಿ ರಕ್ಷಿಸುವೆ
ಅಷ್ಟಮಿಯು ಆಯುಧಪೂಜೆಯು ನಿನಗಾಗಿಯೇ
 
ಕಾಳಿಯೆ ಚಂಡಿ ಭೈರವಿ ನೀನೆ
ಶೂಲಿನಿ ಅಂಬಾ ಶಾಂಭವಿ ನೀನೆ
 
ಮಹಾನವಮಿ ಪೂಜೆ ಐತೆ
ಬನಶಂಕರಿ ನೋಡು
ನೀ ಗೆದ್ದ ವಿಜಯದಶಮಿ ಸಂತೋಷ ಹಾಡು
 
ದೇವಿಪುರ ಮಹಾಶಕ್ತಿ ತಾಯೆ ಕಾಪಾಡು
ನಂಬಿದೆವು ನಿನ್ನ ನಮ್ಮಮ್ಮ….
 
ದಸರ ದಸರ ದಸರ ಬಂತಮ್ಮ
ಹೊಸದು ಖುಷಿಯ ನಮಗೆ ತಂತಮ್ಮ
ಹತ್ತು ದಿನ ಪೂಜೆಯು
ಅಮ್ಮಾ ನಿನ್ನ ಉತ್ಸವ
 
ನಿತ್ಯ ಹೊಸ ರೂಪದಿ
ಕಂಡೆ ನಿನ್ನ ವೈಭವ
 
ನಮ್ಮ ಕಣ್ಣ ತುಂಬಾ ನೀನಮ್ಮಾssss

Dasara Banthamma song lyrics from Kannada Movie Vijaya Dashami starring Saikumar, Prema, Soundarya, Lyrics penned by R N Jayagopal Sung by S P Balasubrahmanyam, Swarnalatha, Vrinda, Music Composed by Deva, film is Directed by Bharathi Kannan and film is released on 2003