Hogi Matthe Barale Lyrics

in Thanikhe

Video:

LYRIC

-
ಹೋಗಿ ಮತ್ತೆ ಬರಲೆ ಓ ಚಿನ್ನ ನಿನ್ನ ಮುತ್ತನೊಂದು ಕೊಡಲೆ
ಹೋಗಿ ಮತ್ತೆ ಬರಲೆ ಓ ಚಿನ್ನ ನಿನ್ನ ಮುತ್ತನೊಂದು ಕೊಡಲೆ
ಪ್ರೀತಿ ತುಂಬಿ ಬಂತು ನಿನ್ನ ಯೌವ್ವನ
ಪ್ರೇಮ ಕೋರಿ ಬಂದ ನಿನ್ನ ಪ್ರಿಯತಮ
ಹೋಗಿ ಮತ್ತೆ ಬರುವೆ ನೀ ಬಂದು ನನ್ನ ಮುತ್ತನೊಂದು ಕೊಡುವೆ
ಪ್ರೀತಿ ತುಂಬಿ ಬಂತು ನನ್ನ ಯೌವ್ವನ
ಪ್ರೇಮಕೋರಿ ಬಂದ ನನ್ನ ಪ್ರಿಯತಮ
ಹೋಗಿ ಮತ್ತೆ ಬರಲೆ
 
ಈ ಕಣ್ಣು ಮನಸ್ಸನ್ನು ತಾ ಬಳಸಿ ಹೇಳಿತು
ನೀ ನನಗೆ ನಾ ನಿನಗೆ ಸರಿಜೋಡಿ ಎಂದಿತು
ಕಮಲದ ಹೂವಿನ ಪರಿಮಳವನ್ನು
ಸಂಜೆಯ ಸೊಬಗಿನ ತಿಳಿನಗೆಯನ್ನು
ಸರಸಮಯವನ್ನು ವಿರಹ ಹೃದಯವನ್ನು ಒಪ್ಪಿಕೊಂಡು ಬರಲೆ
ಓ ಚಿನ್ನ ನಿನ್ನ ಮುತ್ತನೊಂದು ಕೊಡಲೆ
ಜೀವತುಂಬಿ ಬಂತು ನಿನ್ನ ಯೌವ್ವನ ಹೋಗಿ ಮತ್ತೆ ಬರಲೆ
 
ಈ ಕಣ್ಣು ಕರೆದಾಗ ಆಕಾಶ ಬಾಗಿತು
ಈ ಹೆಣ್ಣು ನಡೆದಾಗ ಆ ಹಂಸ  ನಾಚಿತು
ಎಲೆಮರೆಹೂವಿನ ಅಂಕುಶ ಭಾವನ
ಮೆರೆದಿದೆ ತಾನಾಗಿ ಮೈತುಂಬಿ ತನುಮನ
ಕುಸುಮ ಲತೆಗಳನು ಹರಿವ ನದಿಗಳನು
ಕೇಳಿಕೊಂಡು ಬರುವೆ ನೀ ಬಂದು ನನ್ನ ಮುತ್ತನೊಂದು ಕೊಡುವೆ
ದಾಹ ತುಂಬಿ ಬಂತು ನಿನ್ನ ಯೌವ್ವನ ಹೋಗಿ ಮತ್ತೆ ಬರುವೆ
 
||ಹೋಗಿ ಮತ್ತೆ ಬರಲೆ ಓ ಚಿನ್ನ ನಿನ್ನ ಮುತ್ತನೊಂದು ಕೊಡಲೆ
ಪ್ರೀತಿ ತುಂಬಿ ಬಂತು ನಿನ್ನ ಯೌವ್ವನ ||

Hogi Matthe Barale song lyrics from Kannada Movie Thanikhe starring Gulzar Khan, Niranjan, Sujatha Ramachandra, Lyrics penned by Gulzar Khan Sung by Gulzar Khan, Manjula Gururaj, Music Composed by R Damodar, film is Directed by Niranjan and film is released on 1994