ಬೆಳಗುವ ಸೂರ್ಯನೆ
ಬದುಕಿರಲಾರ ಸಂಜೆ ವೇಳೆಗೆ
ಉರುಳುವ ಚಂದ್ರನೆ
ಉಳಿದಿರಲಾರ ಮುಂಜಾನೆಗೆ
ಈ ಜಗದ ಜೀವ ಯಾತ್ರೆ
ಬರಿಯ ಮೂರೇ ದಿನ
ಕಂಡಂತೆ ಮಾಯವಾಗದೇನು ಮಿಂಚು
ಹಾಡು ಬಾ ನಗೆ ಮಲ್ಲಿಗೆ
ನಾಳೆಯ ಕನಸೊಂದಿಗೆ
ಕಲ್ಲಿನಲ್ಲೂ ನೀರುಂಟು
ಕಣ್ಣೀರಲ್ಲೂ ನಗೆಯುಂಟು
ಮುಳ್ಳಲ್ಲು ಹೂವ ಗಂಧ ಉಂಟು ನೋಡು
||ಹಾಡು ಬಾ ನಗೆ ಮಲ್ಲಿಗೆ
ನಾಳೆಯ ಕನಸೊಂದಿಗೆ||
ಹುಣ್ಣಿಮೆ ಚಂದ್ರನ ಉಪ್ಪರಿಗೆಯಲಿ
ಕುಣಿದು ಕುಪ್ಪಳಿಸೊ ಅಲೆಗಳಿಗೆ
ಸಾವಿರ ವರ್ಷಗಳೇತಕೆ ಬೇಕು
ನಿಮಿಷ ಸಾಲದೆ
ಕೋಗಿಲೆಗುಹಲವು ಮಾಸ
ಚಿಗುರೆಲೆಗು ಕೆಲವೆ ದಿವಸ
ಹುಟ್ಟೊ ಪ್ರತಿ ಮನುಜ
ಕಣ್ಮುಚ್ಚೋದು ಸಹಜ
ಮತ್ತೆ ಗರ್ಭದಲಿ ಕಣ್ತೆರೆಯೋದು ಸಹಜ
ಮಮತಾನುಬಂಧ ಒಂದೆ ಬಂಧ ಇಲ್ಲಿ
||ಹಾಡು ಬಾ ನಗೆ ಮಲ್ಲಿಗೆ
ನಾಳೆಯ ಕನಸೊಂದಿಗೆ||
ಬಾನಿಗು ಭೂಮಿಗು ಭೇದವೆ ಕಾಣದು
ದೂರ ದಿಗಂತದ ಅಂಚಿನಲಿ
ಆದರು ಒಂದರಲೊಂದು ಸೇರದು
ಅದುವೇ ಸತ್ಯ
ಪಂಜರದ ದೇಹ ಕುಲುಕಿ
ಪ್ರಾಣವಿದು ಹಾರೊ ಹಕ್ಕಿ
ಮೋಹ ವ್ಯಾಮೋಹ ಬಿಡದಂತ ಮಾಯೆ
ಎಲ್ಲ ನಮದೆನ್ನೋ ಸಂಬಂಧ ಸರಿಯೆ
ವಿಧಿ ನೇಮಕ್ಕಿಂತ ಬೇರೆ ಸ್ವಂತ ಇಲ್ಲ
||ಹಾಡು ಬಾ ನಗೆ ಮಲ್ಲಿಗೆ
ನಾಳೆಯ ಕನಸೊಂದಿಗೆ ||
||ಕಲ್ಲಿನಲ್ಲೂ ನೀರುಂಟು
ಕಣ್ಣೀರಲ್ಲೂ ನಗೆಯುಂಟು
ಮುಳ್ಳಲ್ಲು ಹೂವ ಗಂಧ ಉಂಟು ನೋಡು
ಹಾಡು ಬಾ ನಗೆ ಮಲ್ಲಿಗೆ
ನಾಳೆಯ ಕನಸೊಂದಿಗೆ||
ಬೆಳಗುವ ಸೂರ್ಯನೆ
ಬದುಕಿರಲಾರ ಸಂಜೆ ವೇಳೆಗೆ
ಉರುಳುವ ಚಂದ್ರನೆ
ಉಳಿದಿರಲಾರ ಮುಂಜಾನೆಗೆ
ಈ ಜಗದ ಜೀವ ಯಾತ್ರೆ
ಬರಿಯ ಮೂರೇ ದಿನ
ಕಂಡಂತೆ ಮಾಯವಾಗದೇನು ಮಿಂಚು
ಹಾಡು ಬಾ ನಗೆ ಮಲ್ಲಿಗೆ
ನಾಳೆಯ ಕನಸೊಂದಿಗೆ
ಕಲ್ಲಿನಲ್ಲೂ ನೀರುಂಟು
ಕಣ್ಣೀರಲ್ಲೂ ನಗೆಯುಂಟು
ಮುಳ್ಳಲ್ಲು ಹೂವ ಗಂಧ ಉಂಟು ನೋಡು
||ಹಾಡು ಬಾ ನಗೆ ಮಲ್ಲಿಗೆ
ನಾಳೆಯ ಕನಸೊಂದಿಗೆ||
ಹುಣ್ಣಿಮೆ ಚಂದ್ರನ ಉಪ್ಪರಿಗೆಯಲಿ
ಕುಣಿದು ಕುಪ್ಪಳಿಸೊ ಅಲೆಗಳಿಗೆ
ಸಾವಿರ ವರ್ಷಗಳೇತಕೆ ಬೇಕು
ನಿಮಿಷ ಸಾಲದೆ
ಕೋಗಿಲೆಗುಹಲವು ಮಾಸ
ಚಿಗುರೆಲೆಗು ಕೆಲವೆ ದಿವಸ
ಹುಟ್ಟೊ ಪ್ರತಿ ಮನುಜ
ಕಣ್ಮುಚ್ಚೋದು ಸಹಜ
ಮತ್ತೆ ಗರ್ಭದಲಿ ಕಣ್ತೆರೆಯೋದು ಸಹಜ
ಮಮತಾನುಬಂಧ ಒಂದೆ ಬಂಧ ಇಲ್ಲಿ
||ಹಾಡು ಬಾ ನಗೆ ಮಲ್ಲಿಗೆ
ನಾಳೆಯ ಕನಸೊಂದಿಗೆ||
ಬಾನಿಗು ಭೂಮಿಗು ಭೇದವೆ ಕಾಣದು
ದೂರ ದಿಗಂತದ ಅಂಚಿನಲಿ
ಆದರು ಒಂದರಲೊಂದು ಸೇರದು
ಅದುವೇ ಸತ್ಯ
ಪಂಜರದ ದೇಹ ಕುಲುಕಿ
ಪ್ರಾಣವಿದು ಹಾರೊ ಹಕ್ಕಿ
ಮೋಹ ವ್ಯಾಮೋಹ ಬಿಡದಂತ ಮಾಯೆ
ಎಲ್ಲ ನಮದೆನ್ನೋ ಸಂಬಂಧ ಸರಿಯೆ
ವಿಧಿ ನೇಮಕ್ಕಿಂತ ಬೇರೆ ಸ್ವಂತ ಇಲ್ಲ
||ಹಾಡು ಬಾ ನಗೆ ಮಲ್ಲಿಗೆ
ನಾಳೆಯ ಕನಸೊಂದಿಗೆ ||
||ಕಲ್ಲಿನಲ್ಲೂ ನೀರುಂಟು
ಕಣ್ಣೀರಲ್ಲೂ ನಗೆಯುಂಟು
ಮುಳ್ಳಲ್ಲು ಹೂವ ಗಂಧ ಉಂಟು ನೋಡು
ಹಾಡು ಬಾ ನಗೆ ಮಲ್ಲಿಗೆ
ನಾಳೆಯ ಕನಸೊಂದಿಗೆ||
Belaguva Sooryane-Male song lyrics from Kannada Movie Sundara Kanda starring Shivarajkumar, Roja, Sujeetha, Lyrics penned by K Kalyan Sung by M M Keeravani, Music Composed by M M Keeravani, film is Directed by M S Rajashekar and film is released on 2001