ಗಂಡು : ಬೆಂಗಳೂರ್ ಬೆಂಗಳೂರ್(ಓಓಓಓ )
ಬೆಂದಕಾಳ್ ಬೆಂಗಳೂರ್ (ಓಓಓಓ )
ಬೆಲೆಯೇನ್ ಗೊತ್ತ (ಓಓಓಓ ) ಕೇಳೋ...
ಹೆಣ್ಣು : ಓ ಮದನ ಮದನ (ಓಓಓಓ )
ಮನಸಿಗೆ ಬಂದ (ಓಓಓಓ )
ಮಾತೇನ್ ಗೊತ್ತ .. (ಓಓಓಓ )ಕೇಳೋ..
ಗಂಡು : ಕೆಂಪೇಗೌಡರ.. ಲ್ಯಾಂಡು ಇದು
ಸೆಂಟು ಪೌಡರಾ.. ಬ್ರ್ಯಾಂಡ್ಯಾಕದು
ಗಂಡು : ಮೈನಾವತೀ ..
ಹೆಣ್ಣು : ಎಸ್ ಸಾರ್
ಗಂಡು : ತಿರುಪತೀ
ಕೋರಸ್ : ಬಂದಿದೀನಿ ಗುರುಗಳೇ..
ಗಂಡು : ರನ್ನ ಪಂಪರ ಆ ಪರಂಪರೆ..
ಹೆಣ್ಣು : ಇಲ್ಲಿ ಆಳಿದ ಕಥೆ ಗೊತ್ತ ದೊರೆ ..
ಗಂಡು : ಮುಸ್ತಫಾ.. ಕೋರಸ್ : ಆಯಾ ಹೂಂ ..
ಗಂಡು : ಶ್ರವಂತೀ .. ಹೆಣ್ಣು : ಇಲ್ಲಿದ್ದೀನಿ..
ಗಂಡು : ಚನ್ನಮ್ಮನ ಆ ಓಬವ್ವನ
ಹೆಣ್ಣು : ನೆನಪಿಲ್ಲಿದೇ ಹೇಗೆ ಮರೆತ ಹೋದರೆ ..
ಗಂಡು : ಇಂದುವಿಶ್ವೇಶ್ವರಯ್ಯ ಬೇಂದ್ರೆಯ
ಕೈಯ್ಯ್ ನೆರಳಲಿ ನಾವುಗಳು..
ಹೆಣ್ಣು : ಸವಿ ಕಾವೇರಿ ನದಿಯ ಕನ್ನಂಬಾಡಿ ಮನೆಯ
ಪ್ರೀತಿಯ ಹೂವುಗಳು ..
ಕೋರಸ್ : ಹಾಡೋಣ.. (ಯ್ಯಾ)
ಕುಣಿಯೋಣ (ಯ್ಯೂ )
ಹೃದಯದ ಧ್ವಜವನ್ನು ನಿಲ್ಲಿಸೋಣ (ಹ್ಹಾ ಹ್ಹಾ).
||ಗಂಡು : ಕೆಂಪೇಗೌಡರ.. ಲ್ಯಾಂಡು ಇದು
ಎಲ್ಲರು: ಸೆಂಟು ಪೌಡರ.. ಬ್ರ್ಯಾಂಡ್ಯಾಕದು
ಗಂಡು : ಬೆಂಗಳೂರ್ ಬೆಂಗಳೂರ್ (ಓಓಓಓ)
ಬೆಂದಕಾಳ್ ಬೆಂಗಳೂರ್ (ಓಓಓಓ )
ಬೆಲೆಯೇನ್ ಗೊತ್ತ (ಓಓಓಓ ) ಕೇಳೋ... ||
ಗಂಡು : ದಂಡಪಾಣಿ ಕೋರಸ್ : ಶರಣು ...
ಗಂಡು : ನಾಗವೇಣಿ ಹೆಣ್ಣು : ನಮಸ್ತೆ ಸಾರ್..
ಗಂಡು : ಈ ಲೈಫೆ ಒಂದು ಸಿನಿಮಾ ಗುರು ..
ಹೆಣ್ಣು : ಕಾಲೇಜನಿಂದ್ಲೇ ಸೀನೇ ಶುರು ..
ಗಂಡು : ದಮಯಂತೀ... ಹೆಣ್ಣು : ಹೂಂ ...
ಗಂಡು : ಜೋಸೆಫ್.. ಕೋರಸ್ : ಊಫ್
ಹೆಣ್ಣು : ಪ್ರತಿ ನಾಳೆ ನಮ್ಮ ಕೈಯ್ಯಲ್ಲಿದೆ ..
ಗಂಡು : ಗುರಿ ಮುಟ್ಟೋ ಗಂಡೆದೆ ಛಾತಿಯಿದೆ
ಹೆಣ್ಣು : ಸ್ವೀಟಾದ ಮನಸ್ಸಿಗೇ ಎಂದು
ಸಿಲ್ವರ್ ಜ್ಯೂಬಲಿ ಬರೆದಿದೆಯೋ (ಆಹಾ)
ಗಂಡು : ಸಂತೋಷ ಸಂಭ್ರಮ ನಿನಗಿರಲೆಂದು
ಆಲ್ ದ್ ಬೆಸ್ಟ್ ಬರೆಯೋ..
ಕೋರಸ್ :ಕೂಡೋಣ.. (ಎಸ್ )
ಕುಣಿಯೋಣ (ಯ್ಯಾ )
ಪ್ರೀತಿಯಿಂದ ಮಜವ ಮಾಡೋಣ (ಎಕ್ಷಲೆಂಟ).
||ಗಂಡು : ಕೆಂಪೇಗೌಡರ.. ಲ್ಯಾಂಡು ಇದು
ಎಲ್ಲರು: ಸೆಂಟು ಪೌಡರ.. ಬ್ರ್ಯಾಂಡ್ಯಾಕದು
ಹೆಣ್ಣು : ಬೆಂಗಳೂರ್ ಬೆಂಗಳೂರ್ (ಓಓಓಓ )
ಬೆಂದಕಾಳ್ ಬೆಂಗಳೂರ್ (ಓಓಓಓ )
ಬೆಲೆಯೇನ್ ಗೊತ್ತ (ಓಓಓಓ ) ಕೇಳೋ... ||
ಇಬ್ಬರು :ಕೆಂಪೇಗೌಡರ.. ಲ್ಯಾಂಡು ಇದು
ಸೆಂಟು ಪೌಡರ.. ಬ್ರ್ಯಾಂಡ್ಯಾಕದು