Chinna Ninna Ee Kannali-happy Lyrics

in Soori

Video:

LYRIC

-
ಚಿನ್ನ ಈ ನಿನ್ನ ಕಣ್ಣಲ್ಲಿ ನೂರು ತಾರೆ
ಮುತ್ತು ಮಳೆಯಂತ ಮಾತಲ್ಲಿ ಜೇನಧಾರೆ
ಬಾಳು ಹೂವಾಯಿತು…. ಚಿಂತೆ ದೂರಾಯಿತು…
ನಿನ್ನ ಒಲವಿಂದ ಸಂಸಾರ ಹಾಡಾಯಿತು
ಚಿನ್ನ ಈ ನಿನ್ನ ಕಣ್ಣಲ್ಲಿ ನೂರು ತಾರೆ
ಮುತ್ತು ಮಳೆಯಂತ ಮಾತಲ್ಲಿ ಜೇನಧಾರೆ
 
ಆ ಚೈತ್ರ ತಂದ ಈ ಹೂವಿನಂದ ನಿನ್ನಂದಕೆಣೆಯಾಗದು
ಆ ಜಿಂಕೆ ಓಟ ನವಿಲಾಡೊ ಆಟ ನಿನಗೆಂದು ಸರಿ ನಿಲ್ಲದು
ತಪ ತಂದ ಫಲವೇನೊ ಆ ದೈವ ವರ ನೀನೊ
ಮನ ಬೆಳಗೊ ಹೊಂಬೆಳಕೊ ನನ್ನುಸಿರ ಫಲಕೊ
ಕಂದ ನೀ ನಕ್ಕರೆ… ಬಾಳು ಸಿಹಿ ಸಕ್ಕರೆ
ಹೆಜ್ಜೆ ಇಟ್ಟಲ್ಲಿ ಸಂತೋಷ ತುಳುಕಾಡಲಿ
 
||ಚಿನ್ನ ಈ ನಿನ್ನ ಕಣ್ಣಲ್ಲಿ ನೂರು ತಾರೆ
ಮುತ್ತು ಮಳೆಯಂತ ಮಾತಲ್ಲಿ ಜೇನಧಾರೆ||
 
ನೀನಿಲ್ಲದೇನೆ ಈ ಬಾಳಿನಲ್ಲಿ ಸುಖ ಶಾಂತಿ ನನಗಿಲ್ಲವೂ..
ನಿನ್ನಿಂದ ದೂರ ಹೆತ್ತಂತ ಜೀವ ಕ್ಷಣಕಾಲ ತಾ ನಿಲ್ಲದೂ…
ಒಂದು ಕ್ಷಣ ನೊಂದರು ನೀ ತಾಳದಮ್ಮ ಈ ಮನಸ್ಸು
ನಾ ಕಂಡ ಕನಸ್ಸುಗಳು ಆಗಲಮ್ಮ ನನಸ್ಸು
ದಾರಿ ಹೂವಾಗಲಿ ಬಾಳು ಗುರಿಸೇರಲಿ
ನಿನ್ನ ಒಲವಲ್ಲಿಯೆ ಈ ಜೀವ ತೇಲಾಡಲಿ
 
||ಚಿನ್ನ ಈ ನಿನ್ನ ಕಣ್ಣಲ್ಲಿ ನೂರು ತಾರೆ
ಮುತ್ತು ಮಳೆಯಂತ ಮಾತಲ್ಲಿ ಜೇನಧಾರೆ
ಬಾಳು ಹೂವಾಯಿತು…. ಚಿಂತೆ ದೂರಾಯಿತು…
ನಿನ್ನ ಒಲವಿಂದ ಸಂಸಾರ ಹಾಡಾಯಿತು||
 
||ಚಿನ್ನ ಈ ನಿನ್ನ ಕಣ್ಣಲ್ಲಿ ನೂರು ತಾರೆ
ಮುತ್ತು ಮಳೆಯಂತ ಮಾತಲ್ಲಿ ಜೇನಧಾರೆ||
 

Chinna Ninna Ee Kannali-happy song lyrics from Kannada Movie Soori starring Shashikumar, Padmini, Vajramuni, Lyrics penned by R N Jayagopal Sung by Manu, Lalitha Sagari, Music Composed by Raj-Koti, film is Directed by L Raja and film is released on 1992