ಓ.. ಭೂರಮೇ….ಹೇ ಹೇ ಹೇ…
ಜೋಗ ಜೋಗ ಜೋಗದಿಂದ
ಜಾರೊ ಜಾರೊ ನೀರಿನಿಂದ
ಸ್ನಾನ ಮಾಡೊ ನಿನ್ನ ಸಂಭ್ರಮ
ಓ.. ಭೂರಮೇ..ಹೇ ಹೇ ಹೇ…
ಕಾಲ ಕಾಲ ಕಾಲದಿಂದ
ಮಾಗಿ ಮಾಡೊ ಮಾಯದಿಂದ
ನೀನು ಮೈ ನೆರೆಯೊ ಸಂಭ್ರಮ
ಸಂಭ್ರಮ ಸಂಭ್ರಮ ಸಂಭ್ರಮ
ಸಂಭ್ರಮ ಸಂಭ್ರಮ ಸಂಭ್ರಮ
ಬಾಳ ಬಾನಿನಲ್ಲಿ ಪ್ರೇಮ ಸೂರ್ಯನು
ಬಂದನು ಬಂದನು
ಸೂರ್ಯನಂತೆ ನಾನು ಜಾರಿ ಹೋಗೆನು
ಎಂದನು ನಿಂತನು
ಅಂತರಗಂಗೆಯೇ ನೋಡು ನೀ
ನನ್ನಲ್ಲಿ ಪ್ರೇಮವಾಹಿನಿ ವಾಹಿನಿ
ಚೈತ್ರದ ಕೋಗಿಲೆ ಕೇಳು ನನ್ನ ಈ ರಾಗ ವಾಹಿನಿ
ಓ.. ಭೂರಮೆ…ಹೇ ಹೇ ಹೇ…
ಯಾವ ಬಾಲೆ ಹೇಳುತಾಳೆ
ಸುಮ್ನೆ ಪ್ರೀತಿ ಮಾಡುತಾಳೆ
ನೀನೆ ಹೇಳು ನನ್ನ ಸಂಭ್ರಮ
ಪ್ರೇಮಧಾರೆಯಿಂದ ತುಂಬಿಹೋಗಿದೆ...
ಹೃದಯದ ಜಲಾಶಯ
ಹೇಗೆ ತೆರೆಯಲೆಂದು ನಾಚಿ ನಿಂತಿದೆ ....
ಹೃದಯದ ಬಾಗಿಲು
ಅವನೇ ತೆರೆಯಲಿ ಹೆಣ್ಣಾಸೆ ತಿಳಿಯಲಿ ಎಂದೆ ನಾ... ಭೂರಮೇ
ಹೇಳಲು ಆನಂದ ಬಚ್ಚಿಡಲು ಆನಂದ ಭೂರಮೆ.. .
ಈ ಸಂಭ್ರಮ. . .ಆ ಆ ಆ…
ಏಳು ಏಳು ಜನ್ಮದಿಂದ
ಹಾಡಿ ಕೂಡಿಕೊಂಡು ಬಂದ
ಅಮರ ಮಧುರ ಪ್ರೇಮ ಸಂಭ್ರಮ