Nene nene raja Lyrics

in Raja Narasimha

Video:

LYRIC

ಲಕ್ಷ್ಮಿ ನರಸಿಂಹ ಉಗ್ರ ನರಸಿಂಹ
ಯೋಗ ನರಸಿಂಹ ರಾಜ ನರಸಿಂಹ
ಗಾಳಿ ನೀರು ಭೂಮಿ ಬೆಂಕಿ ಬಾನು ನೀನೆ
ಎಂಟು ದಿಕ್ಕಿನಲ್ಲೂ ನಂಟು ಬೆಳಕೊ ಗಂಟು ನೀನೆ

ತಕಿಟ ತಕಿಟ ತಕಿಟ ತಕ ತರಿಕಿಟ ತಕಧಿಮಿ  
ತಕಿಟ ತಕಿಟ ತಕಿಟ ತಕ ತರಿಕಿಟ ತಕಧಿಮಿ

ಓಂ ಓಂ .......
ನೀನೇ ನೀನೇ ರಾಜ ರಾಜ ನರಸಿಂಹ
ಲೋಕ ಕಾಯೋ ನೀನೇ ಹರಿಹರಬ್ರಹ್ಮ
ದಿಕ್ಕು ನೀನಯ್ಯಾ ದಾರಿ ನೀನಯ್ಯಾ
ದಾರಿ ದೀಪಾನೂ ನೀನೇ
ಬೆಳಕು ನೀನಯ್ಯಾ ಬದುಕು ನೀನಯ್ಯಾ
ಬದುಕಿನ ಬೆಳಕು ನೀನೇ
ಯಜಮಾನ ಯಜಮಾನ ಜಗಕೆ ಒಬ್ಬನೇ ಯಜಮಾನ
ಜೊತೆಯಾಗಿ ನೀನಿರಲು ಜಗವನೆ ಗೆಲ್ಲುವೆ ಯಜಮಾನ

|| ನೀನೇ ನೀನೇ ರಾಜ ರಾಜ ನರಸಿಂಹ
ಲೋಕ ಕಾಯೋ ನೀನೇ ಹರಿಹರಬ್ರಹ್ಮ ||

ಹಸಿವಿನಲು ನಿನ್ನ ಹೆಸರಿದೆ
ಅನ್ನದಲ್ಲೂ ನಿನ್ನ ನೆನಪಿದೆ
ನೋವಿನಲು ನಿನ್ನ ಉಸಿರಿದೆ
ನಗುವಿನಲೂ ನಿನ್ನ ನೆರೆಳಿದೆ
ನಿನ್ನ ಮನಸು ಮುದ್ದಾದ  ಮಗುವಂತೆ
ದಿನ ಹರಸು ನಾವೆಲ್ಲಾ ನಗುವಂತೆ
ನೀನೇ ... ನಮ್ಮ ಬಂಧು ಎಂದೂ ನೀನೇ ನಮ್ಮ ಬಂಧು
ನಿನ್ನ ಮುಂದೆ ನಾವೆಲ್ಲಾ
ಒಂದು ಶಕ್ತಿ ನಿನದು ಭಕ್ತಿ ನಮದು ಮುಕ್ತಿ ನೀಡಯ್ಯಾ

|| ನೀನೇ ನೀನೇ ರಾಜ ರಾಜ ನರಸಿಂಹ
ಲೋಕ ಕಾಯೋ ನೀನೇ ಹರಿಹರಬ್ರಹ್ಮ ||
 
ಮನಸಿನಲಿ ಶುದ್ದಿಯಾ ಕೊಡು
ಬದುಕಿನಲಿ ಬುದ್ದಿಯಾ ಕೊಡು
ಅನ್ಯಾಯ ಮೆಟ್ಟಿ ನಡೆಯುವ
ಅಪರೂಪ ಶಕ್ತಿಯಾ ಕೊಡು
ನಿನ್ನ ಹೆಸರನ್ನ ಉಳಿಸುವೆ ನಾ
ಕಣ್ಣೀರಿನ ಮಾತನ್ನೇ ಅಳಿಸುವೆ ನಾ
ನೀನೇ...ತಂದೆ ತಾಯಿ ಎಂದೂ ನೀನೇ ತಂದೆ ತಾಯಿ
ನಮ್ಮ ಕಾಯೋ ಮಹಾಮಾಯಿ ಕರುಣಾಳು
ನಿನ್ನ ಕರುಣೆ ಮುಂದೆ ಕರುವು ನಾನಯ್ಯಾ

||ನೀನೇ ನೀನೇ ರಾಜ ರಾಜ ನರಸಿಂಹ
ಅಹ್ಹಹ್ಹಾ ಲೋಕ ಕಾಯೋ ನೀನೇ ಹರಿಹರಬ್ರಹ್ಮ
ನೀನೇ ನೀನೇ ರಾಜ ರಾಜ ನರಸಿಂಹ
ಲೋಕ ಕಾಯೋ ನೀನೇ ಹರಿಹರಬ್ರಹ್ಮ
ದಿಕ್ಕು ನೀನಯ್ಯಾ ದಾರಿ ನೀನಯ್ಯಾ
ದಾರಿ ದೀಪಾನೂ ನೀನೇ
ಯಜಮಾನ ಯಜಮಾನ ಜಗಕೆ ಒಬ್ಬನೇ ಯಜಮಾನ
ಜೊತೆಯಾಗಿ ನೀನಿರಲು ಜಗವನೆ ಗೆಲ್ಲುವೆ ಯಜಮಾನ ||

Nene nene raja song lyrics from Kannada Movie Raja Narasimha starring Vishnuvardhan, Ramya Krishna, Rashi, Lyrics penned by K Kalyan Sung by S P Balasubrahmanyam, Music Composed by Deva, film is Directed by Muthyala Subbaiah and film is released on 2003