Naanu Putta Hennu Lyrics

in Putta Hendthi

Video:

LYRIC

-
ನಾನು ಪುಟ್ಟ ಹೆಣ್ಣು  ನನ್ನ ಕಥೆ ದೊಡ್ಡದು
ಹುಟ್ಟಿದಾಗಿನಿಂದ ನೋವು ವ್ಯಥೆ ನನ್ನದು
ನಾನು ಪುಟ್ಟ ಹೆಣ್ಣು  ನನ್ನ ಕಥೆ ದೊಡ್ಡದು
ಹುಟ್ಟಿದಾಗಿನಿಂದ ನೋವು ವ್ಯಥೆ ನನ್ನದು
 
ಏನು ಪಾಪ ಮಾಡಿ ನಾನು ಹುಟ್ಟಿದೆನೊ ಅಮ್ಮ
ಅಮ್ಮ ಸತ್ತ ಮಾರನೆಗೆ ಅಪ್ಪ ತಂದ ಚಿಕ್ಕಮ್ಮ
ಏನು ಪಾಪ ಮಾಡಿ ನಾನು ಹುಟ್ಟಿದೆನೊ ಅಮ್ಮ
ಅಮ್ಮ ಸತ್ತ ಮಾರನೆಗೆ ಅಪ್ಪ ತಂದ ಚಿಕ್ಕಮ್ಮ
ನಾನು ಹೆರದ ಈ ಹೆಣ್ಣು ಬಾಳಿಗೆ ಮುಳ್ಳು ಅಂದಳು
ಬಡಿದು ಬರೆ ಎಳೆದು ನನ್ನನು ಕಾಡಿಗೆ ಹೋಗು ಅಂದಳು
 
||ನಾನು ಪುಟ್ಟ ಹೆಣ್ಣು  ನನ್ನ ಕಥೆ ದೊಡ್ಡದು||
 
ಹೊಸ ಹೆಂಡತಿ ಮಾತು ಕೇಳಿ ಅಪ್ಪ ಸಂಚು ಮಾಡಿದರು
ಮುದುಕಂಗೆ ನನ್ನ ಮಾರಿ ಮದುವೆ ಎಂದು ಹೇಳಿದರು
ಹೊಸ ಹೆಂಡತಿ ಮಾತು ಕೇಳಿ ಅಪ್ಪ ಸಂಚು ಮಾಡಿದರು
ಮುದುಕಂಗೆ ನನ್ನ ಮಾರಿ ಮದುವೆ ಎಂದು ಹೇಳಿದರು
ಬೇರೆ ದಾರಿ ಕಾಣದೆ ನಾನು ಕಾಡಿಗೋಡಿ ಬಂದೆನು
ಹುಲಿಯು ನನ್ನ ತಿನ್ನಲಿಲ್ಲ ಇಲ್ಲಿ ಮಮತೆ ಕಂಡೆನು
 
|| ನಾನು ಪುಟ್ಟ ಹೆಣ್ಣು  ನನ್ನ ಕಥೆ ದೊಡ್ಡದು
ಹುಟ್ಟಿದಾಗಿನಿಂದ ನೋವು ವ್ಯಥೆ ನನ್ನದು||
||ನಾನು ಪುಟ್ಟ ಹೆಣ್ಣು  ನನ್ನ ಕಥೆ ದೊಡ್ಡದು||
 

Naanu Putta Hennu song lyrics from Kannada Movie Putta Hendthi starring Tiger Prabhakar, Kumari Rekha, Vajramuni, Lyrics penned by H V Subba Rao Sung by Kavitha Sait, Music Composed by Vijaya Bhaskar, film is Directed by A T Raghu and film is released on 1992