ಸಂತೋಷ ಸಂಭ್ರಮವೇ
ನಮ್ಮೀ ಸಂಗೀತ
ಈ ಸಂಗೀತ ನಿನ್ನೆದೆಯಾ
ತುಂಬಲಿ ಹಾಯಂತ
ನಗುವೇ ಸ್ವರ್ಗನಮ್ಮಾ
ನಗುವೇ ಮಾರ್ಗನಮ್ಮಾ
ನಗುವೇ ಅಮ್ಮಾನಮ್ಮಾ
ನಗುವೇ ಜನ್ಮಾನಮ್ಮಾ
ಓಹೊ ಓಹೊ ಓಹೊ
ಓಹೊಹೊಹೋ…
|| ಸಂತೋಷ ಸಂಭ್ರಮವೇ
ನಮ್ಮೀ ಸಂಗೀತ
ಈ ಸಂಗೀತ ನಿನ್ನೆದೆಯಾ
ತುಂಬಲಿ ಹಾಯಂತ
ನಗುವೇ ಸ್ವರ್ಗಾನಮ್ಮಾ
ನಗುವೇ ಮಾರ್ಗಾನಮ್ಮಾ
ನಗುವೇ ಅಮ್ಮಾನಮ್ಮಾ
ನಗುವೇ ಜನ್ಮಾನಮ್ಮಾ
ಓಹೊ ಓಹೊ ಓಹೊ
ಓಹೊಹೊಹೋ…||
ನೆನ್ನೆಯ ನೆನಪುಗಳೇ
ಕಣ್ ರೆಪ್ಪೆಯ ಮುಚ್ಚಿದರೆ
ನಾಳೆಯ ಕನಸುಗಳಾ
ದಾರಿಯು ಕಾಣದಮ್ಮಾ
ಹಳೆಯಾ ವಿಷಯಗಳೇ
ಪ್ರತಿ ನಿಮಿಷ ಹೆಚ್ಚಿದರೆ
ಹೊಸ ದಾರಿಗಳಲ್ಲಿ
ಬೆಳಕು ಕಾಣದಮ್ಮಾ..
ಯಾವ ಕ್ಷಷ್ಟ ಬಂದರೇನು
ಕಣ್ಣೀರಿನಿಂದ ಅದನು
ಕಾಲು ತೊಳೆದು ಕರೆಯಬಾರದು
ಹೂವ ತರ ಒಂದು ಸಣ್ಣ
ನಗುವಿದ್ದರಾಯಿತು
ಕಷ್ಟ ಒಂದು ಮಗುವಂಥದು
ಹುಣ್ಣಿಮೆ ಚಂದ್ರನ ತುಂಬಿದ
ನಗುವೇ ಭೂಮಿಗೆ ಲಾಂದ್ರ ಕಣೆ
ಆ ಪ್ರೀತಿಯ ಬೆಳಕಿನ ಮುಂದೆ
ಕತ್ತಲು ವಿಲವಿಲ ಅಲ್ಲವೇನೆ..
|| ನಗುವೇ ಸ್ವರ್ಗಾನಮ್ಮಾ
ನಗುವೇ ಮಾರ್ಗಾನಮ್ಮಾ
ನಗುವೇ ಅಮ್ಮಾನಮ್ಮಾ
ನಗುವೇ ಜನ್ಮಾನಮ್ಮಾ
ಓಹೊ ಓಹೊ ಓಹೊ
ಓಹೊಹೊಹೋ…||
ಆಸೆಯೂ ಹೆಚ್ಚಿದರೂ
ನಿರಾಸೆಯ ಹಂಚಿದರೂ
ದಿನ ನಡೆಯೋ ಜೀವನ
ಕ್ಷಣ ಕೂಡ ನಿಲ್ಲದಮ್ಮಾ
ಹೃದಯವೇ ತುಂಬಿರಲಿ
ಹಸಿವಿಂದ ಅಳುತಿರಲಿ
ಈ ಬದುಕಿನ ಏರಿಳಿತ
ತನ್ನಿಷ್ಟಕ್ಕೆ ತಾನಮ್ಮಾ
ನಿನ್ನೆ ರಾತ್ರಿ ಕನಸನು
ಇಂದು ರಾತ್ರಿ ನೆನೆದು
ನಿದಿರೆಯ ಮರೀಬಹುದೇ ….
ಎಷ್ಟು ಒಳ್ಳೆ ಕನಸಿದ್ದರೇನಾಯ್ತು
ಹೇಳು ಅಲ್ಲೇ ಇದ್ದು ಬಿಡಬಹುದೇ
ಕನಸುಗಳೆಂದು ಕನಸೇನಮ್ಮಾ
ತಿಳಿಯೇ ಸೇಸಮ್ಮಾ
ಈ ತಲೆಯಾ ಭಾರವ ಕಾಲಲಿ
ಹೊಸಕಿ ಹೃದಯವ ನಗಿಸಮ್ಮಾ
ನಿನ್ನ ಕಣ್ಣಂಚಲಿ ನಗೆಯೇ ಐಶ್ವರ್ಯವು
ದಿನವು ಹರಿದಾಡಲಿ
ಜಗವೇ ಸೌಂದರ್ಯವು
ಓಹೊ ಓಹೊ ಓಹೊ
ಓಹೊಹೊಹೋ
|| ಸಂತೋಷ ಸಂಭ್ರಮವೇ
ನಮ್ಮ ಸಂಗೀತ
ಈ ಸಂಗೀತ ನಿನ್ನಳಗೆ
ಸಾಗಲಿ ಹಾಯಂತ...||