Nenapondu Lyrics

ನೆನಪೊಂದು Lyrics

in Prema

in ಪ್ರೇಮ

LYRIC

ನೆನಪೊಂದು ನಗೆ ತುಂತುರು
ದಿನಕ್ಕೊಂದು ನೆನಪು ಶುರು
ಕಣ್ಣೀರ ಕಾರಂಜಿ ಎಲ್ಲಿ
ಮನಸ್ಸೆಲ್ಲ ಮರುಭೂಮಿಯಾಯ್ತು
ಒಳಮಾತು ನೂರು ಕೇಳೋರು ಯಾರು
 
ವಾತ್ಸಲ್ಯವೆ ಪ್ರತಿಹೃದಯದ ತವರು
ಮಮಕಾರವೆ ಆ ತವರಿನ ತೇರು
ನಾವೆಲ್ಲರು ಪ್ರತಿ ನೋವಿನ ಪ್ರತಿಬಿಂಬಗಳು
ಪ್ರತಿ ಸನಿಹದ ಪ್ರತಿ ವಿರಹದ ಪ್ರತಿರೂಪಗಳು
ಯಾರಿಂದ ಯಾರಿಗೊ ಜೊತೆ
ಬಾಳೊಂದು ಗೋವಿನ ಕಥೆ
ಒಳಮಾತು ನೂರು ಕೇಳೋರು ಯಾರು
 
||ನೆನಪೊಂದು ನಗೆ ತುಂತುರು
ದಿನಕ್ಕೊಂದು ನೆನಪು ಶುರು||
 
ಬೆಳದಿಂಗಳ ಹೊಂಬಿಸಿಲಲಿ ಕಂಡೆ
ಹೊಂಬಿಸಿಲನು ನಡು ಇರುಳಲಿ ಕಂಡೆ
ಉಸಿರಾಟದ ಬಿರುಗಾಳಿಗೆ ಎದೆ ಸೀಳುತಿದೆ
ಎದೆಯಾಳದ ಭಾವನೆಗಳು ಕೈ ಮೀರುತಿದೆ
ಹಗಲೆಂದು ಇರುಳಾಗದು ಇರುಳಲ್ಲಿ ಹಗಲು ಕಾಣದು
ಒಳಮಾತು ನೂರು ಕೇಳೋರು ಯಾರು
 
||ನೆನಪೊಂದು ನಗೆ ತುಂತುರು ದಿನಕ್ಕೊಂದು ನೆನಪು ಶುರು
ಕಣ್ಣೀರ ಕಾರಂಜಿ ಎಲ್ಲಿ ಮನಸ್ಸೆಲ್ಲ ಮರುಭೂಮಿಯಾಯ್ತು
ಒಳಮಾತು ನೂರು ಕೇಳೋರು ಯಾರು||

ನೆನಪೊಂದು ನಗೆ ತುಂತುರು
ದಿನಕ್ಕೊಂದು ನೆನಪು ಶುರು
ಕಣ್ಣೀರ ಕಾರಂಜಿ ಎಲ್ಲಿ
ಮನಸ್ಸೆಲ್ಲ ಮರುಭೂಮಿಯಾಯ್ತು
ಒಳಮಾತು ನೂರು ಕೇಳೋರು ಯಾರು
 
ವಾತ್ಸಲ್ಯವೆ ಪ್ರತಿಹೃದಯದ ತವರು
ಮಮಕಾರವೆ ಆ ತವರಿನ ತೇರು
ನಾವೆಲ್ಲರು ಪ್ರತಿ ನೋವಿನ ಪ್ರತಿಬಿಂಬಗಳು
ಪ್ರತಿ ಸನಿಹದ ಪ್ರತಿ ವಿರಹದ ಪ್ರತಿರೂಪಗಳು
ಯಾರಿಂದ ಯಾರಿಗೊ ಜೊತೆ
ಬಾಳೊಂದು ಗೋವಿನ ಕಥೆ
ಒಳಮಾತು ನೂರು ಕೇಳೋರು ಯಾರು
 
||ನೆನಪೊಂದು ನಗೆ ತುಂತುರು
ದಿನಕ್ಕೊಂದು ನೆನಪು ಶುರು||
 
ಬೆಳದಿಂಗಳ ಹೊಂಬಿಸಿಲಲಿ ಕಂಡೆ
ಹೊಂಬಿಸಿಲನು ನಡು ಇರುಳಲಿ ಕಂಡೆ
ಉಸಿರಾಟದ ಬಿರುಗಾಳಿಗೆ ಎದೆ ಸೀಳುತಿದೆ
ಎದೆಯಾಳದ ಭಾವನೆಗಳು ಕೈ ಮೀರುತಿದೆ
ಹಗಲೆಂದು ಇರುಳಾಗದು ಇರುಳಲ್ಲಿ ಹಗಲು ಕಾಣದು
ಒಳಮಾತು ನೂರು ಕೇಳೋರು ಯಾರು
 
||ನೆನಪೊಂದು ನಗೆ ತುಂತುರು ದಿನಕ್ಕೊಂದು ನೆನಪು ಶುರು
ಕಣ್ಣೀರ ಕಾರಂಜಿ ಎಲ್ಲಿ ಮನಸ್ಸೆಲ್ಲ ಮರುಭೂಮಿಯಾಯ್ತು
ಒಳಮಾತು ನೂರು ಕೇಳೋರು ಯಾರು||

Nenaponde song lyrics from Kannada Movie Prema starring Shivadhwaj, Prema, Lakshmi, Lyrics penned by K Kalyan Sung by Venugopal, Music Composed by K Kalyan, film is Directed by Suresh Raj and film is released on 2002
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ