-
ಮಂಡ್ಯದಿಂದ ಮಣ್ಣು ತಂದು
ಮಲೆನಾಡಿಂದ ನೀರು ತಂದು
ಮಂಡ್ಯದಿಂದ ಮಣ್ಣು ತಂದು
ಮಲೆನಾಡಿಂದ ನೀರು ತಂದು
ಮನಸ್ಸು ಮೆತ್ತಿ ಮಾಡಿದಂತ ಗೊಂಬೆ
ಇದು ಬೊಂಬೆಯಲ್ಲ ಬೊಂಬೆಯಲ್ಲ ರಂಭೆ
ನೂರು ನೂರು ಬೊಂಬೆ ಮಾಡ್ದೆ ಕಣಮ್ಮ
ನೂರು ನೂರು ಬೊಂಬೆ ಮಾಡ್ದೆ ಕಣಮ್ಮ
ಹಂಗಾದ್ರು ಗೌರಿಯಂಗೆ ಯಾರು ಇಲ್ಲಮ್ಮ ನಿಜ ಕೇಳಮ್ಮ
ಕುಂಬಾರ ಕುಂಬಾರ ಕುಂಬಾರ ನಾನು
ನನ್ನ ಪ್ರೀತಿಯ ಕಾಯುವ ಬಂಗಾರ ನೀನು
ಕುಂಬಾರ ಕುಂಬಾರ ಕುಂಬಾರ ನಾನು
ನನ್ನ ಪ್ರೀತಿಯ ಕಾಯುವ ಬಂಗಾರ ನೀನು
||ಮಂಡ್ಯದಿಂದ ಮಣ್ಣು ತಂದು
ಮಲೆನಾಡಿಂದ ನೀರು ತಂದು
ಮನಸ್ಸು ಮೆತ್ತಿ ಮಾಡಿದಂತ ಗೊಂಬೆ
ಇದು ಬೊಂಬೆಯಲ್ಲ ಬೊಂಬೆಯಲ್ಲ ರಂಭೆ||
ಬೆಳಗಾಂ ಇಂದ ಬೆಳಕು ತಂದೆ ಕಣ್ಣಿಗೆ
ನಾ ಹುಬ್ಬಳ್ಳಿಯ ಹುರುಪು ತಂದೆ ಹುಬ್ಬಿಗೆ
ಕೆಮ್ಮಣ್ಣುಗುಂಡಿಯ ಕೆಂಪು ತಂದೆ ಕೆನ್ನೆಗೆ
ನಾ ಜೋಗದ ಗುಂಡಿಯ ಜಳಕು ತಂದೆ ನಗುವಿಗೆ
ಶಿಲ್ಪಗಳ ಬೇಲೂರಿಂದ ಬಳುಕು ತಂದೆ ನಡುವಿಗೆ
ಕೊಡಗಿನ ಮಂಜಿನಿಂದ ತಂಪು ತಂದೆ ತನುವಿಗೆ
ಶೃಂಗೇರಿಯ ಶೃಂಗದಿಂದ ಶೃಂಗಾರ ತಂದೆ ಉಡುಗೆಗೆ
ಸಹ್ಯಾದ್ರಿ ಸಾಲಿನಿಂದ ಸಹನೆ ತಂದೆ ನಡಿಗೆಗೆ
ನಂಜನಗೂಡಿಂದ ನಾಚಿಕೆ ತಂದೆ ಮನಸ್ಸಿಗೆ
ಕಾವೇರಿ ಸೀಮೆಯಿಂದ ಕನಸ್ಸು ತಂದೆ ವಯಸ್ಸಿಗೆ
ಕುಂಬಾರ ಕುಂಬಾರ ಕುಂಬಾರ ನಾನು
ನನ್ನ ಪ್ರೀತಿಯ ಕಾಯುವ ಬಂಗಾರ ನೀನು
||ಮಂಡ್ಯದಿಂದ ಮಣ್ಣು ತಂದು
ಮಲೆನಾಡಿಂದ ನೀರು ತಂದು
ಮನಸ್ಸು ಮೆತ್ತಿ ಮಾಡಿದಂತ ಗೊಂಬೆ
ಇದು ಬೊಂಬೆಯಲ್ಲ ಬೊಂಬೆಯಲ್ಲ ರಂಭೆ||
ಧಾರವಾಡದ ದಾರವ ತಂದೆ ದಾವಣಿಗೆ
ರಾಯಚೂರಿಂದ ರಂಗು ತಂದೆ ರವಿಕೆಗೆ
ಬಂಕಾಪುರದ ಬಿಂಕ ತಂದೆ ಬೆನ್ನಿಗೆ
ದಾವಣಗೆರೆಯ ಬೆಣ್ಣೆ ತಂದೆ ಬೆಡಗಿಗೆ
ನಾಗರಹೊಳೆಯಿಂದ ನಾಜೂಕು ನೀಡಿದೆ
ಐಹೊಳೆಯ ಐಸಿರಿಯ ಮೈಸಿರಿಯ ಮಾಡಿದೆ
ಆಗುಂಬೆ ಅಂದ ತಂದೆ ಆಹ್ಲಾದವ ತುಂಬಿದೆ
ಆಸೆ ಪಟ್ಟು ಅಆಇಈ ಅಕ್ಷರವ ಕಲಿಸಿದೆ
ಕರುನಾಡ ಕಂಪನು ಚೆಲ್ಲಿ ಕಲಿಸಿಕೊಟ್ಟೆ ಕನ್ನಡವ
ಈ ನನ್ನ ಪ್ರೀತಿಯ ಹೇಳಿ ಒಪ್ಪಿಸಿಬಿಟ್ಟೆ ಹೃದಯವ
ಕುಂಬಾರ ಕುಂಬಾರ ಕುಂಬಾರ ನಾನು
ನನ್ನ ಪ್ರೀತಿಯ ಕಾಯುವ ಬಂಗಾರ ನೀನು
ಕುಂಬಾರ ಕುಂಬಾರ ಕುಂಬಾರ ನಾನು
ನನ್ನ ಪ್ರೀತಿಯ ಕಾಯುವ ಬಂಗಾರ ನೀನು
||ಮಂಡ್ಯದಿಂದ ಮಣ್ಣು ತಂದು
ಮಲೆನಾಡಿಂದ ನೀರು ತಂದು
ಮನಸ್ಸು ಮೆತ್ತಿ ಮಾಡಿದಂತ ಗೊಂಬೆ
ಇದು ಬೊಂಬೆಯಲ್ಲ ಬೊಂಬೆಯಲ್ಲ ರಂಭೆ||
-
ಮಂಡ್ಯದಿಂದ ಮಣ್ಣು ತಂದು
ಮಲೆನಾಡಿಂದ ನೀರು ತಂದು
ಮಂಡ್ಯದಿಂದ ಮಣ್ಣು ತಂದು
ಮಲೆನಾಡಿಂದ ನೀರು ತಂದು
ಮನಸ್ಸು ಮೆತ್ತಿ ಮಾಡಿದಂತ ಗೊಂಬೆ
ಇದು ಬೊಂಬೆಯಲ್ಲ ಬೊಂಬೆಯಲ್ಲ ರಂಭೆ
ನೂರು ನೂರು ಬೊಂಬೆ ಮಾಡ್ದೆ ಕಣಮ್ಮ
ನೂರು ನೂರು ಬೊಂಬೆ ಮಾಡ್ದೆ ಕಣಮ್ಮ
ಹಂಗಾದ್ರು ಗೌರಿಯಂಗೆ ಯಾರು ಇಲ್ಲಮ್ಮ ನಿಜ ಕೇಳಮ್ಮ
ಕುಂಬಾರ ಕುಂಬಾರ ಕುಂಬಾರ ನಾನು
ನನ್ನ ಪ್ರೀತಿಯ ಕಾಯುವ ಬಂಗಾರ ನೀನು
ಕುಂಬಾರ ಕುಂಬಾರ ಕುಂಬಾರ ನಾನು
ನನ್ನ ಪ್ರೀತಿಯ ಕಾಯುವ ಬಂಗಾರ ನೀನು
||ಮಂಡ್ಯದಿಂದ ಮಣ್ಣು ತಂದು
ಮಲೆನಾಡಿಂದ ನೀರು ತಂದು
ಮನಸ್ಸು ಮೆತ್ತಿ ಮಾಡಿದಂತ ಗೊಂಬೆ
ಇದು ಬೊಂಬೆಯಲ್ಲ ಬೊಂಬೆಯಲ್ಲ ರಂಭೆ||
ಬೆಳಗಾಂ ಇಂದ ಬೆಳಕು ತಂದೆ ಕಣ್ಣಿಗೆ
ನಾ ಹುಬ್ಬಳ್ಳಿಯ ಹುರುಪು ತಂದೆ ಹುಬ್ಬಿಗೆ
ಕೆಮ್ಮಣ್ಣುಗುಂಡಿಯ ಕೆಂಪು ತಂದೆ ಕೆನ್ನೆಗೆ
ನಾ ಜೋಗದ ಗುಂಡಿಯ ಜಳಕು ತಂದೆ ನಗುವಿಗೆ
ಶಿಲ್ಪಗಳ ಬೇಲೂರಿಂದ ಬಳುಕು ತಂದೆ ನಡುವಿಗೆ
ಕೊಡಗಿನ ಮಂಜಿನಿಂದ ತಂಪು ತಂದೆ ತನುವಿಗೆ
ಶೃಂಗೇರಿಯ ಶೃಂಗದಿಂದ ಶೃಂಗಾರ ತಂದೆ ಉಡುಗೆಗೆ
ಸಹ್ಯಾದ್ರಿ ಸಾಲಿನಿಂದ ಸಹನೆ ತಂದೆ ನಡಿಗೆಗೆ
ನಂಜನಗೂಡಿಂದ ನಾಚಿಕೆ ತಂದೆ ಮನಸ್ಸಿಗೆ
ಕಾವೇರಿ ಸೀಮೆಯಿಂದ ಕನಸ್ಸು ತಂದೆ ವಯಸ್ಸಿಗೆ
ಕುಂಬಾರ ಕುಂಬಾರ ಕುಂಬಾರ ನಾನು
ನನ್ನ ಪ್ರೀತಿಯ ಕಾಯುವ ಬಂಗಾರ ನೀನು
||ಮಂಡ್ಯದಿಂದ ಮಣ್ಣು ತಂದು
ಮಲೆನಾಡಿಂದ ನೀರು ತಂದು
ಮನಸ್ಸು ಮೆತ್ತಿ ಮಾಡಿದಂತ ಗೊಂಬೆ
ಇದು ಬೊಂಬೆಯಲ್ಲ ಬೊಂಬೆಯಲ್ಲ ರಂಭೆ||
ಧಾರವಾಡದ ದಾರವ ತಂದೆ ದಾವಣಿಗೆ
ರಾಯಚೂರಿಂದ ರಂಗು ತಂದೆ ರವಿಕೆಗೆ
ಬಂಕಾಪುರದ ಬಿಂಕ ತಂದೆ ಬೆನ್ನಿಗೆ
ದಾವಣಗೆರೆಯ ಬೆಣ್ಣೆ ತಂದೆ ಬೆಡಗಿಗೆ
ನಾಗರಹೊಳೆಯಿಂದ ನಾಜೂಕು ನೀಡಿದೆ
ಐಹೊಳೆಯ ಐಸಿರಿಯ ಮೈಸಿರಿಯ ಮಾಡಿದೆ
ಆಗುಂಬೆ ಅಂದ ತಂದೆ ಆಹ್ಲಾದವ ತುಂಬಿದೆ
ಆಸೆ ಪಟ್ಟು ಅಆಇಈ ಅಕ್ಷರವ ಕಲಿಸಿದೆ
ಕರುನಾಡ ಕಂಪನು ಚೆಲ್ಲಿ ಕಲಿಸಿಕೊಟ್ಟೆ ಕನ್ನಡವ
ಈ ನನ್ನ ಪ್ರೀತಿಯ ಹೇಳಿ ಒಪ್ಪಿಸಿಬಿಟ್ಟೆ ಹೃದಯವ
ಕುಂಬಾರ ಕುಂಬಾರ ಕುಂಬಾರ ನಾನು
ನನ್ನ ಪ್ರೀತಿಯ ಕಾಯುವ ಬಂಗಾರ ನೀನು
ಕುಂಬಾರ ಕುಂಬಾರ ಕುಂಬಾರ ನಾನು
ನನ್ನ ಪ್ರೀತಿಯ ಕಾಯುವ ಬಂಗಾರ ನೀನು
||ಮಂಡ್ಯದಿಂದ ಮಣ್ಣು ತಂದು
ಮಲೆನಾಡಿಂದ ನೀರು ತಂದು
ಮನಸ್ಸು ಮೆತ್ತಿ ಮಾಡಿದಂತ ಗೊಂಬೆ
ಇದು ಬೊಂಬೆಯಲ್ಲ ಬೊಂಬೆಯಲ್ಲ ರಂಭೆ||
Mandyadinda Mannu Thandu song lyrics from Kannada Movie Odahuttidavalu starring Ravichandran, Rakshitha, Radhika, Lyrics penned by ?K Kalyan Sung by Manu, Music Composed by R P Patnayak, film is Directed by Om Saiprakash and film is released on 2006