-
ಈ ಮೌನ ಮಾನಸಗಾನ ಈ ಮೌನ ಪ್ರೇಮದ ಧ್ಯಾನ
ಮಾನಸಗಂಗ ರಾಗತರಂಗ ನಲಿದಿದೆ ನೋಡ ಪ್ರಕೃತಿಸಂಗ
ಈ ಮೌನ ಮಾನಸಗಾನ ಈ ಮೌನ ಪ್ರೇಮದ ಧ್ಯಾನ
ಚಿಗುರ ಸೋಕಿ ಸುಮವ ಸವರಿ
ಕೇಳಿಸಿಕೊ ಭೂಗಾನ ಕೈಗಂಟುವುದು ಮೌನ
ಮುಗಿಲ ನಗಿಸಿ ಬೆಳಕ ಚುಂಬಿಸಿ
ಕೇಳಿಸಿಕೊ ರವಿಗಾನ ಮನತಾಗುವುದು ಮೌನ
ಅಂದ ಲಾವಣ್ಯದಲ್ಲಿ ಬಿಂಕ ಬಿನ್ನಾಣದಲ್ಲಿ
ಮೌನವೆ ಮಾತಿನ ಮಲ್ಲಿ
||ಈ ಮೌನ ಮಾನಸಗಾನ ಈ ಮೌನ ಪ್ರೇಮದ ಧ್ಯಾನ
ಭಾವದಬೃಂಗ ರಸಗಳತುಂಗ ತೀರದಿ ಮಿಂದು ಆದ ಅನಂಗ
ಈ ಮೌನ ಮಾನಸಗಾನ ಈ ಮೌನ ಪ್ರೇಮದ ಧ್ಯಾನ||
ಸುಖದ ಶೃಂಗ ತಲುಪೊ ಸಮಯ
ಜೊತೆಯಾಗಿದೆ ಋತುಗಾನ ತಲೆದೂಗುತ್ತಿದೆ ಮೌನ
ಮನವು ಮತಿಸಿ ಮುದವೆ ಜನಿಸಿ
ಎದೆಯಾಗಿದೆ ರಸತಾಣ ಸವಿದಣಿಯುತ್ತಿದೆ ಮೌನ
ಬಾಳು ಒಲವಿನ ನೆರಳು ಸ್ಪರ್ಶ ಅರಿವಿನ ಆತ್ಮ
ಮೌನವೆ ಆತ್ಮದ ನೇತ್ರ
||ಈ ಮೌನ ಮಾನಸಗಾನ ಈ ಮೌನ ಪ್ರೇಮದ ಧ್ಯಾನ
ಮೌನದ ಸಂಗ ಹೃದಯತರಂಗ ಹೇಳಿದ ನೋಡ ಪ್ರೇಮಪ್ರಸಂಗ
ಈ ಮೌನ ಮಾನಸಗಾನ ಈ ಮೌನ ಪ್ರೇಮದ ಧ್ಯಾನ||
-
ಈ ಮೌನ ಮಾನಸಗಾನ ಈ ಮೌನ ಪ್ರೇಮದ ಧ್ಯಾನ
ಮಾನಸಗಂಗ ರಾಗತರಂಗ ನಲಿದಿದೆ ನೋಡ ಪ್ರಕೃತಿಸಂಗ
ಈ ಮೌನ ಮಾನಸಗಾನ ಈ ಮೌನ ಪ್ರೇಮದ ಧ್ಯಾನ
ಚಿಗುರ ಸೋಕಿ ಸುಮವ ಸವರಿ
ಕೇಳಿಸಿಕೊ ಭೂಗಾನ ಕೈಗಂಟುವುದು ಮೌನ
ಮುಗಿಲ ನಗಿಸಿ ಬೆಳಕ ಚುಂಬಿಸಿ
ಕೇಳಿಸಿಕೊ ರವಿಗಾನ ಮನತಾಗುವುದು ಮೌನ
ಅಂದ ಲಾವಣ್ಯದಲ್ಲಿ ಬಿಂಕ ಬಿನ್ನಾಣದಲ್ಲಿ
ಮೌನವೆ ಮಾತಿನ ಮಲ್ಲಿ
||ಈ ಮೌನ ಮಾನಸಗಾನ ಈ ಮೌನ ಪ್ರೇಮದ ಧ್ಯಾನ
ಭಾವದಬೃಂಗ ರಸಗಳತುಂಗ ತೀರದಿ ಮಿಂದು ಆದ ಅನಂಗ
ಈ ಮೌನ ಮಾನಸಗಾನ ಈ ಮೌನ ಪ್ರೇಮದ ಧ್ಯಾನ||
ಸುಖದ ಶೃಂಗ ತಲುಪೊ ಸಮಯ
ಜೊತೆಯಾಗಿದೆ ಋತುಗಾನ ತಲೆದೂಗುತ್ತಿದೆ ಮೌನ
ಮನವು ಮತಿಸಿ ಮುದವೆ ಜನಿಸಿ
ಎದೆಯಾಗಿದೆ ರಸತಾಣ ಸವಿದಣಿಯುತ್ತಿದೆ ಮೌನ
ಬಾಳು ಒಲವಿನ ನೆರಳು ಸ್ಪರ್ಶ ಅರಿವಿನ ಆತ್ಮ
ಮೌನವೆ ಆತ್ಮದ ನೇತ್ರ
||ಈ ಮೌನ ಮಾನಸಗಾನ ಈ ಮೌನ ಪ್ರೇಮದ ಧ್ಯಾನ
ಮೌನದ ಸಂಗ ಹೃದಯತರಂಗ ಹೇಳಿದ ನೋಡ ಪ್ರೇಮಪ್ರಸಂಗ
ಈ ಮೌನ ಮಾನಸಗಾನ ಈ ಮೌನ ಪ್ರೇಮದ ಧ್ಯಾನ||