-
ಮುರಳಿ ರವಳಿ ಎದೆಗೆ ಧುಮುಕಿ
ಅನುರಾಗದ ಅಮೃತ ಬಿಂದಿಗೆ ತುಂಬತುಂಬಿ
ತನುವೆ ಕಲಕಿ ಮನವೆ ತುಳುಕಿ
ನೆನೆದಳೊ ರಾಧೆ ರಾಧೆ
ಮುರಳಿ ರವಳಿ ಎದೆಗೆ ಧುಮುಕಿ
ಯಮುನಾ ನದಿಯಾಯ್ತು ಲಜ್ಜೆಯ ಗಿರಿ ಕರಗಿ
ತನುವೆ ಗೋಕುಲ ಮನವೆ ಮುರಾರಿ
ಆದಳೊ ರುಕ್ಮಿಣಿ ರುಕ್ಮಿಣಿ
ಮುರಳಿ(ಮುರಳಿ) ರವಳಿ(ರವಳಿ)
ಎದೆಗೆ (ಎದೆಗೆ)ಧುಮುಕಿ(ಧುಮುಕಿ)
ಬೃಂದಾವನವಾಯಿತು ಮಾನಸ ವನವೆಲ್ಲಾ
ಜಗವೆ ಹೆಣ್ಣು ಹೆಣ್ಣೆ ಜಗವೊ
ಎಂದನೆ ಶ್ಯಾಮನು ಶ್ಯಾಮನು
||ಮುರಳಿ ರವಳಿ ಎದೆಗೆ ಧುಮುಕಿ ಧುಮುಕಿ||
ಯೌವ್ವನವೆಲ್ಲ ಹೂಗಳ ಮಾಡಿ
ಅರ್ಪಿಸುವೆ ಪೂಜಿಸುವೆ
ಪ್ರೀತಿಯ ಸ್ವರ್ಗ ಯಾಚಿಸುವೆ
ತನುವನು ತೇಯ್ದು ಅಪ್ಪುಗೆ ಗಂಧ
ಲೇಪಿಸುವೆ ಆಲಂಗಿಸುವೆ
ಬಾಳಿನ ಭಾಗವಾಗಿರುವೆ
ಅಂದ ಚೆಂದ ಒಲ್ಲನೆ ಶ್ಯಾಮನು
||ಮುರಳಿ(ಮುರಳಿ) ರವಳಿ(ರವಳಿ)
ಎದೆಗೆ (ಎದೆಗೆ)ಧುಮುಕಿ(ಧುಮುಕಿ)||
ಹೆಜ್ಜೆಯ ಮೇಲೆ ಹೆಜ್ಜೆಯ ಹಾಕಿ
ಒಳಬಂದ ಮುಕುಂದ
ಎಲ್ಲರ ಬಿಟ್ಟೆನ್ನೆದೆಯೊಳಗೆ
ಸಾವಿರ ಹೆಂಗಳ ಕಂಗಳು ನೋಡನೆ
ಶ್ರೀ ಹರಿಯ ಅರವಿಂದ
ನನ್ನನು ನೋಡಿದ ಸಾಕೆನಗೆ
ಪ್ರೀತಿಗೆ ಭಕ್ತಿಗೆ ಸೋಲನೆ ಶ್ಯಾಮನು
||ಮುರಳಿ ರವಳಿ ಎದೆಗೆ ಧುಮುಕಿ
ಅನುರಾಗದ ಅಮೃತ ಬಿಂದಿಗೆ ತುಂಬತುಂಬಿ
ತನುವೆ ಕಲಕಿ ಮನವೆ ತುಳುಕಿ
ತಾನನ ತಾನನ ತಾನನ||
-
ಮುರಳಿ ರವಳಿ ಎದೆಗೆ ಧುಮುಕಿ
ಅನುರಾಗದ ಅಮೃತ ಬಿಂದಿಗೆ ತುಂಬತುಂಬಿ
ತನುವೆ ಕಲಕಿ ಮನವೆ ತುಳುಕಿ
ನೆನೆದಳೊ ರಾಧೆ ರಾಧೆ
ಮುರಳಿ ರವಳಿ ಎದೆಗೆ ಧುಮುಕಿ
ಯಮುನಾ ನದಿಯಾಯ್ತು ಲಜ್ಜೆಯ ಗಿರಿ ಕರಗಿ
ತನುವೆ ಗೋಕುಲ ಮನವೆ ಮುರಾರಿ
ಆದಳೊ ರುಕ್ಮಿಣಿ ರುಕ್ಮಿಣಿ
ಮುರಳಿ(ಮುರಳಿ) ರವಳಿ(ರವಳಿ)
ಎದೆಗೆ (ಎದೆಗೆ)ಧುಮುಕಿ(ಧುಮುಕಿ)
ಬೃಂದಾವನವಾಯಿತು ಮಾನಸ ವನವೆಲ್ಲಾ
ಜಗವೆ ಹೆಣ್ಣು ಹೆಣ್ಣೆ ಜಗವೊ
ಎಂದನೆ ಶ್ಯಾಮನು ಶ್ಯಾಮನು
||ಮುರಳಿ ರವಳಿ ಎದೆಗೆ ಧುಮುಕಿ ಧುಮುಕಿ||
ಯೌವ್ವನವೆಲ್ಲ ಹೂಗಳ ಮಾಡಿ
ಅರ್ಪಿಸುವೆ ಪೂಜಿಸುವೆ
ಪ್ರೀತಿಯ ಸ್ವರ್ಗ ಯಾಚಿಸುವೆ
ತನುವನು ತೇಯ್ದು ಅಪ್ಪುಗೆ ಗಂಧ
ಲೇಪಿಸುವೆ ಆಲಂಗಿಸುವೆ
ಬಾಳಿನ ಭಾಗವಾಗಿರುವೆ
ಅಂದ ಚೆಂದ ಒಲ್ಲನೆ ಶ್ಯಾಮನು
||ಮುರಳಿ(ಮುರಳಿ) ರವಳಿ(ರವಳಿ)
ಎದೆಗೆ (ಎದೆಗೆ)ಧುಮುಕಿ(ಧುಮುಕಿ)||
ಹೆಜ್ಜೆಯ ಮೇಲೆ ಹೆಜ್ಜೆಯ ಹಾಕಿ
ಒಳಬಂದ ಮುಕುಂದ
ಎಲ್ಲರ ಬಿಟ್ಟೆನ್ನೆದೆಯೊಳಗೆ
ಸಾವಿರ ಹೆಂಗಳ ಕಂಗಳು ನೋಡನೆ
ಶ್ರೀ ಹರಿಯ ಅರವಿಂದ
ನನ್ನನು ನೋಡಿದ ಸಾಕೆನಗೆ
ಪ್ರೀತಿಗೆ ಭಕ್ತಿಗೆ ಸೋಲನೆ ಶ್ಯಾಮನು
||ಮುರಳಿ ರವಳಿ ಎದೆಗೆ ಧುಮುಕಿ
ಅನುರಾಗದ ಅಮೃತ ಬಿಂದಿಗೆ ತುಂಬತುಂಬಿ
ತನುವೆ ಕಲಕಿ ಮನವೆ ತುಳುಕಿ
ತಾನನ ತಾನನ ತಾನನ||
Murali Ravali song lyrics from Kannada Movie Naga Devathe starring Saikumar, Prema, Charulatha, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by Om Saiprakash and film is released on 2000