ರಕ್ತಸರಿದುರೆಗೆ ಕೈಯ್ಯಲ್ಲಾಗದ
ಕಲ್ಲಾಗದಿರು ಹೇ ತಾಯೆ
ಹಗಲು ಇರುಳು ನಿನ್ನ ನೆನೆಯೊ ಭಕ್ತರ
ಮಾನಹರಣ ತಡಿ ಮಹಾ ತಾಯಿ
ದುಷ್ಟರ ಶಿಕ್ಷಿಸಿ ಶಿಷ್ಟರ ರಕ್ಷಿಸಿ
ಶಿಲೆಯಾಗಿ ಹೋಗೆ ಜಗದಮ್ಮ
ಎದ್ದು ಬರದೆ ಏನು ಅನದೆ ನೀನು
ಜಗದಮ್ಮ ಹೇ ಗಾದೆಯಮ್ಮ
ಜಗದಲ್ಲಿ ನೀನಿದ್ದರೆ ಬದುಕಿದ್ದರೆ
ನನ್ನುಳಿಸು ಬಾ
ನನ್ನುಳಿಸು ಬಾ
ನನ್ನುಳಿಸು ಬಾ
ನನ್ನುಳಿಸು ಬಾ
ಅಳುವನು ನುಂಗಿ ಬದುಕುವ ದೀನರ
ಕಂಡರೆ ನಿನಗೆ ನಗುವೇನೆ
ಅಳುವ ಹೆಣ್ಣ ಅಳಿಸಬೇಕು ಅನ್ನೊ
ಸಣ್ಣ ಕನದತಿ ಛಲವೇನೆ
ಉಳಿಸುವ ಬಲವಿದ್ದರೆ ಉಳಿದಿದ್ದರೆ
ನನ್ನುಳಿಸು ಬಾ
ನನ್ನುಳಿಸು ಬಾ
ನನ್ನುಳಿಸು ಬಾ
ನನ್ನುಳಿಸು ಬಾ
ಹಾಡಹಗಲಿನಲ್ಲಿ ಯಾಕೆ ಯಾಕೆ ಇಂತ
ಹಾಳು ನಿದ್ದೆಯಲಿ ಮುಳುಗಿರುವೆ
ಮಾಟಮಂತ್ರ ಬೀಗ ಬಾಗ್ಲು
ನಿನಗೆತ್ತೀನಾ ಎದ್ದು ಬಾ
ನಾನು ಹೆಣ್ಣು ನೀನು ಹೆಣ್ಣು
ಹೆಣ್ಣಿನ ಕಷ್ಟ ತಿಳಿ ಬಾರೆ
ಆದರೆ ದೀನನ ಕಾಪಾಡು
ಇಲ್ಲ ಸೋಲೊಪ್ಪಿಕೋ ಇಳಿದು ಬಾ
ಏನು ಏನು ಅಂತ ಮಹಾ ಕೇಳಿಬಿಟ್ಟೆ
ಅಂತ ಮಾತನಾಡದೆ ಮೂಕಾದೆ
ತಾಳಿಭಾಗ್ಯವ ಕೇಳೊ ಹೆಣ್ಣಿನಾಸೆ
ತಪ್ಪೇನೆ ಹೇ ಮುತ್ತೈದೆ
ಬಾಗಿನಪಡೆದಿದ್ದರೆ ನೆನಪಿದ್ದರೆ
ನನ್ನುಳಿಸು ಬಾ
ನನ್ನುಳಿಸು ಬಾ
ನನ್ನುಳಿಸು ಬಾ
ನನ್ನುಳಿಸು ಬಾ
ಹೇ ತಾಯಂದಿರೆ ಏಳಕ್ಕಂದಿರೆ
ಜಗದಲ್ಲಿ ನೀವು ಪ್ರಬಲೆಯರು
ಪ್ರಬಲೆಯರೆ ಇಂದು ಅಬಲೆಯರಾದರೆ
ಅಳಲೇ ನಗಲೇ ಹೇಳಿ
ನಿಜವೆ ಇಲ್ಲಿ ಸಾಯುತಲಿದ್ದರು
ನಿಜ ನಾನಿಮ್ಮನು ಕೂಗೋದು
ಈ ನಿಜವೇ ಇಂದು ಸುಳ್ಳಾದರೆ
ನಿಜವಮ್ಮ ನಾ ಸಾಯೋದು
ಏಳು ಅಕ್ಕ ತಂಗಿಯಂದಿರಂದು
ಕುಂಕುಮ ಪಡೆದಿದು ಮರ್ತೋಯ್ತ
ರಾಜಮಂತ್ರಿ ಸಿರಿಯ ಸೇವೆಯಲ್ಲಿ
ಬಡವರ ತುಳಸಿ ತಡೆಯಾಯ್ತ
ಭಕ್ತರ ಮನೆಬೀದಿಯ ಗುರುತಿದ್ದರೆ ದಯಮಾಡಿಸಿ
ನೀವೇನೆಂದು ನಿರೂಪಿಸಿ ನಿರೂಪಿಸಿ
ಕಾಳಿ ಮಾರಿ ಬೀರಿ ದುರ್ಗೆ
ಚಂಡಿ ಚೌರಿ ಚಾಮುಂಡಿ
ಬನ್ನಿರಿ ತನ್ನಿರಿ ಅಸ್ರ್ತ ಶಸ್ತ್ರ
ನೆಲಕ್ಕುರುಳಲಿ ಈ ಪಾಶಂಡಿ
ಬನ್ನಿರಿ… ತಂದಿರಿ ತಾಯಂದಿರೆ
ಕಲ್ಲುಗಳೆಲ್ಲ ಮಾಪಗಳಲ್ಲಿ
ಮುಳುಗಿರುವುದರ ಅರಿವಿದೆಯೇ
ಅರಿವಿದ್ದರೆ ಘನಮೌನವಿದೇಕೆ
ಸತ್ಯದ ನಾಶವಾಗಬೇಕೆ
ಬನ್ನಿರಿ ತಂದಿರಿ ತಾಯಂದಿರೆ
ಓಂ ಕಾಳಿ ಶ್ರೀ ಕಾಳಿ ಮಾಂಕಾಳಿ
ಮಹಾಕಾಳಿ ಯಮಕಾಳಿ ಗ್ರೀಂಕಾಳಿ ಜಗದಂಬಿಕೆ
ಓಂ ಕಾಳಿ ಶ್ರೀ ಕಾಳಿ ಮಾಂಕಾಳಿ
ಮಹಾಕಾಳಿ ಯಮಕಾಳಿ ಗ್ರೀಂಕಾಳಿ ಜಗದಂಬಿಕೆ
ಅರಿಕಾಳಿ ವರಕಾಳಿ ಸಿರಿಕಾಳಿ ಗುರುಕಾಳಿ
ಮುಕ್ಕಣ್ಣ ನುಡಿಗಣ್ಣ ಜ್ವಾಲಾಂಬಿಕೆ
ಅರಿಕಾಳಿ ವರಕಾಳಿ ಸಿರಿಕಾಳಿ ಗುರುಕಾಳಿ
ಮುಕ್ಕಣ್ಣ ನುಡಿಗಣ್ಣ ಜ್ವಾಲಾಂಬಿಕೆ
ಓಂ ಕಾಳಿ ಶ್ರೀ ಕಾಳಿ ಮಾಂಕಾಳಿ
ಮಹಾಕಾಳಿ ಯಮಕಾಳಿ ಗ್ರೀಂಕಾಳಿ ಜಗದಂಬಿಕೆ
ಅರಿಕಾಳಿ ವರಕಾಳಿ ಸಿರಿಕಾಳಿ ಗುರುಕಾಳಿ
ಮುಕ್ಕಣ್ಣ ನುಡಿಗಣ್ಣ ಜ್ವಾಲಾಂಬಿಕೆ
ಓಂ ಕಾಳಿ ಶ್ರೀ ಕಾಳಿ ಮಾಂಕಾಳಿ
ಮಹಾಕಾಳಿ ಯಮಕಾಳಿ ಗ್ರೀಂಕಾಳಿ ಜಗದಂಬಿಕೆ
ಅರಿಕಾಳಿ ವರಕಾಳಿ ಸಿರಿಕಾಳಿ ಗುರುಕಾಳಿ
ಮುಕ್ಕಣ್ಣ ಮುರಿಗಣ್ಣ ಜ್ವಾಲಾಂಬಿಕೆ
ಗಣಕೂಟ ಗಣಭೂತ ಗಣಪ್ರೇತ ಗಣನಾಥ
ಗುಣಗುಣಿಸಿ ದಿನ ನಮಿಸೊ ಮೂಕಾಂಬಿಕೆ
ಗಣಕೂಟ ಗಣಭೂತ ಗಣಪ್ರೇತ ಗಣನಾಥ
ಗುಣಗುಣಿಸಿ ದಿನ ನಮಿಸೊ ಮೂಕಾಂಬಿಕೆ
ಓಂ ಕಾಳಿ ಶ್ರೀ ಕಾಳಿ ಮಾಂಕಾಳಿ ಮಹಾಕಾಳಿ
ಯಮಕಾಳಿ ಗ್ರೀಂಕಾಳಿ ಜಗದಂಬಿಕೆ
ಜಗದಂಬಿಕೆ
ಜಗದಂಬಿಕೆ