ಒಂದು ಹುಡುಗಿ ನೋಡ್ದೆ ಕಣೋ
ಕಣ್ಣು ಕಮಲ ನೋಟ ವಿಮಲ
ವಿದ್ಯುನ್ನತೆ ಇವಳು ರೋಮಾಂಚನದವಳು
ಬಾಳೆದಿಂಡವಳು ಬಳುಕಾಡದೆ ಬರಳು
ಒಂದು ಹುಡುಗಿ ನೋಡ್ದೆ ಕಣೋ
ಕೊರಳು ಕೊಳಲು ಕುರುಳು ಮುಗಿಲು
ತುಳುಕೊ ಯೌವ್ವನದ ಶ್ರೀಮಂತಿಕೆಯವಳು
ಕುಡಿಯಲೆ ಬೇಕೆನಿಸೊ ಕಾದಂಬರಿ ಇವಳು
ಕೊರಳನ್ನು ಕೊಂಕು ಮಾಡಿ
ಕವಿಯನ್ನು ಕೆಣಕೊ ಬೊಂಬೆ
ನಡುವನ್ನು ನವಿಲು ಮಾಡಿ
ಮೈಗೆದರೊ ಮಂದಗಮನೆ
ಹಸಿರಲಿ ವನರಾಣಿ ಬಿಳುಪಲಿ ಸುಮರಾಣಿ
ಇವಳೆಂದರೆ ಬಣ್ಣಕೆ ಮೆರುಗು
ಒಂದು ಹುಡುಗಿ ನೋಡ್ದೆ ಕಣೋ
ನಗುವು ಬೆಳ್ಳಿ ಮಾಗೊ ಮಳ್ಳಿ
ದುಂಬಿ ಹಿಂಡುಗಳ ದೃಷ್ಟಿ ಆಗದಿರಲಿ
ಇವಳ ಹೂ ಹೃದಯ ನನಗೆ ಮುಡುಪಿರಲಿ
ಅಡಿಯಿಂದ ಮುಡಿಯವರೆಗೆ
ಇವಳನ್ನೆ ಓದುತಿರುವೆ
ಪ್ರೀತಿ ಪರೀಕ್ಷೆಯಲ್ಲಿ
ಇವಳನ್ನೆ ಬರೆಯಲಿರುವೆ
ಪಡೆಯುವೆ ಪದವಿ ನಾ
ಹೃದಯದ ಪದಕನ
ಇವಳೆಂದರೆ ಜೀವನ ಚೈತ್ರ
ಒಂದು ಹುಡುಗಿ ನೋಡ್ದೆ ಕಣೋ
ಕರೆಯೊ ತೋಳು ತೊಂಡೆ ಹೋಳು
ಮನಸ ಸ್ವಾಗತಿಸೊ ದೀಪಾರತಿ ಇವಳು
ಮಾನಸ ಸ್ವೀಕರಿಸೊ ರೂಪಾರತಿ ಇವಳು
ಒಂದು ಹುಡುಗಿ ನೋಡ್ದೆ ಕಣೋ
ಬೆಡಗಿ ಸೊಬಗಿ ಎದೆಯ ಹುಡುಗಿ
ಶ್ರೀಕಾರವ ಬರೆವ ನಾಯಕಿಯೊ ಇವಳು
ಪ್ರೇಮ್ಕಾರವ ನುಡಿವ ಪಾಲಕಿಯೊ ಇವಳು
ಒಂದು ಹುಡುಗಿ ನೋಡ್ದೆ ಕಣೋ
ಕಣ್ಣು ಕಮಲ ನೋಟ ವಿಮಲ
ವಿದ್ಯುನ್ನತೆ ಇವಳು ರೋಮಾಂಚನದವಳು
ಬಾಳೆದಿಂಡವಳು ಬಳುಕಾಡದೆ ಬರಳು
ಒಂದು ಹುಡುಗಿ ನೋಡ್ದೆ ಕಣೋ
ಕೊರಳು ಕೊಳಲು ಕುರುಳು ಮುಗಿಲು
ತುಳುಕೊ ಯೌವ್ವನದ ಶ್ರೀಮಂತಿಕೆಯವಳು
ಕುಡಿಯಲೆ ಬೇಕೆನಿಸೊ ಕಾದಂಬರಿ ಇವಳು
ಕೊರಳನ್ನು ಕೊಂಕು ಮಾಡಿ
ಕವಿಯನ್ನು ಕೆಣಕೊ ಬೊಂಬೆ
ನಡುವನ್ನು ನವಿಲು ಮಾಡಿ
ಮೈಗೆದರೊ ಮಂದಗಮನೆ
ಹಸಿರಲಿ ವನರಾಣಿ ಬಿಳುಪಲಿ ಸುಮರಾಣಿ
ಇವಳೆಂದರೆ ಬಣ್ಣಕೆ ಮೆರುಗು
ಒಂದು ಹುಡುಗಿ ನೋಡ್ದೆ ಕಣೋ
ನಗುವು ಬೆಳ್ಳಿ ಮಾಗೊ ಮಳ್ಳಿ
ದುಂಬಿ ಹಿಂಡುಗಳ ದೃಷ್ಟಿ ಆಗದಿರಲಿ
ಇವಳ ಹೂ ಹೃದಯ ನನಗೆ ಮುಡುಪಿರಲಿ
ಅಡಿಯಿಂದ ಮುಡಿಯವರೆಗೆ
ಇವಳನ್ನೆ ಓದುತಿರುವೆ
ಪ್ರೀತಿ ಪರೀಕ್ಷೆಯಲ್ಲಿ
ಇವಳನ್ನೆ ಬರೆಯಲಿರುವೆ
ಪಡೆಯುವೆ ಪದವಿ ನಾ
ಹೃದಯದ ಪದಕನ
ಇವಳೆಂದರೆ ಜೀವನ ಚೈತ್ರ
ಒಂದು ಹುಡುಗಿ ನೋಡ್ದೆ ಕಣೋ
ಕರೆಯೊ ತೋಳು ತೊಂಡೆ ಹೋಳು
ಮನಸ ಸ್ವಾಗತಿಸೊ ದೀಪಾರತಿ ಇವಳು
ಮಾನಸ ಸ್ವೀಕರಿಸೊ ರೂಪಾರತಿ ಇವಳು
ಒಂದು ಹುಡುಗಿ ನೋಡ್ದೆ ಕಣೋ
ಬೆಡಗಿ ಸೊಬಗಿ ಎದೆಯ ಹುಡುಗಿ
ಶ್ರೀಕಾರವ ಬರೆವ ನಾಯಕಿಯೊ ಇವಳು
ಪ್ರೇಮ್ಕಾರವ ನುಡಿವ ಪಾಲಕಿಯೊ ಇವಳು
Ondu Hudugi Nodde Kano song lyrics from Kannada Movie Megha Male starring Sunad Raj, Vijayashree, M P Shankar, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by S Narayan and film is released on 1994