ಮಗ : ಅಪ್ಪಾ ಅಪ್ಪಾ ನಂಗೆ ನೀನು ಬೇಕಪ್ಪಾ
ಅಪ್ಪ ಅಮ್ಮಂಗೇ ನೀನು ಯಾಕೆ ಬೇಡಪ್ಪಾ
ಅಪ್ಪ: ಅಪ್ಪ ಅಲ್ಲ ಬೆಪ್ಪ ತಿಂದಾ ಬಿಸಿ ತುಪ್ಪ
ಅದೇ ತಪ್ಪಾಗಿ ಹೋಯ್ತಪ್ಪಾ
ಅಪ್ಪ: ಮಗನೇ ಮಗನೇ ನಂಗೆ ನೀನು ಬೇಕಪ್ಪಾ
ಬೇಡ ಅನ್ನೋ ಅಮ್ಮ ಕೂಡ ಬೇಕಪ್ಪಾ
ಮಗ : ಬರ್ತಾಳಪ್ಪ ಬಂದು ಬೈತಾಳಪ್ಪ
ಬೈದು ಅತ್ಕೊಂಡು ಎಂದು ಸೇರುತ್ತಾಳಪ್ಪಾ
ಮಗ : ಅಪ್ಪಾ ಅಪ್ಪಾ ತಮಾಷೆ ಕೇಳಪ್ಪಾ
ಯಾರಪ್ಪ ನಿಮ್ಮಪ್ಪ ಅಂತಾ ಇದ್ರಪ್ಪಾ
ಈಗ ಕಾಟ ಇಲ್ಲಪ್ಪಾ
ಅಪ್ಪ: ಮಗನೇ ಮಗನೇ ಆನಂದ ತಂದಪ್ಪ
ಆ ನಿನ್ನ ಅಮ್ಮನಿಗೇ ಕಾವಲು ನಾನಪ್ಪ
ನನ್ನ ಲೋಕವೇ ನೀವಪ್ಪಾ
ಮಗ : ಅಪ್ಪಾ ಅಪ್ಪ ಬೇಜಾರಪ್ಪ
ಅಮ್ಮ ನೀನು ಒಂದಾಗ್ರಪ್ಪಾ
|| ಅಪ್ಪ: ಅಪ್ಪ ಅಲ್ಲ ಬೆಪ್ಪ ತಿಂದಾ ಬಿಸಿ ತುಪ್ಪ
ಅದೇ ತಪ್ಪಾಗಿ ಹೋಯ್ತಪ್ಪಾ
ಮಗ : ಅಪ್ಪಾ ಅಪ್ಪಾ ನಂಗೆ ನೀನು ಬೇಕಪ್ಪಾ
ಅಪ್ಪ: ಮಗನೇ ಮಗನೇ ನಂಗೆ ನೀನು ಬೇಕಪ್ಪಾ ||
ಅಪ್ಪ : ಗಂಡ ಹೆಂಡ್ತಿ ಜಗಳನ ಬಿಡಿಸೋಕೆ
ಆ ದೇವರು ಮಕ್ಕಳಿಗೆ ಶಕ್ತಿಯ ಕೊಡುತಾನೇ
ನ್ಯಾಯ ಹೇಳಲೂ ಬಿಡುತಾನೇ
ಮಗ : ಉಂಡು ತಿಂದು ಮಲಗೋಕೆ ಮುಂಚೆನೇ
ಶ್ರೀ ಶ್ರೀಮತಿ ಜಗಳಗಳು ಮುಗಿಯಲೇಬೇಕಲ್ಲಾ
ನಿಮ್ದು ಹಾಗ್ಯಾಕ್ ಆಗಲಿಲ್ಲಾ
ಅಪ್ಪ: ಎಲ್ಲಾ ಕೇಸು ಹಾಗೇ ಕಂದ
ನನ್ನಾ ಕಥೆ ಹೀಗೆ ಕಂದ
ಮಗ : ಒಳ್ಳೆ ಅಮ್ಮ ಅವಳೂ ಒಳ್ಳೇ ಅಪ್ಪ ನೀನು
ಜಗಳ ಇಲ್ಯಾಕೆ ಬಂತಪ್ಪಾ
|| ಅಪ್ಪ: ಮಗನೇ ಮಗನೇ ನಂಗೆ ನೀನು ಬೇಕಪ್ಪಾ
ಮಗ : ಅಪ್ಪಾ ಅಪ್ಪಾ ನಂಗೆ ನೀನು ಬೇಕಪ್ಪಾ
ಅಪ್ಪ: ಅಪ್ಪ ಅಲ್ಲ ಬೆಪ್ಪ ತಿಂದಾ ಬಿಸಿ ತುಪ್ಪ
ಅದೇ ತಪ್ಪಾಗಿ ಹೋಯ್ತಪ್ಪಾ
ಮಗ : ಅಪ್ಪಾ ಅಪ್ಪಾ ನಂಗೆ ನೀನು ಬೇಕಪ್ಪಾ
ಅಪ್ಪ: ಮಗನೇ ಮಗನೇ ನಂಗೆ ನೀನು ಬೇಕಪ್ಪಾ
ಮಗ : ಬರ್ತಾಳಪ್ಪ ಅಮ್ಮ ಬೈತಾಳಪ್ಪ
ಬೈದು ಅತ್ಕೊಂಡು ಎಂದು ಸೇರುತ್ತಾಳಪ್ಪಾ ||