Bharavaseya Belaka Bitthi Lyrics

in Malgudi Days

LYRIC

ಭರವಸೆಯ ಬೆಳಕ ಬಿತ್ತಿ
ಕನಸ... ಕುದುರೆ ಹತ್ತಿ 
ತಿರುವು ದಾಟಿ ಬೆಟ್ಟ ಏರಿ..  
ತುದಿಯ ಬೇಗ ಮುಟ್ಟಿ 
ಗೆಲುವ ನಗೆಯ ಬೀರಿ
ಜಗವೆಲ್ಲಾ ಕಾಲ ಕೆಳಗೆ ಸೇರಿ 
ಅಮ್ಮ ನಿನ್ನ ನೆನಪೊಂದೇ
ಸ್ಮೃತಿಯೊಳಗೆ... 
ನನ್ನೊಳಗಿನ ಮೌನ
ನನ್ನುಸಿರಿನ ಧ್ಯಾನ 
ನೀನೇ ಧೈರ್ಯ..
ನೆರಳಾಗೋ ಶೌರ್ಯ 
ಜಗ ಬೆಳಗೋ ಹಣತೆ ನೀನಮ್ಮಾ... 
 
ದೇವಕಿಗೆ ಕೃಷ್ಣ ದೇವರಲ್ಲಾ..
ಕೌಸಲ್ಯಗೆ ರಾಮ ದೇವರಲ್ಲಾ 
ದೇವರನ್ನೇ ಹೆತ್ತ ಅಮ್ಮ ದೇವರಲ್ಲವೇ.. 
ಮತ್ತೊಂದು ಬಾಲ್ಯ ಬೇಡುತಾ
ಬೆಚ್ಚನೆ ಮಡಿಲಲ್ಲಿ ಮಗುವಾಗುವೆ ನಾನು ಅಮ್ಮಾ 
ಅಮ್ಮ ನಿನ್ನ ಬಾಳಲ್ಲಿ ನಗುವಾಗುವೆನಮ್ಮಾ 
ನನ್ನ ಅಮ್ಮಾ ನನ್ನಮ್ಮಾ ಜಗ ಕಾಯೋ ದೈವ 
ನನ್ನ ಜೀವ ನೀನೇ ನನ್ನ ಭಾವ ನೀನೇ 
ನೀನೇಧೈರ್ಯ ನೆರಳಾಗೋ ಶೌರ್ಯ
ಜಗ ಬೆಳಗೋ ಹಣತೆ ನೀನಮ್ಮಾ... 
ಧಿರೆನಾ...ನಾನಾ.....
ಅಮ್ಮಾಅಮ್ಮಾ...  ಅಮ್ಮಾಅಮ್ಮಾ......

Amma-Bharavaseya Belaka Bitthi song lyrics from Kannada Movie Malgudi Days starring Vijay Raghavendra, Greeshma Sridhar, Thejaswini, Lyrics penned by Kishore Moodbidri Sung by Ashwin Sharma, Music Composed by Gagan Baderia, film is Directed by Kishore Moodbidri and film is released on 2020