ಧೀಮ್ ತನಕ ತಾನ ಧೀಮ್ ತನಕ ತಾನ
ನಿನ್ನಂದ ನೋಡಲೆಂದು ಚಂದಮಾಮನು
ನಿತ್ಯ ಬರುವ
ಕಣ್ಣಮುಚ್ಚೆ ಕಾಡೆ ಗೂಡೆ ಆಟ ಆಡುತ
ಇಲ್ಲೆ ಇರುವ
ಬಾನಿಗೊಂದು ಉಡುಗೊರೆ ನೀ
ಬಂದೆ ಹೇಗೆ ಭೂಮಿಗೆ ನೀ
ನಿನ್ನ ಕಂಡ ಮೇಲೆ ನಾನು ಮರೆತೆನು ನಾ ನನ್ನನ್ನ
ನಾನು ನೀನು ಇನ್ನು ಮುಂದೆ ಎಂದು ಒಂದೆ ಅಲ್ಲವ
ಇನ್ನು ಮುಂದೆ ಎಂದು ಒಂದೆ ಅಲ್ಲವ
||ನಿನ್ನಂದ ನೋಡಲೆಂದು ಚಂದಮಾಮನು
ನಿತ್ಯ ಬರುವ
ಕಣ್ಣಮುಚ್ಚೆ ಕಾಡೆ ಗೂಡೆ ಆಟ ಆಡುತ
ಇಲ್ಲೆ ಇರುವ||
ಅಭಿಮಾನಿ ಆದೆ ಕ್ಷಮಿಸು
ಮುಂಗುರುಳಿಗೆ
ರುಜು ಹಾಕು ಬಿಡದೆ ಬಂದು
ನನ್ನ ನೆರಳಿಗೆ
ಕಣ್ಣಲ್ಲಿ ಕಂಡೆ ಕಾಮನಬಿಲ್ಲು
ಹತ್ತಿದ್ದು ಯಾಕೆ ಅದ ಮುಗಿಲು
ತುಂಬಾನೆ ಚೆಂದ ಸುಂದರ ಸುಳ್ಳು
ಗೊತಾಯ್ತ ನಿಂಗೆ ನಿಂದೆ ಮರುಳು
ಅದ್ಭುತವೇ ನಿಂತಿದೆ ಎದುರು ಎಟುಕದ ಆಕಾಶ
ಹೊಂಗನಸೇ ಬರೆದಿದೆ ಹೆಸರು ಬಿಡೆನು ನಾ ಅವಕಾಶ
||ನಾನು ನೀನು ಇನ್ನು ಮುಂದೆ ಎಂದು ಒಂದೆ ಅಲ್ಲವ
ಇನ್ನು ಮುಂದೆ ಎಂದು ಒಂದೆ ಅಲ್ಲವ||
||ನಿನ್ನಂದ ನೋಡಲೆಂದು ಚಂದಮಾಮನು
ನಿತ್ಯ ಬರುವ
ಕಣ್ಣಮುಚ್ಚೆ ಕಾಡೆ ಗೂಡೆ ಆಟ ಆಡುತ
ಇಲ್ಲೆ ಇರುವ||
ತುದಿಗಾಲಿನಲ್ಲಿ ನಿಂತೆ ನಿನ ಭೇಟಿಗೆ
ಮನಸಾರೆ ಸೋತೆ ನಾನು ಕರೆಯೋಲೆಗೆ
ಮುದ್ದಾದ ನಿನ್ನ ಕೆಂದುಟಿಗೊಂದು
ಮುತ್ತಿಕ್ಕೊ ಆಸೆ ಏನೊ ದಿಗಿಲು
ತುಂಟಾಟ ಕಂಡು ನಾಚಿತು ಹಗಲು
ನೀನೊಮ್ಮೆ ನನ್ನ ನೋಡಿ ನಗಲು
ಸಂತೋಷಕೆ ಕಾಣದು ಜಗವೆ ಜೊತೆ ಇರು ನೀ ಹೀಗೆ
ಸಂಗಮಕ್ಕೆ ಕಾದಿದೆ ಒಲವೇ ಇರುವೆನು ನಿನಗಾಗೆ
ಹೇ
||ನಿನ್ನಂದ ನೋಡಲೆಂದು ಚಂದಮಾಮನು
ನಿತ್ಯ ಬರುವ
ಕಣ್ಣಮುಚ್ಚೆ ಕಾಡೆ ಗೂಡೆ ಆಟ ಆಡುತ
ಇಲ್ಲೆ ಇರುವ||
||ಬಾನಿಗೊಂದು ಉಡುಗೊರೆ ನೀ
ಬಂದೆ ಹೇಗೆ ಭೂಮಿಗೆ ನೀ
ನಿನ್ನ ಕಂಡ ಮೇಲೆ ನಾನು ಮರೆತೆನು ನಾ ನನ್ನನ್ನ||
||ನಾನು ನೀನು ಇನ್ನು ಮುಂದೆ ಎಂದು ಒಂದೆ ಅಲ್ಲವ
ಇನ್ನು ಮುಂದೆ ಎಂದು ಒಂದೆ ಅಲ್ಲವ||