Haayaada Ee Sangama Lyrics

in Katari Veera

Video:

LYRIC

ಹಾಯಾದ ಈ ಸಂಗಮಾ
ಹೊಸ ಬಾಳಿನ ಆಶಾ ಸುಮ
ಬೆಸೆಯಿತು ನಮ್ಮಈ ಪ್ರೇಮ

ಹಾಯಾದ ಈ ಸಂಗಮಾ
ಹೊಸ ಬಾಳಿನ ಆಶಾ ಸುಮ
ಬೆಸೆಯಿತು ನಮ್ಮಈ ಪ್ರೇಮ
ಹಾಯಾದ…..
 
ಓ ನಲ್ಲೆ ಚೆಂದುಟಿಯು ಕೆಂಪೇರಿತೇಕೆ 
ನಿನ್ನನೇ ಸೇರೋ ಕಾತುರವದಕೇ  
ನಿಂದಿಹೆ ನಾನು ಪೂರೈಸೆ ಬಯಕೇ
ಒಂದಾಗಿ ನಡೆವಾ ಒಲವೆಂಬ ಜಗಕೆ
ಒಂದಾಗಿ ನಡೆವಾ ಒಲವೆಂಬ ಜಗಕೆ
 
|| ಹೊಸ ಬಾಳಿನಾ ಆಶಾ ಸುಮ
ಬೆಸೆಯಿತು ನಮ್ಮಈ ಪ್ರೇಮ
ಹಾಯಾದ ಈ ಸಂಗಮಾ…||
 
ಆ ಆ ಆ..ಆಆಆ…ಓ ಓ ಓ..ಹ್ಮಹ್ಮಹ್ಮ
 
ನನ್ನೆದೆಯ ಮಂದಿರದೆ ನೀನೇಕೆ ನಿಂತೆ
ಮುತ್ತಿನ ರಾಶಿ ನಾನಾಗೆ ನಿಂತೆ
ಆ.. ಆಸೆಗಿಂತೂ ತಡವೇನು ಬಂತು
ಅಂದಾಗೆ ನಾವು ಒಂದಾದೆವಿಂತು
ಅಂದಾಗೆ ನಾವು ಒಂದಾದೆವಿಂತು

|| ಹೊಸ ಬಾಳಿನಾ ಆಶಾ ಸುಮ
ಬೆಸೆಯಿತು ನಮ್ಮಈ ಪ್ರೇಮ
ಹಾಯಾದ ಈ ಸಂಗಮಾ…||

Haayaada Ee Sangama song lyrics from Kannada Movie Katari Veera starring Dr Rajkumar, Udayakumar, Narasimharaju, Lyrics penned by Sorat Ashwath Sung by P B Srinivas, S Janaki, Music Composed by Upendra Kumar, film is Directed by Y R Swamy and film is released on 1966