Nagareekane Ninna Lyrics

in Karuneye Kutumbada Kannu

Video:

LYRIC

-
ನಾಗರೀಕನೆ ನಿನ್ನ ಹೃದಯದ ಕರೆಯೋಲೆ
ಕಾಡಿಗೆಯ ಕಣ್ಣಿಂದ ಓದಿದಳು ಈ ಬಾಲೆ
ಮನನವಾಯಿತು ಅದುವೆ ಅನುರಾಗ ಮಾಲೆ
ಮರೆಯಲಾರದ ಮಧುರ ಶೃಂಗಾರ ಲೀಲೆ
 
ಬಲ್ಲೆ ಬಲ್ಲೆ ಬಲ್ಲೆ ಬಲ್ಲೆ ಬಲ್ಲೆ ಬಲ್ಲೆ
ನೀ ನನ್ನಲ್ಲೆ ನಾ ನಿನ್ನಲ್ಲೆ
ಬಲ್ಲೆ ಬಲ್ಲೆ
ನೀ ನನ್ನಲ್ಲೆ ನಾ ನಿನ್ನಲ್ಲೆ
ಸನ್ನೆಯ ಮಾತಿನಲ್ಲೆ ಸಂಜೆಯ ರಾಗಲಲ್ಲೆ
ಸನ್ನೆಯ ಮಾತಿನಲ್ಲೆ ಸಂಜೆಯ ರಾಗಲಲ್ಲೆ
ಇನ್ನೇನು ಹೇಳಲೊಲ್ಲೆ ನೀ ಬಲ್ಲೆ
ಇನ್ನೇನು ಹೇಳಲೊಲ್ಲೆ ನೀ ಬಲ್ಲೆ
ಬಲ್ಲೆ ಬಲ್ಲೆ
ನೀ ನನ್ನಲ್ಲೆ ನಾ ನಿನ್ನಲ್ಲೆ
 
ನೊಂದ ಜೀವಕ್ಕೆ ನಾನು ನಗುವಾಗ ಬಲ್ಲೆ
ನೂರಾರು ಚಿಂತೆಗಳ ನಾ ಮರೆಸಬಲ್ಲೆ
ನಿತ್ಯ ನೂತನ ಸುಖವ ನಾ ನೀಡಬಲ್ಲೆ
ನೆರಳು ಬೆಳಕಿನ ನಡುವೆ ಒಡನಾಡಬಲ್ಲೆ
 
||ಬಲ್ಲೆ ಬಲ್ಲೆ ಬಲ್ಲೆ ಬಲ್ಲೆ ಬಲ್ಲೆ ಬಲ್ಲೆ
ನೀ ನನ್ನಲ್ಲೆ ನಾ ನಿನ್ನಲ್ಲೆ
ಸನ್ನೆಯ ಮಾತಿನಲ್ಲೆ ಸಂಜೆಯ ರಾಗಲಲ್ಲೆ
ಸನ್ನೆಯ ಮಾತಿನಲ್ಲೆ ಸಂಜೆಯ ರಾಗಲಲ್ಲೆ
ಇನ್ನೇನು ಹೇಳಲೊಲ್ಲೆ ನೀ ಬಲ್ಲೆ
ಇನ್ನೇನು ಹೇಳಲೊಲ್ಲೆ ನೀ ಬಲ್ಲೆ
ಬಲ್ಲೆ ಬಲ್ಲೆ
ನೀ ನನ್ನಲ್ಲೆ ನಾ ನಿನ್ನಲ್ಲೆ ||
 
ಶ್ರೀಮಂತ ಶ್ರೀಯುತ ಕಟ್ಟಾಳಬಲ್ಲೆ
ಸಮಾಜ ಸಾಧಕರ ಕಣ್ತೆರೆಸಬಲ್ಲೆ
ವೃತ್ತಾಂತ ಪತ್ರಿಕೆಯ ಸುಖವಾಗಬಲ್ಲೆ
ಸಿದ್ದಾಂತ ಸಾಹಿತಿಯ ಸ್ಪೂರ್ತಿ ಎನ್ನಲ್ಲೆ
 
||ಬಲ್ಲೆ ಬಲ್ಲೆ ಬಲ್ಲೆ ಬಲ್ಲೆ ಬಲ್ಲೆ ಬಲ್ಲೆ
ನೀ ನನ್ನಲ್ಲೆ ನಾ ನಿನ್ನಲ್ಲೆ
ಸನ್ನೆಯ ಮಾತಿನಲ್ಲೆ ಸಂಜೆಯ ರಾಗಲಲ್ಲೆ
ಸನ್ನೆಯ ಮಾತಿನಲ್ಲೆ ಸಂಜೆಯ ರಾಗಲಲ್ಲೆ
ಇನ್ನೇನು ಹೇಳಲೊಲ್ಲೆ ನೀ ಬಲ್ಲೆ
ಇನ್ನೇನು ಹೇಳಲೊಲ್ಲೆ ನೀ ಬಲ್ಲೆ
ಬಲ್ಲೆ ಬಲ್ಲೆ
ನೀ ನನ್ನಲ್ಲೆ ನಾ ನಿನ್ನಲ್ಲೆ ||
ಬಲ್ಲೆ ಬಲ್ಲೆ

Nagareekane Ninna song lyrics from Kannada Movie Karuneye Kutumbada Kannu starring Dr Rajkumar, Udayakumar, Balakrishna, Lyrics penned by Kanagal Prabhakar Shastry Sung by S Janaki, Music Composed by G K Venkatesh, film is Directed by T V Singh Takur and film is released on 1962