Rasthe Pakka Boddi Haida Lyrics

in Kannadakkagi Ondannu Otthi

Video:

LYRIC

-
ರಸ್ತೆ ಪಕ್ಕ ಬೊಡ್ಡಿ ಹೈದ ದ್ಯಾವ್ರು ಕುಂತವ್ನೆ
ಹಕ್ಕಿ ಪುಕ್ಕ ಜೆಬ್ನಾಗಿಟ್ಟು ಕ್ಯಾಮೆ ಕೊಟ್ಟವ್ನೆ
ಸಂತೆ ಒಳಗೆ ಪ್ರಾಣ ಹೋದ್ರು ನಾವೇನ್ ಮಾಡಣ
ಲೈಫ಼ು ಶ್ಯಾನೆ ಸೂಪರ್‌ ಅಂತೆ ಬನ್ರಿ ನೋಡಣ..
 
ಸರಿಯಾಗೈತೆ ಬಾಳೆ ಕಪ್ಪಾಗುಟ್ಟೈತೆ
ಬಿಳಿಪರ್ದೆ ಹಿಂದೆ ಭಗವಂತ ಕೂತು
ಒನ್‌ ಡೇ ಮ್ಯಾಚ್‌ ಆಡ್ತೊವ್ನೆ
ಜೀವ್ನ ಅನ್ನೊ ಹೈವೇನಾಗೆ
ಕರಿ ಟಾರು ಹೊಯ್ದು ಮೈಲಿಗಲ್ಲ ನೆಟ್ಟು
ಊರ್ ಹೆಸರು ಬರ್ದವ್ನೆ
ಈ ಬಾಳೊಂದು ಕಿತ್ತೋದ ಚಪ್ಪಲಿ ಅಂಗಡಿ ಹಂಗೆ
ನಾವು ಹಾಕ್ಕೊಂಡು ಹೋಯ್ತ ಇರೋದೆ…
 
||ರಸ್ತೆ ಪಕ್ಕ ಬೊಡ್ಡಿ ಹೈದ ದ್ಯಾವ್ರು ಕುಂತವ್ನೆ
ಹಕ್ಕಿ ಪುಕ್ಕ ಜೆಬ್ನಾಗಿಟ್ಟು ಕ್ಯಾಮೆ ಕೊಟ್ಟವ್ನೆ
ಸಂತೆ ಒಳಗೆ ಪ್ರಾಣ ಹೋದ್ರು ನಾವೇನ್ ಮಾಡಣ
ಲೈಫ಼ು ಶ್ಯಾನೆ ಸೂಪರ್‌ ಅಂತೆ ಬನ್ರಿ ನೋಡಣ.. || 
 
ಕಾಲಾನ್ ತೋರ್ಸೊ ಗೊಡೆ ಗಡಿಯಾರಾನೆ
ಕಾಲ್‌ ಮುರಿದುಕೊಂಡು ಮೂಲೇಲಿ ಕುಂತ್ರೆ
ಆ ದ್ಯಾವ್ರೆನ್ ಮಾಡ್ತಾನೆ
ಮಾತ್ರೆ ನೀಡೊ‌ ಡಾಕ್ಟರ್ಗೇನೆ
ಬಿಪಿ ಶುಗರು ಬಂದು ಮ್ಯಾಲಕ್ಕೆ ಹೋದ್ರೆ
ಆ ಉಪ್ಪೇನ್ ಮಾಡ್ತದೆ
ಈ ಬಾಳೊಂದು‌ ಹಾಳಾದ ಸಂತೆಯ ಬೀದಿ ಹಂಗೆ
ಸ್ಟಾರ್ಟು ಎಂಡು ಎರೆಡು ದ್ಯಾವ್ರದ್ದೆ..
 
||ರಸ್ತೆ ಪಕ್ಕ ಬೊಡ್ಡಿ ಹೈದ ದ್ಯಾವ್ರು ಕುಂತವ್ನೆ
ಹಕ್ಕಿ ಪುಕ್ಕ ಜೆಬ್ನಾಗಿಟ್ಟು ಕ್ಯಾಮೆ ಕೊಟ್ಟವ್ನೆ
ಸಂತೆ ಒಳಗೆ ಪ್ರಾಣ ಹೋದ್ರು ನಾವೇನ್ ಮಾಡಣ
ಲೈಫ಼ು ಶ್ಯಾನೆ ಸೂಪರ್‌ ಅಂತೆ ಬನ್ರಿ ನೋಡಣ.. ||

Rasthe Pakka Boddi Haida song lyrics from Kannada Movie Kannadakkagi Ondannu Otthi starring Chikkanna, Avinash Shathamarshan, Krishi Thapanda, Lyrics penned by Kushal GowdaSung by Sanjith Hegde, Music Composed by Arjun Janya, film is Directed by Kushal and film is released on 2018