ಒಮ್ಮೊಮ್ಮೆ ನನ್ನನ್ನು ನಾನೇನೆ ಕೊಲೆಗೈಯುವೆ
ಇನ್ನೊಮ್ಮೆ ನಿನ ಕಂಡು ನಾ ಚೂರು ಸರಿಹೋಗುವೆ
ನನ್ನ ನೀನು ಎಂದೆಂದು ಕ್ಷಮಿಸಬೇಡ
ಒಂದು ಕನಸು ಜೀವಂತ ಉಳಿಸಬೇಡ
ಅನುರಾಗದ ಅಪರಾಧಕೆ
ನಿನ ಕೋಪವೇ ಕಿರುಕಾಣಿಕೆ
ಒಮ್ಮೊಮ್ಮೆ ನನ್ನನ್ನು ನಾನೇನೆ ಕೊಲೆಗೈಯುವೆ...
ಮಾತು ಆಡಲಾರೆ ಕಣ್ಣಲ್ಲಿ ನೋಡಲಾರೆ
ನಿನ್ನೆದುರು ಹೇಗೆ ನಿಂತುಕೊಳ್ಳಲಿ
ಹೋಗು ನೀನು ಸಾಕು
ನಾನಿನ್ನು ಬೇಯಬೇಕು
ಈ ಏಕಾಂತದ ಬೆಂಕಿ ಊರಲಿ
ತಿಳಿಸಿದರೂನು ಮುಗಿಯದ ಕಥೆಯ ಕೇಳುವ ಸಹನೆ ನಿನಗೇತಕೆ
ಅನುರಾಗದ ಅಪರಾಧಕೆ
ಕಡು ವಿರಹವೆ ಕಿರುಕಾಣಿಕೆ
ಓ..ಒಂದೇ ಒಂದು ಬಾರಿ ತೊಳಲ್ಲಿ ಅಳುವ ಆಸೆ
ಬೇರೇನು ಬೇಡ ನನ್ನ ಜೀವಕೆ
ಎಲ್ಲೋ ಇರುವೆ ನಾನು
ಇನ್ನೆಲ್ಲೋ ಸಿಗುವೆ ನೀನು
ಆ ಮೌನ ಸಾಕು ಪೂರ್ತಿ ಜನ್ಮಕೆ
ನೆನಪಿನ ಕವಿತೆ ನೆನಪಲೆ ಇರಲಿ
ಮುಂದಕೆ ಹಾಡು ಇನ್ನೇತಕೆ
ಅನುರಾಗದ ಅಪರಾಧಕೆ
ಸಿಗಲಾರದು ಸ್ವರಮಾಲಿಕೆ
ಒಮ್ಮೊಮ್ಮೆ ನನ್ನನ್ನು ನಾನೇನೆ ಕೊಲೆಗೈಯುವೆ
ಒಮ್ಮೊಮ್ಮೆ ನನ್ನನ್ನು ನಾನೇನೆ ಕೊಲೆಗೈಯುವೆ
ಇನ್ನೊಮ್ಮೆ ನಿನ ಕಂಡು ನಾ ಚೂರು ಸರಿಹೋಗುವೆ
ನನ್ನ ನೀನು ಎಂದೆಂದು ಕ್ಷಮಿಸಬೇಡ
ಒಂದು ಕನಸು ಜೀವಂತ ಉಳಿಸಬೇಡ
ಅನುರಾಗದ ಅಪರಾಧಕೆ
ನಿನ ಕೋಪವೇ ಕಿರುಕಾಣಿಕೆ
ಒಮ್ಮೊಮ್ಮೆ ನನ್ನನ್ನು ನಾನೇನೆ ಕೊಲೆಗೈಯುವೆ...
ಮಾತು ಆಡಲಾರೆ ಕಣ್ಣಲ್ಲಿ ನೋಡಲಾರೆ
ನಿನ್ನೆದುರು ಹೇಗೆ ನಿಂತುಕೊಳ್ಳಲಿ
ಹೋಗು ನೀನು ಸಾಕು
ನಾನಿನ್ನು ಬೇಯಬೇಕು
ಈ ಏಕಾಂತದ ಬೆಂಕಿ ಊರಲಿ
ತಿಳಿಸಿದರೂನು ಮುಗಿಯದ ಕಥೆಯ ಕೇಳುವ ಸಹನೆ ನಿನಗೇತಕೆ
ಅನುರಾಗದ ಅಪರಾಧಕೆ
ಕಡು ವಿರಹವೆ ಕಿರುಕಾಣಿಕೆ
ಓ..ಒಂದೇ ಒಂದು ಬಾರಿ ತೊಳಲ್ಲಿ ಅಳುವ ಆಸೆ
ಬೇರೇನು ಬೇಡ ನನ್ನ ಜೀವಕೆ
ಎಲ್ಲೋ ಇರುವೆ ನಾನು
ಇನ್ನೆಲ್ಲೋ ಸಿಗುವೆ ನೀನು
ಆ ಮೌನ ಸಾಕು ಪೂರ್ತಿ ಜನ್ಮಕೆ
ನೆನಪಿನ ಕವಿತೆ ನೆನಪಲೆ ಇರಲಿ
ಮುಂದಕೆ ಹಾಡು ಇನ್ನೇತಕೆ
ಅನುರಾಗದ ಅಪರಾಧಕೆ
ಸಿಗಲಾರದು ಸ್ವರಮಾಲಿಕೆ
ಒಮ್ಮೊಮ್ಮೆ ನನ್ನನ್ನು ನಾನೇನೆ ಕೊಲೆಗೈಯುವೆ
Ommomme Nannannu song lyrics from Kannada Movie Kannadakkagi Ondannu Otthi starring Chikkanna, Avinash Shathamarshan, Krishi Thapanda, Lyrics penned by Yogaraj Bhat Sung by Shreya Ghoshal, Music Composed by Arjun Janya, film is Directed by Kushal and film is released on 2018